ಕಲ್ಪ ಮೀಡಿಯಾ ಹೌಸ್ | ಧಾರವಾಡ |
ಕೇಂದ್ರ ನಗರಾಭಿವೃದ್ಧಿ ಇಲಾಖೆಯ ಸ್ವಚ್ಛ ಸರ್ವೇಕ್ಷಣೆ ಅಭಿಯಾನದ #CleanSurveillanceCampaign ರಾಯಭಾರಿಯಾಗಿ ಖ್ಯಾತ ನಟ ಅನಿರುದ್ಧ ಜತ್ಕರ್ #ActorAnirudh ಹಾಗೂ ಗಾಯಕ ಪಂ.ಎಂ. ವೆಂಕಟೇಶ ಕುಮಾರ್ ಅವರುಗಳನ್ನು ನೇಮಿಸಲಾಗಿದೆ.
Also Read: ಅಪ್ಪು ಅಭಿಮಾನಿಗಳಿಗೆ ಮತ್ತೊಂದು ಗುಡ್ ನ್ಯೂಸ್! ಪುನೀತ್ ಕನಸಿನ ಗಂಧದಗುಡಿ ಫಸ್ಟ್ ಲುಕ್ ರಿವೀಲ್
ಈ ಕುರಿತಂತೆ ಅಧಿಕೃತ ಆದೇಶ ಹೊರಡಿಸಲಾಗಿದ್ದು, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯು ಕೇಂದ್ರ ನಗರಾಭಿವೃದ್ಧಿ ಇಲಾಖೆಯ ಸ್ವಚ್ಛ ಸರ್ವೇಕ್ಷಣೆ-2022ನೆಯ ಸಾಲಿನ ಅಭಿಯಾನದಲ್ಲಿ ಭಾಗವಹಿಸಿದ್ದು, ಈ ಅಭಿಯಾನಕ್ಕೆ ಹುಬ್ಬಳ್ಳಿ-ಧಾರವಾಡ #Hubli #Dharwad ರಾಯಭಾರಿಯನ್ನಾಗಿ ಇಬ್ಬರು ಗಣ್ಯರನ್ನು ನೇಮಿಸಲಾಗಿದೆ.
ಈ ಅಭಿಯಾನದಲ್ಲಿ ನಗರ ಸ್ವಚ್ಛತೆಗೆ ಪ್ರಾಮುಖ್ಯತೆ ನೀಡಲಾಗುತ್ತದೆ. ಸ್ವಚ್ಛತೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ ಉತ್ತಮ ರ್ಯಾಂಕಿಂಗ್ ಪಡೆಯುವ ನಿಟ್ಟಿನಲ್ಲಿ ಇವರನ್ನು ನೇಮಕ ಮಾಡಲಾಗಿದೆ. ಕಳೆದ ಬಾರಿ ಇದರ ರಾಯಭಾರಿಯಾಗಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ #PuneethRajkumar ಅವರು ಪ್ರತಿನಿಧಿಸಿದ್ದರು.
Also Read: ರಂಗೋಲಿಯಲ್ಲಿ ಮೂಡಿ ಬಂದ ಅಪ್ಪು!
ಇನ್ನು ಈ ಕುರಿತಂತೆ ಮಾತನಾಡಿದ ನಟ ಅನಿರುದ್ಧ, #Anirudhಕಳೆದ ಒಂದೂವರೆ ವರ್ಷದಿಂದ ಸ್ವಚ್ಛತೆಗಾಗಿ ನಾನೂ ಸಹಭಾಗಿ ಎಂಬ ಘೋಷವಾಕ್ಯದ ಮೂಲಕ ಸ್ವಚ್ಛತಾ ಅಭಿಯಾನವನ್ನು ನಡೆಸುತ್ತಾ ಬಂದಿದ್ದು, ನಮ್ಮ ಸುತ್ತಲಿನ ಪರಿಸರದಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು ಎಂಬುದೇ ಇದರ ಉದ್ದೇಶವಾಗಿದೆ ಎಂದಿದ್ದಾರೆ.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post