ಬಹುಷಃ ನಮ್ಮ ಸನಾತನ ಧರ್ಮದ ಮೇಲಾದಷ್ಟು ದಾಳಿಗಳು, ದಬ್ಬಾಳಿಕೆಗಳು ಜಗತ್ತಿನ ಇನ್ನಾವುದೇ ಧರ್ಮದ ಮೇಲಾಗಿಲ್ಲ. ಆದರೂ, ಇಂದಿಗೂ ಸನಾತನ ಧರ್ಮವೇ ಜಗತ್ತಿನ ಅತ್ಯಂತ ಶ್ರೇಷ್ಠ ಧರ್ಮವಾಗಿ ಉಳಿದಿದೆ ಎಂದರೆ ಅದು ನಮ್ಮ ಧರ್ಮದ ಅಂತಃಸತ್ವ.
ಇನ್ನು, ಕಲಿಯ ಪ್ರಭಾವದಲ್ಲಿ ಧರ್ಮಗಳ ಮೇಲಿನ ದಾಳಿಗಳು ಹೆಚ್ಚಾಗಿ, ಅಧರ್ಮದ ಅಟ್ಟಹಾಸಗಳು ಮೇಲಾಗಿ, ಧರ್ಮಕ್ಕೆ ಸಂಚಕಾರ ಬಂದೊದಗುವ ಹಂತಕ್ಕೆ ಪರಿಸ್ಥಿತಿ ಬಂದರೂ ಸಹ ಅಂತಿಮ ಜಯ ಧರ್ಮದ್ದೇ ಹೊರತು ಅಧರ್ಮದ್ದಲ್ಲ ಎನ್ನುವುದನ್ನೂ ಸಹ ಹೇಳಬೇಕು.
ಸುಮ್ಮನೆ ದೇಶದಲ್ಲಿ ನಡೆಯುತ್ತಿರುವ ಒಂದೊಂದೇ ಘಟನೆಗಳನ್ನು ಗಮನಿಸುತ್ತಾ ಬನ್ನಿ.
ಅತ್ಯಂತ ಪ್ರಮುಖವಾಗಿ ಭಾರತ ಸಂವಿಧಾನದ ಅಡಿಯಲ್ಲಿರುವ ನ್ಯಾಯಾಂಗ ವ್ಯವಸ್ಥೆಯನ್ನು ಗೌರವಿಸುತ್ತಲೇ ಧರ್ಮದ ವಿಚಾರದಲ್ಲಿ ನ್ಯಾಯಾಲಯಗಳು ನೀಡುತ್ತಿರುವ ಹಲವು ತೀರ್ಪುಗಳ ಸನಾತನ ಧರ್ಮಕ್ಕೆ ಮಾರಕವಾಗಿ ಪರಿಣಮಿಸಿದ್ದು, ಇದರಿಂದ ಪ್ರಜೆಗಳ ನಮ್ಮದಿಗೆ ಭಂಗ ಬರುತ್ತಿದೆ.
ಅತ್ಯಂತ ಪ್ರಮುಖವಾಗಿ ಹಿಂದೂ ಧರ್ಮದ ಮೇಲಿನ ದಬ್ಬಾಳಿಕೆಗಳು, ದಾಳಿಗಳು ಹಾಗೂ ಸನಾತನ ಧರ್ಮಕ್ಕೆ ಅಪಚಾರ ಎಸಗುವ ಕೃತ್ಯಗಳು ಒಂದಿಲ್ಲೊಂದು ನಡೆಯುತ್ತಲೇ ಇವೆ. ಇದಕ್ಕೆ ಕಾಂಗ್ರೆಸ್ ಹಾಗೂ ಇದರ ಪ್ರಣೀತ ಎಡಪಂಥೀಯ ಪಕ್ಷಗಳು, ಬುದ್ದಿಜೀವಿಗಳು ನೀಡುತ್ತಿರುವ ಸಹಕಾರದಿಂದ ಧರ್ಮಕ್ಕೆ ಅಪಚಾರ ಮಾಡಿ, ವಿಕೃತ ಕೇಕೆ ಹಾಕಲಾಗುತ್ತಿದೆ.
