ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಹಳೇನಗರದ ಸರ್ಕಾರಿ ಉರ್ದು ಕಿರಿಯ ಪ್ರಾಥಮಿಕ ಶಾಲೆಯ ಅಭಿವೃದ್ಧಿಗೆ ಸಹಕಾರ ನೀಡಿದ ದಾನಿಗಳನ್ನು ಅಭಿನಂದಿಸಿ, ಕೃತಜ್ಞತೆ ಸಲ್ಲಿಸಲಾಯಿತು.
Also Read: ಮಾರ್ಚ್ 19ರಂದು ಸಾಧನೆಗಳ ಸರದಾರ ಡಾ.ಎಸ್.ವಿ. ಶಾಸ್ತ್ರಿಯವರಿಗೆ ಅಭಿನಂದನಾ ಸಮಾರಂಭ
ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯ ಶಿಕ್ಷಕಿ ಕೆ. ಕೋಕಿಲಾ ಅವರು, ಶಾಲೆಯ ಅಭಿವೃದ್ಧಿಗೆ ಹಾಗೂ ಮಕ್ಕಳ ಕಲಿಕೆಗೆ ಪೂರಕವಾದ ಸೌಕರ್ಯಗಳನ್ನು ಕಲ್ಪಿಸಿಕೊಟ್ಟಂತಹ ದಾನಿಗಳ ಕುರಿತು ಮಾತನಾಡಿ, ಕೃತಜ್ಞತೆ ಸಲ್ಲಿಸಿದರು.
ಪ್ರಮುಖವಾಗಿ ಶಾಲೆಯಲ್ಲಿನ ದಾಖಲಾತಿ ಹೆಚ್ಚಿಸಲು ತಾವು ಕೈಗೊಂಡ ಕ್ರಮಗಳ ಕುರಿತಾಗಿ ಅವರು ವಿವರವಾಗಿ ತಿಳಿಸಿದರು.
Also Read: ಗಂಧಧಗುಡಿ ಎಂಬ ಕಿರೀಟಕ್ಕೆ ಮುಕುಟಮಣಿ ಪುನೀತ್ : ಮಾಜಿ ಪ್ರಧಾನಿ ದೇವೇಗೌಡ
ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಎಸ್. ಬಸವರಾಜ್, ಸಿಆರ್’ಪಿ ಮುತ್ಹಾರ್‌ವುಲ್ಲ ಷರೀಫ್, ದಾನಿಗಳಾದ ಸಂಚಿ ಹೊನ್ನಮ್ಮ ಪ್ರೌಢಶಾಲೆಯ ಶಿಕ್ಷಕ ದಿವಾಕರ್ ಹಾಗೂ ಜಾಮಿಯಾ ಶಾದಿ ಮಹಲ್ ಅಧ್ಯಕ್ಷರಾದ ಮೊಹಮದ್ ಗೌಸ್ ಅವರುಗಳನ್ನು ಸನ್ಮಾನಿಸಲಾಯಿತು.
ಅಪೇಕ್ಷಾ ಮಂಜುನಾಥ್ ನಿರೂಪಿಸಿ, ಸ್ವಾಗತಿಸಿದರು. ಸಹ ಶಿಕ್ಷಕಿ ನಿರಾತ್ ಅತ್ಹಾರ್ ಸುಲ್ತಾನ ವಂದನಾರ್ಪಣೆ ನೆರವೇರಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post