ಕಲ್ಪ ಮೀಡಿಯಾ ಹೌಸ್ | ಸ್ಯಾಂಡಲ್ ವುಡ್ ನ್ಯೂಸ್ |
ಸಹಜ ಅಭಿನಯದ ನಟ ಅಚ್ಯುತ್ ಕುಮಾರ್ ಅವರು ಪ್ರಪ್ರಥಮ ಬಾರಿಗೆ ನಾಯಕ ನಟರಾಗಿ ಅಭಿನಯಿಸಿರುವ ಚಿತ್ರ ಫೋರ್ ವಾಲ್ಸ್ ಟೂ ನೈಟೀಸ್ ಚಿತ್ರದ ಟೀಸರ್ ಹಾಗೂ ಲಿರಿಕಲ್ ಸಾಂಗ್ ಮೂಲಕ ಸಖತ್ ಸೌಂಡ್ ಮಾಡಿತ್ತು. ಇಂದು ಮತ್ತೆ ವೀಡಿಯೋ ಸಾಂಗ್ ಬಿಡುಗಡೆ ಮೂಲಕ ಸುದ್ದಿಯಾಗಿದೆ.
ಫೋರ್ ವಾಲ್ಸ್ ಟೂ ನೈಟೀಸ್ ಚಿತ್ರವನ್ನು ಎಸ್.ಎಸ್. ಸಜ್ಜನ್ ಅವರು ನಿರ್ದೇಶಿಸಿದ್ದಾರೆ. ಇದೀಗ ವೀಡಿಯೋ ಸಾಂಗ್ಸ್ ಬಿಡುಗಡೆಯಾಗಿದ್ದು ಅಚ್ಯುತ್ ಅವರ ಆವಭಾವ ನವಯುವಕ ಝಲಕ್ ಅನ್ನು ಮೂಡಿಸುತ್ತಿದೆ. ಅವರ ಪಾತ್ರ ಮತ್ತು ನೋಟ 80ರ ದಶಕದ ನಟರನ್ನು ನೆನಪಿಸುವಂತಿದೆ ಇನ್ನೂ ಕಣ್ಮಣಿಯಾಗಿ ಎಲ್ಲರನ್ನೂ ಸೆಳೆದಿರುವ ಡಾ.ಪವಿತ್ರಾ ಅವರು ಇದೇ ಮೊದಲ ಬಾರಿಗೆ ನಾಯಕಿಯಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಈಗಾಗಲೇ ರಂಗಭೂಮಿಯಲ್ಲಿ ಹಾಗೂ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಉಪಾಧ್ಯಾಯೆಯಾಗಿ ಹಲವು ಕಲಾವಿದರನ್ನು ವೃತ್ತಿ ರಂಗಭೂಮಿಗೆ ನೀಡಿದ್ದಾರೆ. ಈಗ ವಿಶೇಷವಾಗಿ ಈ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ.
ಹಾಗೆ ಚಿತ್ರದಲ್ಲಿ ಹಲವು ಕಲಾವಿದರ ದಂಡೆ ಇದ್ದು, ದತ್ತಣ್ಣ, ಸುಜಯ್ ಶಾಸ್ತ್ರಿ, ಭಾಸ್ಕರ್ ನೀನಾಸಂ, ಹಾಗೂ ಜಾನ್ಹವಿ ರಾಯಲ, ಶ್ರೇಯಾ ಶೆಟ್ಟಿ, ರಚನಾ ದಶರಥ್, ಕಿರಿಕ್ ಪಾರ್ಟಿ ಶಂಕರ್ ಸೇರಿದಂತೆ ಬಹು ತಾರಗಣವಿದೆ.
ಕಣ್ಮಣೀಯೆ ಕಣ್ಮಣೀಯೆ ಎಂಬ ಹಾಡಿಗೆ ಶ್ರೀ ತಲಗೇರಿ ಸಾಹಿತ್ಯ ಬರೆದಿದ್ದು ಮುದ ನೀಡುವಂತಿದೆ. ಆನಂದ ರಾಜಾವಿಕ್ರಮ್ ಅವರ ಸಂಗೀತ ಇಳಯರಾಜ ಅವರ ಹಾಡುಗಳನ್ನು ನೆನೆಪಿಸುವಂತಿದೆ. ಇನ್ನು ದೇವೇಂದ್ರ ರೆಡ್ಡಿ ಅವರ ಛಾಯಾಗ್ರಹಣವು ಮನೋಹರವಾಗಿ ಮೂಡಿಬಂದಿದೆ.
ಟಿ. ವಿಶ್ವನಾಥ್ ನಾಯ್ಕ್ ಚಿತ್ರದ ನಿರ್ಮಾಪಕರಾಗಿದ್ದು, ಫೆಬ್ರವರಿಯಲ್ಲಿ ತೆರೆಗೆ ತರಲು ಉತ್ಸುಕರಾಗಿದ್ದಾರೆ. ಇವರು ರಾಮ ರಾಮ ರೇ ಖ್ಯಾತಿಯ ಸತ್ಯ ಪ್ರಕಾಶ್ ಅವರ ಹೊಸದಾಗಿ ಆರಂಭಿಸಿರುವ ಸತ್ಯ ಡಿಸ್ಟ್ರಿಬ್ಯೂಟರ್ಸ್ ಮೂಲಕ ರಾಜ್ಯದಾದ್ಯಂತ ಚಿತ್ರವನ್ನು ವಿತರಣೆ ಮಾಡಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post