ಶಬರಿಮಲೆ ವಿಚಾರದಲ್ಲಿ ನೋಡಿ… ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿರುವ ಸಂಪ್ರದಾಯವನ್ನು ಮುರಿದು, ಅದರ ಮೇಲೆ ದಬ್ಬಾಳಿಕೆ ಮಾಡಬೇಕು ಎಂಬ ಒಂದೇ ಉದ್ದೇಶದಿಂದ ನ್ಯಾಯಾಲಯಕ್ಕೆ ಹೋಗಲಾಯಿತು. ಇಲ್ಲಿ, ದೇವಾಲಯಕ್ಕೆ 10 ವರ್ಷದಿಂದ 60 ವರ್ಷದೊಳಗಿನ ಮಹಿಳೆಯರ ಪ್ರವೇಶ ನಿಷಿದ್ದ ಏಕೆ ಎಂಬುದನ್ನು ದೇವಾಲಯ ಮಂಡಳಿ ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡುವಲ್ಲಿ ಕೈ ಮೇಲಾಗಲಿಲ್ಲ ಎನ್ನುವುದು ಎಷ್ಟು ಸತ್ಯವೋ, ನ್ಯಾಯಾಲಯವೂ ಸಹ ವಾಸ್ತವ ಸ್ಥಿತಿ ಹಾಗೂ ಸಂಪ್ರದಾಯವನ್ನು ಹಾಗೂ ಭಕ್ತರ ಭಾವನಾತ್ಮಕ ವಿಚಾರಗಳನ್ನು ಅರ್ಥ ಮಾಡಿಕೊಳ್ಳದೇ ತೀರ್ಪು ನೀಡಿದೆ ಎಂಬುದೂ ಸಹ ಸತ್ಯ.
ತೀರಾ ಗಮನಿಸಬೇಕಾದ ಅಂಶವೆಂದರೆ, ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ ಎಂದ ಮಾತ್ರಕ್ಕೆ ಶಬರಿಮಲೆಗೆ ನುಗ್ಗುವ ಯತ್ನ ನಡೆಸುತ್ತಿರುವವರು ಯಾರು? ಯಾರಾದರೂ ಹಿಂದೂ ಸಂಪ್ರದಾಯಸ್ತ ಅಯ್ಯಪ್ಪ ಭಕ್ತ ಮಹಿಳೆಯರು ಯತ್ನಿಸುತ್ತಿದ್ದಾರೆಯೇ? ಇಲ್ಲ… ಮುಸ್ಲಿಂ ಹಾಗೂ ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದ ಯುವತಿಯರು ಹಿಂದೂ ಸಂಪ್ರದಾಯವನ್ನು ಮುರಿಯಲೇ ಬೇಕು ಎಂಬ ದುಷ್ಟ ಬುದ್ದಿಯಿಂದ ವಿಫಲ ಯತ್ನ ನಡೆಸಿದ್ದೇ ವಿನಾ ಇನ್ನಾವುದೇ ಕಾರಣದಿಂದ ಅಲ್ಲ..
ಧರ್ಮಶಾಸ್ತ, ಅಖಂಡ ಬ್ರಹ್ಮಚಾರಿ ಎಂದು ನಾಮಾಂಕಿತ ಹೊಂದಿರುವ ಅಯ್ಯಪ್ಪ ಸ್ವಾಮಿಗೆ ಭಕ್ತರ ಇರುಮುಡಿ ಎಂದರೆ ಅತ್ಯಂತ ಪ್ರೀತಿ. ಆದರೆ, ಮೊನ್ನೆ, ರೆಹೆನಾ ಫಾತಿಮಾ ಎಂಬ ಮುಸ್ಲಿಂ ಯುವತಿ ತಾನು ಇರುಮುಡಿ ಎಂದು ಹೊತ್ತು ತಂದಿದ್ದ ಕಟ್ಟಿನಲ್ಲಿ ಸ್ಯಾನಿಟರಿ ನ್ಯಾಪ್ ಕಿನ್‍ಗಳನ್ನು ಹೊತ್ತು ತಂದಿದ್ದಳು ಎಂಬ ವಿಚಾರ ಬೆಳಕಿಗೆ ಬಂದಿದ್ದು, ಎಂತಹ ವಿಕೃತಿ ಇವರಲ್ಲಿದೆ ಎಂಬುದು ತಿಳಿಯುತ್ತದೆ.
