No Result
View All Result
KRCS Shikaripura Achieves 100% Result in CBSE Class X Board Exams
English Articles

KRCS Shikaripura Achieves 100% Result in CBSE Class X Board Exams

by ಕಲ್ಪ ನ್ಯೂಸ್
April 16, 2026
0

Kalpa Media House  |  Shikaripura | Kumadvathi Residential Central School (KRCS), Shikaripura, has achieved a 100% pass result in the...

Read moreDetails
ಬೆಂಗಳೂರು–ಬಂಗಾರಪೇಟೆ ಮೆಮು ರೈಲುಗಳಿಗೆ ತಾತ್ಕಾಲಿಕ ನಿಲುಗಡೆ

Cancellation of Ashokapuram – KSR Bengaluru MEMU trains

April 16, 2026
First VALORANT Campus Cup Champions Crowned

First VALORANT Campus Cup Champions Crowned

April 15, 2026
Welfare Impossible Without Dharma; Upholding Righteousness is Everyone’s Duty: Yadugiri Yatiraja Swamiji

Welfare Impossible Without Dharma; Upholding Righteousness is Everyone’s Duty: Yadugiri Yatiraja Swamiji

April 13, 2026
Berger Paints Responds to India’s Heat Challenge with ‘Garmi Gone, Thandak On’ Home Cooling Solutions Range

Berger Paints Responds to India’s Heat Challenge with ‘Garmi Gone, Thandak On’ Home Cooling Solutions Range

April 13, 2026
  • Advertise With Us
  • Grievances
  • About Us
  • Contact Us
Wednesday, April 29, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ಅಲ್ಕಟ್ರಾಸ್-ಆಗ ಜೈಲು, ಈಗ ಬಯಲು: ಈ ದ್ವೀಪದ ಬಗ್ಗೆ ನೀವು ತಿಳಿಯಲೇಬೇಕು

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
December 19, 2019
in Special Articles
0
ಅಲ್ಕಟ್ರಾಸ್-ಆಗ ಜೈಲು, ಈಗ ಬಯಲು: ಈ ದ್ವೀಪದ ಬಗ್ಗೆ ನೀವು ತಿಳಿಯಲೇಬೇಕು
Share on FacebookShare on TwitterShare on WhatsApp

ಅಮೆರಿಕಾದ ಕ್ಯಾಲಿಫೋರ್ನಿಯಾ ರಾಜ್ಯದ ಸ್ಯಾನ್ ಫ್ರಾನ್ಸಿಸ್ಕೋ ನಗರದ ಸಮುದ್ರ ತೀರದ ಸನಿಹವಿರುವ ಪುಟ್ಟ ದ್ವೀಪ.

ಸಾವಿರಾರು ವರ್ಷ ಯಾರೂ ವಾಸಿಸದ ದ್ವೀಪ ಪ್ರದೇಶ. ಬುಡಕಟ್ಟುಗಳಾದ ಓಲೋನ್ ಮತ್ತು ಮಿವಾಕ್ ಇಂಡಿಯನ್ಸ್‌ ಅವರು ಆಗಾಗ್ಗೆ ಅಲ್ಲಿಗೆ ಭೇಟಿ ಕೊಡುತ್ತಿದ್ದರಷ್ಟೆ. ಹತ್ತಿರದ ಕರಾವಳಿಯಲ್ಲಿ ಸ್ಪ್ಯಾನಿಷ್ ವಸತಿ ಬರುವ ತನಕ ಅಂದರೆ 1776ರವರೆಗೂ ಹಾಗೆಯೇ ಇತ್ತು.

ಯಾಂಕಿಗಳು ಮೆಕ್ಸಿಕನ್ನರಿಂದ ಆ ದ್ವೀಪವನ್ನು 1846ರಲ್ಲಿ ಪಡೆದರು. ಕೊನೆಯ ಮೆಕ್ಸಿಕನ್ ಗವರ್ನರ್ ಅಲ್ಲಿ ದೀಪಸ್ತಂಭ ನಿರ್ಮಿಸಲು ಯೋಜಿಸಿದರು. ಅಷ್ಟರೊಳಗೆ ಕ್ಯಾಲಿಫೋರ್ನಿಯಾ ಅಮೆರಿಕಾಕ್ಕೆ ಸೇರ್ಪಡೆಯಾಯಿತು.


ಹಠಾತ್ತನೆ ನಡೆದ ಚಿನ್ನದ ಶೋಧನೆಯ(Gold Rush) ಫಲವಾಗಿ ಅಲ್ಲಿಗೆ ಬೇರೆಬೇರೆ ಕಡೆಯಿಂದ ಜನ ಸಕ್ಕರೆಗೆ ನೊಣ ಮುತ್ತುವಂತೆ ಬಂದರು. 1948ರ ಈ ಘಟನೆ ಕ್ಯಾಲಿಫೋರ್ನಿಯಾದ ಬದುಕಿನ ಗತಿಯನ್ನೇ ಬದಲಾಯಿಸಿತು.

