ಬೆಂಗಳೂರು: ನಟ ಯಶ್ ಅವರನ್ನು ನೋಡಲು ಬಿಡಲಿಲ್ಲ ಎಂಬ ಕಾರಣದಿಂದ ಅವರ ಮನೆಯ ಮುಂದೆಯೇ ಬೆಂಕಿ ಹಚ್ಚಿಕೊಂಡಿದ್ದ ಅಭಿಮಾನಿ ರವಿ ಎಂಬಾತ ಇಂದು ಮೃತನಾಗಿದ್ದಾನೆ.
ಯಶ್ ಅವರ ಜನ್ಮದಿನಕ್ಕೆ ಶುಭ ಕೋರುವ ಸಲುವಾಗಿ ನೆಲಮಂಗಲದ ರವಿ ಎಂಬಾತ ಯಶ್ ಅವರ ನಿವಾಸದ ಬಳಿ ಬಂದ ಕೇಳಿದ್ದಾನೆ. ಆದರೆ, ಯಶ್ ಮನೆಯಲ್ಲಿ ಇಲ್ಲ ಎಂದು ತಿಳಿಸಿದರೂ, ಭೇಟಿಯಾಗಲೇ ಬೇಕು ಎಂಬ ಹಠಕ್ಕೆ ಬಿದ್ದಿದ್ದಾನೆ.
ಈ ವೇಳೆ ಯಶ್ ಭೇಟಿಗೆ ಅವಕಾಶ ದೊರೆಯಲಿಲ್ಲ ಎಂಬ ಕಾರಣದಿಂದ ಅವರ ನಿವಾಸದ ಮುಂದೆಯೇ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ. ಭಾಗಷಃ ಸುಟ್ಟುಕೊಂಡಿದ್ದ ಈತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತನಾಗಿದ್ದಾನೆ.
ಇನ್ನು, ಈ ಕುರಿತಂತೆ ನಿನ್ನೆ ಪ್ರತಿಕ್ರಿಯೆ ನೀಡಿದ್ದ ನಟ ಯಶ್, ಇದೇ ಕೊನೆ. ಇನ್ನು ಮುಂದೆ ಯಾವುದೇ ಅಭಿಮಾನಿ ಇಂತಹ ಕೃತ್ಯಕ್ಕೆ ಕೈ ಹಾಕಬಾರದು ಎಂದು ಮನವಿ ಮಾಡಿದ್ದಾರೆ.

















