ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಆರು ವಾರಗಳ ಕಾಲ ಚಿಕಿತ್ಸೆಗಾಗಿ ಜಾಮೀನು ಪಡೆದು ಹೊರಗೆ ಬಂದಿರುವ ರೇಣುಕಾಸ್ವಾಮಿ ಕೊಲೆ ಆರೋಪಿ ನಟ ದರ್ಶನ್ #ActorDarshan ಆಸ್ಪತ್ರೆಗೆ ದಾಖಲಾಗಿದ್ದು, ಅವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಲಾಗುತ್ತಿದೆ.
ಈ ಕುರಿತಂತೆ ಬಿಜಿಎಸ್ ಆಸ್ಪತ್ರೆಯ ವೈದ್ಯರು ಮಾಧ್ಯಮಗಳಿಗೆ ಮಾತನಾಡಿದ್ದು, ಸದ್ಯ ದರ್ಶನ್ ಅವರನ್ನು ಆಸ್ಪತ್ರೆಯ ವಿಐಪಿ ವಾರ್ಡ್’ನಲ್ಲಿ ದಾಖಲು ಮಾಡಲಾಗಿದೆ. ಎಲ್ಲ ರೀತಿಯ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಪ್ರಮುಖವಾಗಿ ಎಂಆರ್’ಐ ಸ್ಕ್ಯಾನಿಂಗ್ ಮಾಡಿ, ವರದಿ ಬಂದ ನಂತರ ಚಿಕಿತ್ಸೆಯನ್ನು ನಿರ್ಧಾರ ಮಾಡಲಾಗುತ್ತದೆ ಎಂದಿದ್ದಾರೆ.
ದರ್ಶನ್ ಅವರಿಗೆ ಎಡಗಾಲು ವೀಕ್ ಇದ್ದು, ಬೆನ್ನು ನೋವು, ಕಾಲು ಎಳೆತ ಇದೆ. ಅವರ ಎಡಗಾಲಿಗೆ ಸ್ಪರ್ಶದ ಅನುಭವ ಕಡಿಮೆ ಇದೆ. ಹೀಗಾಗಿ, ವಿವಿಧ ರೀತಿಯ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. 48 ಗಂಟೆಯಲ್ಲಿ ಎಲ್ಲ ವರದಿ ಬರಲಿದ್ದು, ಆನಂತರ ಚಿಕಿತ್ಸಾ ಕ್ರಮ ಮತ್ತು ಶಸ್ತ್ರಚಿಕಿತ್ಸೆಯ ಅಗತ್ಯತೆಯನ್ನು ನಿರ್ಧರಿಸುತ್ತೇವೆ ಎಂದಿದ್ದಾರೆ.
ಬಳ್ಳಾರಿಯಲ್ಲಿ ನಡೆಸಲಾಗಿರುವ ಪರೀಕ್ಷಾ ವರದಿಗಳು ನಮಗೆ ಲಭ್ಯವಿಲ್ಲ. ಹೀಗಾಗಿ, ಮತ್ತೆ ಪರೀಕ್ಷೆ ನಡೆಸುತ್ತಿದ್ದೇವೆ. ಸದ್ಯ ಅವರಿಗೆ ನೋವು ಹೆಚ್ಚಿರುವ ಕಾರಣ ಮಾತ್ರೆ, ಫಿಸಿಯೋಥೆರಪಿ ಹಾಗೂ ವಿಶ್ರಾಂತಿಗೆ ಸೂಚಿಸಲಾಗಿದೆ ಎಂದಿದ್ದಾರೆ.
ಬೆನ್ನು ನೋವಿನ ಚಿಕಿತ್ಸೆಗಾಗಿ ಆರು ವಾರಗಳ ಕಾಲ ಜಾಮೀನು ಪಡೆದಿರುವ ರೇಣುಕಾಸ್ವಾಮಿ ಕೊಲೆ ಪ್ರಕರಣದ ಎ2 ಆರೋಪಿ ನಟ ದರ್ಶನ್ ಇಂದು ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಗೆ ಕುಂಟುತ್ತಲೇ ದಾಖಲಾಗಿದ್ದಾರೆ.