ಕೇವಲ 300 ಮಂದಿ ವಸತಿ ಹೊಂದಿದ್ದ ಸ್ಯಾನ್ ಫ್ರಾನ್ಸಿಸ್ಕೋ ಊರು 20,000 ಜನ ಬಾಹುಳ್ಯ ಹೊಂದಿತು.

ಚಿನ್ನದ ಗಣಿಗಳ ಆರಂಭ ಗಣನೀಯವಾಗಿ ಹೆಚ್ಚಿತು. ಅದಕ್ಕೆ ಪೂರಕವಾಗಿ ಸರಕು ಸರಂಜಾಮು ಸಾಗಿಸಲು ಹಡಗುಗಳ ಸಂಖ್ಯೆಯೂ ಅಧಿಕಗೊಂಡು ಸಾಗರ ಪ್ರಯಾಣ ಕಿಕ್ಕಿರಿದಿತು. ದೀಪಸ್ತಂಭದ ನಿರ್ಮಾಣವಾಯಿತು. ಆ ಜಾಗ ಪುಟ್ಟ ಕೋಟೆಯಂತೆ ರಕ್ಷಿಸಲ್ಪಟ್ಟಿತು.


ಸ್ಯಾನ್ ಫ್ರಾನ್ಸಿಸ್ಕೋ.. ಶಾಲೆಗಳು, ಚರ್ಚುಗಳು, ವಸತಿ ಕಟ್ಟಡಗಳು ಹೀಗೆ ಪಟ್ಟಣ ರೂಪ ಪಡೆಯಿತು.

1861ರಲ್ಲಿ ಶುರುವಾದ ಅಮೆರಿಕನ್ ಸಿವಿಲ್ ಯುದ್ಧದ ಪರಿಣಾಮವಾಗಿ ಕರಾವಳಿ ತೀರದ ಪುಟ್ಟ ದ್ವೀಪ ಮತ್ತೆ ನಾಗರಿಕವಾಗಿ ಬಳಸಲ್ಪಟ್ಟಿತು. ಅಲ್ಲಿನ ಆಯಕಟ್ಟಿನ ಫಿರಂಗಿಗಳನ್ನು ನಿಲ್ಲಿಸಲಾಯಿತು.

(ದ್ವೀಪದಲ್ಲಿರುವ ವೀಕ್ಷಣಾ ಗೋಪುರ)
(ಅಗ ಬಳಸಿದ ಫಿರಂಗಿ)

ಆಗಿನ ಯುದ್ದದ ಅಗತ್ಯಕ್ಕೆ ತಕ್ಕಂತೆ 400 ಮಂದಿ ಸುಸಜ್ಜಿತ ಯೋಧಪಡೆಯನ್ನು ಅಲ್ಲಿ ನೆಲೆಗೊಳಿಸಲಾಯಿತು. ವಿವಿಧ ಫಿರಂಗಿಗಳನ್ನೂ ಸಜ್ಜುಗೊಳಿಸಲಾಗಿತ್ತು. ಕ್ರಮೇಣ ಆಧುನಿಕ ಶಸ್ತ್ರಾಸ್ತ್ರಗಳು ಬಂದಂತೆ ಅಲ್ಲಿನ ಫಿರಂಗಿಗಳು ಬಳಸದೇ ಉಳಿದವು. 1907ರ ತನಕ ಅಲ್ಕಟ್ರಾಸ್’ನಲ್ಲಿನ ರಕ್ಷಣಾ ವ್ಯವಸ್ಥೆ ನಿರುಪಯುಕ್ತವಾಗುಳಿಯಿತು.

(ಕಾರಾಗೃಹದ ಬೃಹತ್ ಕಟ್ಟಡ)

ಏನೆಂದರೂ ಈ ದ್ವೀಪ ದೀರ್ಘಕಾಲ ಕಾರಾಗೃಹವಾಗಿಯೂ ಬಳಕೆಯಲ್ಲಿತ್ತು. 1859ರಲ್ಲಿ 11 ಮಂದಿಯ ಸೈನ್ಯಪಡೆ ರಕ್ಷಣೆಗೆ ನಿಯೋಜಿಸಲ್ಪಟ್ಟಿತು. ನಂತರ ಯುದ್ಧದ ಸಮಯದಲ್ಲಿ ವಿವಿಧ ಅಪರಾಧಗಳಿಂದ ಬಂಧಿಯಾದವರೂ ಇದ್ದರು. 1907ರಲ್ಲಿ ಅಲ್ಲಿಂದ ಸೇನಾನೆಲೆಯನ್ನು ಸ್ಥಳಾಂತರ ಮಾಡಲಾಯಿತು. ಆ ಸ್ಥಳವನ್ನು ಕೈದಿಗಳಿಗೆಂದೇ ಮೀಸಲಿರಿಸಲಾಗಿತ್ತು. ಹೆಚ್ಚಾದ್ದರಿಂದ ಕಾಂಕ್ರೀಟ್’ನಲ್ಲಿ ಬಂಧಿಖಾನೆಗಳನ್ನು ನಿರ್ಮಿಸಲಾಯಿತು. 1915ರಲ್ಲಿ ಈ ಸ್ಥಳವನ್ನು ಯು ಎಸ್ ಸೇನಾ ಶಿಸ್ತು ಗೃಹ ಸಮುಚ್ಚಯ, ಪೆಸಿಫಿಕ್ ಶಾಖೆ ಎಂದು ಕರೆದರು.

