ಕಲ್ಪ ಮೀಡಿಯಾ ಹೌಸ್ | ಹೊಸನಗರ(ಶಿವಮೊಗ್ಗ) |
ಆಕಸ್ಮಿಕವಾಗಿ ಮೈಮೇಲೆ ಬಿಸಿ ಟೀ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ 2 ವರ್ಷದ ಮಗು ಚಿಕಿತ್ಸೆ ಫಲಕಾರಿಯಾದೇ ಮೃತಪಟ್ಟ ಘಟನೆ ನಡೆದಿದೆ.
ಮೃತ ಮಗುವನ್ನು ಹೊಸನಗರ ತಾಲೂಕಿನ ನಗರ ಸಮೀಪದ ಹಿರಿಮನೆಯ ರಾಜೇಶ್ ಹಾಗೂ ಅಶ್ವಿನಿ ಪಾಟೀಲ್ ಎಂಬುವರ ಪುತ್ರ ಅಥರ್ವ ಮೃತಪಟ್ಟ ಬಾಲಕ ಎಂದು ಗುರುತಿಸಲಾಗಿದೆ.
ಕಳೆದ ಅ.24 ರ ಗುರುವಾರ ರಾಜೇಶ್ ಅವರ ಪಕ್ಕದ ಮನೆಯ ನಿವಾಸಿಯೋರ್ವರು ಮೃತಪಟ್ಟಿದ್ದರು. ರಾತ್ರಿ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಆಗಮಿಸಿದ್ದವರಿಗಾಗಿ, ರಾಜೇಶ್ ಮನೆಯವರು ಟೀ ಮಾಡಿ ಪಾತ್ರೆಯೊಂದರಲ್ಲಿ ಹಾಕಿ ತಮ್ಮ ಮನೆಯ ಜಗಲಿ ಮೇಲಿಟ್ಟಿದ್ದರು.
Also Read: ಶಿವಮೊಗ್ಗ | ಹಿಂದೂ ಸಂಪ್ರದಾಯದಂತೆ ಮುಸ್ಲಿಂ ಯುವಕನಿಂದ ಲಕ್ಷ್ಮೀ ಪೂಜೆ | ವ್ಯಾಪಕ ಮೆಚ್ಚುಗೆ
ಬಾಲಕ ಅಥರ್ವ ಆಟವಾಡುತ್ತ ಆಕಸ್ಮಿಕವಾಗಿ ಪಾತ್ರೆ ಹಿಡಿದು ಎಳೆದಿದ್ದಾನೆ. ಈ ವೇಳೆ ಬಿಸಿ ಟೀ ಆತನ ಮೈಮೇಲೆ ಬಿದ್ದಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಅಥರ್ವನಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಬಾಲಕ ಮೃತಪಟ್ಟಿದ್ದಾನೆ.
ಪುಟಾಣಿ ಕಂದಮ್ಮನ ದಾರುಣ ಅಂತ್ಯವು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟುವಂತೆ ಮಾಡಿದೆ. ಗ್ರಾಮದಲ್ಲಿ ನೀರವ ಮೌನ ಆವರಿಸುವಂತೆ ಮಾಡಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post