ಬೆನ್ನು ನೋವಿನ ಚಿಕಿತ್ಸೆಗಾಗಿ ಜಾಮೀನು ಪಡೆದಿರುವ ದರ್ಶನ್ ಗುರುವಾರ ಬಳ್ಳಾರಿ ಜೈಲಿನಿಂದ ಹೊರಬಂದು, ಬೆಂಗಳೂರಿನಲ್ಲಿರುವ ತಮ್ಮ ಪತ್ನಿಯ ನಿವಾಸಕ್ಕೆ ತೆರಳಿದ್ದರು.
ನಿನ್ನೆ ತಮ್ಮ ಪುತ್ರನ ಜನ್ಮದಿನ ಆಚರಿಸಿ, ಇಂದು ಅಮಾವಾಸ್ಯೆ ಕಳೆಯುವ ಸಮಯಕ್ಕೆ ಆಸ್ಪತ್ರೆಗೆ ತೆರಳಿದ್ದಾರೆ. ಮಧ್ಯಾಹ್ನ 2 ಗಂಟೆ ಸುಮಾರಿಗೆ ಪೊಲೀಸ್ ಭದ್ರತೆಯೊಂದಿಗೆ ಮನೆಯಿಂದ ಹೊರಟಿದ್ದ ದರ್ಶನ್ 3 ಗಂಟೆ ವೇಳೆಗೆ ಆಸ್ಪತ್ರೆ ತಲುಪಿದರು. ಈ ವೇಳೆ ಪತ್ನಿ ವಿಜಯಲಕ್ಷ್ಮೀ ಕೂಡ ಜೊತೆಯಲ್ಲಿದ್ದರು.
ಆಸ್ಪತ್ರೆ ಆವರಣಕ್ಕೆ ಬಂದ ಬಳಿಕ ಕುಂಟುತ್ತಲೇ ನಟ ಧನ್ವೀರ್ ಕೈ ಹಿಡಿದು ಒಳಗೆ ತೆರಳಿದರು. ಈ ವೇಳೆ ದರ್ಶನ್ ಭೇಟಿಗಾಗಿ ನಟಿ ಅಮೂಲ್ಯ, ಪತ್ನಿ ಜಗದೀಶ್ ಸಹ ಧಾವಿಸಿದ್ದರು.
Also Read: ಶಿವಮೊಗ್ಗ | ಹಿಂದೂ ಸಂಪ್ರದಾಯದಂತೆ ಮುಸ್ಲಿಂ ಯುವಕನಿಂದ ಲಕ್ಷ್ಮೀ ಪೂಜೆ | ವ್ಯಾಪಕ ಮೆಚ್ಚುಗೆ
ದರ್ಶನ್ ಕುಟುಂಬಸ್ಥರು ಗುರುವಾರ ಸಂಜೆಯೇ ನರ ರೋಗ ತಜ್ಞ ಡಾ.ನವೀನ್ ಅವರಿಂದ ಬೆನ್ನು ನೋವಿನ ಕುರಿತು ಆರೋಗ್ಯ ಸಲಹೆ ಪಡೆದುಕೊಂಡಿದ್ದರು. ಮೊಬೈಲ್’ನಲ್ಲಿ ಎಂಆರ್’ಐ ಸ್ಕ್ಯಾನಿಂಗ್ ಪ್ರತಿ ಕಳುಹಿಸಿ ತಜ್ಞ ವೈದ್ಯರ ಅಭಿಪ್ರಾಯ ಪಡೆದುಕೊಂಡಿದ್ದರು ಎಂದು ಮೂಲಗಳಿಂದ ತಿಳಿದುಬಂದಿದೆ.
ಆಸ್ಪತ್ರೆ ಸುತ್ತಲೂ ಬಿಗಿ ಭದ್ರತೆ
ಇನ್ನು, ದರ್ಶನ್ ಚಿಕಿತ್ಸೆಗಾಗಿ ದಾಖಲಾಗುವ ಹಿನ್ನೆಲೆಯಲ್ಲಿ ಬಿಜಿಎಸ್ ಆಸ್ಪತ್ರೆ ಸುತ್ತಲೂ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ. ಆಸ್ಪತ್ರೆ ಮುಂಭಾಗ ಬ್ಯಾರಿಕೇಡ್ ಅಳವಡಿಸಿದ್ದು, ಕೆಎಸ್’ಆರ್’ಪಿ ತುಕಡಿಗಳನ್ನು ನಿಯೋಜಿಸಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post