ಸಮೀರಾ ಎನ್ನುವ ಇನ್ನೊಬ್ಬ ಮುಸ್ಲಿಂ ಹೆಣ್ಣು ಅಯ್ಯಪ್ಪನ ಮುಂದೆ ತನ್ನ ಬಾಯ್ ಫ್ರೆಂಡ್ ಜೊತೆಯಲ್ಲಿ ಸೆಕ್ಸ್ ಮಾಡುತ್ತೇನೆ ಎಂದು ತನ್ನ ಫೇಸ್ ಬುಕ್‍ನಲ್ಲಿ ಬರೆದುಕೊಂಡಿದ್ದಾಳೆ. ಇಂದು ಧರ್ಮ ಶ್ರದ್ಧಾ ಭಕ್ತಿಯ ಕೇಂದ್ರದಲ್ಲಿ ಇಂತಹ ಕೃತ್ಯ ಮಾಡುತ್ತೇನೆ ಎಂದು ಈಕೆ ನೇರವಾಗಿ ಹೇಳಿಕೊಳ್ಳುತ್ತಾಳೆ, ಅಲ್ಲಿನ ಸರ್ಕಾರ ಇವಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂದಾದರೆ, ಹಿಂದೆ ಮುಸ್ಲಿಂ ಸಾಮ್ರಾಟರು ಭಾರತದ ಮೇಲೆ ದಾಳಿ ನಡೆಸಿ, ಮೆರೆದ ವಿಕೃತಿಗಳಿಗೂ ಇದಕ್ಕೂ ಏನೂ ವ್ಯತ್ಯಾಸ ಕಾಣುವುದಿಲ್ಲ.
ಇನ್ನು, ಕೇರಳ, ಕೊಡಗು ಹಾಗೂ ಉತ್ತರ ಭಾರತದಲ್ಲಿ ಸಂಭವಿಸಿದ ಪ್ರವಾಹ ಪರಿಸ್ಥಿತಿಗಳನ್ನು ನೋಡಿದರೆ ಎಲ್ಲವೂ ಸಹ ಪ್ರಕೃತಿ ಮುನಿಸೇ ಹೌದು. ಎಲ್ಲಿ ಪ್ರಕೃತಿ ಹಾಗೂ ಧರ್ಮಕ್ಕೆ ಸಂಚಕಾರ ಒದಗುತ್ತಿದೆಯೋ ಅಲ್ಲಿ ಪ್ರಕೃತಿ ತನ್ನ ರುದ್ರ ನರ್ತನ ತೋರುವುದು ನಿಶ್ಚಿತ.
ಮೊನ್ನೆ, ವಿಜಯದಶಮಿ ದಿನ ಅಮೃತಸರದಲ್ಲಿ ರಾವಣ ದಹನದ ವೇಳೆ ರೈಲು ಹರಿದು 62 ಮಂದಿ ಬಲಿಯಾಗಿದ್ದಾರೆ.
ತೀರಾ ರಾಜ್ಯದ ವಿಚಾರದಲ್ಲಿ ನೋಡುವುದಾದರೆ, ಸುದೀಪ್ ಹಾಗೂ ಶಿವರಾಜ್ ಕುಮಾರ್ ಅಭಿನಯದ ವಿಲನ್ ಚಿತ್ರದ ಯಶಸ್ಸಿಗಾಗಿ ಅವರ ಅಂದಾಭಿಮಾನಿಗಳು ಕೋಣ ಕಡಿದು ಅದರ ರಕ್ತದಿಂದ ಚಿತ್ರಕ್ಕೆ ಅಭಿಶೇಕ ಮಾಡಿ ವಿಕೃತಿ ಮೆರೆದಿದ್ದಾರೆ. ಇದು ನಿಜಕ್ಕೂ ಅಂದಾಭಿಮಾನದ ಪರಾಕಾಷ್ಟೆ ಹಾಗೂ ಧರ್ಮಕ್ಕೆ ಸಂಚಕಾರ ತರುವಂತಹ ಕೃತ್ಯದ ಭಾಗವೇ ಆಗಿದ್ದು, ನಾಗರಿಕ ಸಮಾಜ ಇದರಿಂದ ಧಕ್ಕೆಯಾಗುತ್ತದೆ ಎನ್ನುವುದು ಸತ್ಯ..
