ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗರದಲ್ಲಿ ಇಂದು ಒಂದೇ ಗಂಟೆಯ ಅವಧಿಯಲ್ಲಿ ಐದು ಕಡೆ ಸರಗಳ್ಳತನ ನಡೆದಿದ್ದು, ನಾಗರಿಕರಲ್ಲಿ ಆತಂಕಕ್ಕೆ ಕಾರಣವಾಗಿದೆ.
ದೊಡ್ಡಪೇಟೆ, ವಿನೋಬ ನಗರ ಹಾಗೂ ಕೋಟೆ ಠಾಣೆ ವ್ಯಾಪ್ತಿಯಲ್ಲಿ ಒಟ್ಟು ಐದು ಕಡೆ ಸರ ಹಾಗೂ ಮೊಬೈಲ್ ಕಳ್ಳತನ ಮಾಡಿರುವ ಘಟನೆ ನಡೆದಿದೆ.
ಎಲ್ಲೆಲ್ಲಿ ಘಟನೆ?
ಶರಾವತಿ ನಗರದ ಹೊಸಮನೆಯ ಚರ್ಚ್ ಬಳಿಯಲ್ಲಿ ಮಹಿಳೆಯೋರ್ವರು ನಡೆದುಕೊಂಡು ಹೋಗಬೇಕಾದರೆ ಚೈನ್ ಕದಿಯಲಾಗಿದೆ.
ಇನ್ನು, ಓಲ್ಡ್ ಬಾರ್ ಲೈನ್, ಸವಾರ್ ಲೈನ್ ರಸ್ತೆ, ವಿನೋಬ ನಗರದ ಸಾಮಿಲ್ ಲೈಔಟ್, ಪ್ರಿಯಾಂಕ ಲೇಔಟ್’ಗಳಲ್ಲಿ ಸರಗಳ್ಳತನ ಹಾಗೂ ಮೊಬೈಲ್ ಕಳ್ಳತನ ಮಾಡಲಾಗಿದೆ.
ಸವಾರ್ ಲೈನ್ ಬಳಿ ಪೊಲೀಸ್ ಕುಟುಂಬದ ಮಹಿಳೆಯೊಬ್ಬರು ಬೈಕ್’ನಲ್ಲಿ ಬರುವಾಗ ಕಳ್ಳರು ಬ್ಯಾಗ್ ಕಸಿದು ಪರಾರಿಯಾಗಿದ್ದಾರೆ. ಬ್ಯಾಗ್’ನಲ್ಲಿ ಎಂಟು ಸಾವಿರ ನಗದು ಹಾಗೂ 11 ಸಾವಿರ ರೂ. ಮೌಲ್ಯದ ಮೊಬೈಲ್ ಇತ್ತು ಎಂದು ಮಹಿಳೆ ದೂರಿದ್ದಾರೆ.
ಒಂದೇ ಗಂಟೆಯ ಅವಧಿಯೊಳಗೆ ಶಿವಮೊಗ್ಗದಲ್ಲಿ ಐದು ಕಡೆ ಸರಗಳ್ಳತನ ನಡೆದಿರುವುದು ನಗರದಲ್ಲಿ ಆತಂಕಕ್ಕೆ ಕಾರಣವಾಗಿದೆ. ಈ ಎಲ್ಲಾ ಕೃತ್ಯಗಳನ್ನು ಒಂದೇ ಗ್ಯಾಂಗ್ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post