ಗೋವಾ: ಸರಳತೆ, ಬದ್ಧತೆ ಹಾಗೂ ಪರಿಶ್ರಮಕ್ಕೆ ಹೆಸರಾದ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್, ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರೂ ಮೂಗಿಗೆ ಪೈಪ್ ಹಾಕಿಕೊಂಡೇ ಬಜೆಟ್ ಮಂಡಿಸಿದ್ದಾರೆ.
ಗೋವಾ ಮುಖ್ಯಮಂತ್ರಿ ಹಾಗೂ ಹಣಕಾಸು ಸಚಿವರೂ ಆಗಿರುವ ಪರಿಕ್ಕರ್, ಇಂದು ವಿಧಾನಸಭೆಯಲ್ಲಿ 2019-20ನೆಯ ಸಾಲಿನ ಬಜೆಟ್ ಮಂಡಿಸಿದ್ದು, ಆರೋಗ್ಯವನ್ನೂ ಲೆಕ್ಕಿಸದೇ ಕರ್ತವ್ಯ ನಿರ್ವಹಿಸಿದ್ದಾರೆ.
ಈ ವೇಳೆ ಮಾತನಾಡಿದ ಪರಿಕ್ಕರ್, ನಾನು ಅತ್ಯಂತ ಜೋಷ್‌ನಿಂದಲೇ ಬಜೆಟ್ ಮಂಡಿಸುತ್ತಿದ್ದೇನೆ. ಹೈ ಆನ್ ಜೋಷ್, ಫುಲ್ಲಿ ಇನ್ ಹೋಷ್ ಎಂದು ಹೇಳುವ ಮೂಲಕ ಪರಿಕ್ಕರ್ ಅವರು ಕಾಂಗ್ರೆಸ್ ಗೆ ತಿರುಗೇಟು ನೀಡಿದ್ದಾರೆ.
ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿರುವ ಪರಿಕ್ಕರ್, ವಿದೇಶದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ನಡುವೆಯೇ ಕರ್ತವ್ಯವನ್ನೂ ಸಹ ನಿರ್ವಹಿಸುತ್ತಿದ್ದಾರೆ. ಹೀಗಾಗಿ, ಎರಡು ದಿನಗಳ ಹಿಂದಷ್ಟೇ ಗೋವಾ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಗಿರೀಶ್ ಚೋಡನ್ಕರ್, ಪೆಹಲೇ ಹೋಷ್ ಮೇ ಆವೋ, ಬಾದ್ ಮೆ ಜೋಷ್ ಕಿ ಬಾತ್ ಕರೋ ಎಂದು ಟೀಕಿಸಿದ್ದರು.
ಈ ಹಿನ್ನೆಲೆಯಲ್ಲಿ ಮಾತನಾಡಿದ ಪರಿಕ್ಕರ್, ನನ್ನ ಕೊನೆಯ ಉಸಿರು ಇರುವವರೆಗೂ ಗೋವಾದ ರಾಜ್ಯದ ಜನತೆ ಪರವಾಗಿ ದುಡಿಯುತ್ತೇನೆ ಎಂದು ಭಾವನಾತ್ಮಕವಾಗಿ ಹೇಳಿದರು.
ಪರಿಕ್ಕರ್ ಅವರ ಕರ್ತವ್ಯ ಪರತೆಗೆ ದೇಶದಾದ್ಯಂತ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
Discussion about this post