ಇದು ಆರಂಭವಷ್ಟೆ… ಮುಂದೆ ಕಾದಿದೆ ದೇಶಕ್ಕೆ ಭಾರೀ ಗಂಡಾಂತರ
ಅಕ್ಟೋಬರ್ 11ರಿಂದ ವೃಶ್ಚಿಕ ರಾಶಿಯಲ್ಲಿ ಅತಿಚಾರ ಗುರು ಸಂಚಾರ ಆರಂಭವಾಗಿದೆ. ಇದು ಇಡಿಯ ದೇಶವನ್ನೇ ಭಯಾನಕಗೊಳಿಸಿಯಾನು. ಯಾವ ಯಾವ ದುರ್ಬುದ್ಧಿ ಮನಗಳಿರುತ್ತದೋ ಅವರ ಮನಸ್ಸು ವಿಕೃತಗೊಂಡು ಮಾಡಬಾರದ್ದನ್ನು ಮಾಡಿ ದೇಶದ ಆಡಳಿತಕ್ಕೇ ಮಾರಕವಾದೀತು. ನೈಸರ್ಗಿಕ ಕುಂಡಲಿಯ ಮರಣ, ರಂದ್ರ ಸ್ಥಾನದ ಗುರುವಿನ ವೇಗವು ಹೆಚ್ಚಾಗಿ, ಅತಿಚಾರವಾಗುತ್ತೋ ಆಗ ಇಡಿ ಪ್ರಜೆಗಳಿಗೆ ಕಂಟಕವಾಗುತ್ತದೆ. ಮಾಡಬಾರದ್ದನ್ನು ಮಾಡಿಸುತ್ತಾನೆ ಈ ಗುರುವಿನ ಗೋಚರ ಫಲ.
ಮಾರ್ಚ್‍ವರೆಗಿರುವ ವೃಶ್ಚಿಕ ಸಂಚಾರದ ಆದಿಭಾಗದಲ್ಲೇ ಇದರ ಅನುಭವ ಆಗಿದೆ. ಇನ್ನೂ ಮಧ್ಯ ಭಾಗ ತಲುಪಿಲ್ಲ. ಈಗಲೇ ಶುರುವಾಗಿದೆ. ಇದು ಪ್ರಾರಂಭವಷ್ಟೆ. ಮುಂದೆ ಇನ್ನೂ ಭೀಕರ ದಿನಗಳು ದೇಶಕ್ಕೆ ಎದುರಾಗಲಿವೆ.
ದೇಶ ಏನೆಲ್ಲಾ ಪರಿಸ್ಥಿತಿಗಳನ್ನು ಎದುರಿಸುವ ಸಾಧ್ಯತೆಯಿದೆ?
-
ಅತಿಚಾರ ಗುರುವಿನ ಸಂಚಾರ 10 ಡಿಗ್ರಿ ತಲುಪಿದ ನಂತರ ದೇಶದಲ್ಲಿ ಅತ್ಯಂತ ಭೀಕರ ಘಟನೆಗಳು ನಡೆಯುುವುದು ನಿಶ್ಚಿತ
-
ಇದರ ಸಮಾರೋಪವನ್ನು ಪ್ರಕೃತಿಯು ಪೂರ್ವ ಕರಾವಳಿಯ ಭಾಗದಲ್ಲಿ, ಪಶ್ಚಿಮ ಕರಾವಳಿ ಭಾಗದಲ್ಲಿ ಪ್ರಕೃತಿಯು ಮುನಿದು ತಾಂಡವವಾಡಲಿಕ್ಕಿದ್ದಾಳೆ
-
ದೇಶದಲ್ಲಿ ಇಂತಹ ಪರಿಸ್ಥಿತಿಗಳು ತಾಂಡವವಾಡಿದರೂ ಸಜ್ಜನರು ಮೌನಕ್ಕೆ ಹೋಗಲಿದ್ದಾರೆ
-
ದೈವ ಭಕ್ತಿಯ ಬದಲು, ದೆವ್ವ ಹಿಡಿದು ವಿಕೃತರು ಕೇಕೆ ಹಾಕಲಿದ್ದಾರೆ
-
ಧರ್ಮದ ವಿರುದ್ದ ದೆವ್ವ ಸಂತಾನಗಳು ಕೇಕೆ ಹಾಕಿ ಗಹಗಹಿಸಲಿವೆ
-
ನ್ಯಾಯಾಲಯಗಳ ತೀರ್ಪುಗಳು ಪ್ರಜೆಗಳಿಗೆ ಮಾರಕವಾದೀತು
-
ಎಚ್ಚರಿಕೆ... ಎಚ್ಚರಿಕೆ... ಎಚ್ಚರಿಕೆ...
-ಪ್ರಕಾಶ್ ಅಮ್ಮಣ್ಣಾಯ,
ಜ್ಯೋರ್ತಿವಿಜ್ಞಾನಂ
Discussion about this post