(ಬಂಧಿಖಾನೆ)
(ಬಂಧಿಖಾನೆ)

1934 ರಲ್ಲಿ ಯುಎಸ್’ನ ಕಾರಾಗೃಹ ಇಲಾಖೆಗೆ ಹೆಚ್ಚುತ್ತಿರುವ ಅಪರಾಧಿಗಳ ಸಂಖ್ಯೆ ಮತ್ತು ಜೈಲಿನ ಕೊರತೆ ಅಧಿಕವಾಯಿತು. ಅಪರಾಧಿಗಳು ಸುಲಭವಾಗಿ ತಪ್ಪಿಸಿಕೊಳ್ಳಲಾಗದ ತಾಣಕ್ಕೆ ಹುಡುಕಿದರು. ಅಲ್ಕಟ್ರಾಸ್ ದ್ವೀಪ, ತೀವ್ರತರ ದರೋಡೆ, ಕೊಲೆ, ಮುಂತಾಗಿ ಅಪರಾಧಗೈದವರ ನೆಲೆಯಾಯಿತು. ಅಷ್ಟು ಸುಭದ್ರತೆಯಿದ್ದರೂ ಅಪರಾಧಿಗಳು ಏನೇನೋ ಉಪಾಯದಿಂದ ಜೈಲಿನ ಸಿಬ್ಬಂದಿಗಳ ಕಣ್ತಪ್ಪಿಸಿ ಪಾರಾಗುವ ಪ್ರಯತ್ನ ನಡೆಸಿದ್ದಾರೆ.

(ಬಂಧಿಖಾನೆ)
(ಕೈದಿಗಳಿಗೆ ಅಡುಗೆ ಮನೆ ಮತ್ತು ಪರಿಕರಗಳು)

ಅವುಗಳಲ್ಲಿ ಅತ್ಯಂತ ರೋಚಕವೆಂದರೆ 1962ರಲ್ಲಿ ಫ್ರಾಂಕ್ ಮೊರಿಸ್, ಆಂಗ್ಲಿನ್ ಸಹೋದರರು ಜೈಲಿನ ಗಾಳಿ ಕಿಟಕಿಯನ್ನು ಕಿತ್ತು ಓಡಿಹೋದ ಪ್ರಸಂಗ. ಯಾರ ಕೈಗೂ ಸಿಗದೇ ರೈನ್ ಕೋಟನ್ನೇ ಹೊಲಿದು ಗಾಳಿತುಂಬಿ ತೇಲಿಕೊಂಡು ಪಾರಾದರು. ಇದಕ್ಕೆ ಅವರು ನಿರ್ವಹಣೆ ತಯಾರಿಯನ್ನೇ ಆಧರಿಸಿ ಒಂದು ಸಾಕ್ಷ್ಯಚಿತ್ರವನ್ನೂ ನಿರ್ಮಿಸಲಾಗಿದೆ. ಹಾಸಿಗೆ ದಿಂಬಿನ ಮೇಲೆ ಕೃತಕ ತಲೆಗಳನ್ನು ನಿರ್ಮಿಸಿ ಲೆಕ್ಕಕ್ಕೆ ಒಬ್ಬರು ಮಲಗಿದಂತೆ ಕಾಣುವಂತೆ ನಂಬಿಸಿ ಚಮತ್ಕಾರದಿಂದ ಓಡಿ ಹೋದರು. ಅಲ್ಕಟ್ರಾಸ್ ಚರಿತ್ರೆಯಲ್ಲೇ ಇದು ದಂತಕತೆಯಾಗಿಬಿಟ್ಟಿದೆ.

(ಕೈದಿಗಳಿಗೆ ಅಡುಗೆ ಮನೆ ಮತ್ತು ಪರಿಕರಗಳು)

ಸುಧಾರಿತ ಹಾಗೂ ಆಧುನಿಕ ಜೈಲುಗಳ ಕಲ್ಪನೆ ಬಂದು ಕೊಂಪೆಯೆನಿಸುವ ಇಲ್ಲಿನ ಕಾರಾಗೃಹವನ್ನು ಆಗಿನ ಅಟಾರ್ನಿ ಜನರಲ್ ಆಗಿದ್ದ ರಾಬರ್ಟ್ ಎಫ್ ಕೆನಡಿ ಮುಚ್ಚುವಂತೆ ಆದೇಶ ಹೊರಡಿಸಿದರು.

(ಒಂದು ಕೈದಿಯ ಸೆಲ್, ಪಾರಾಗಲು ಕಿಂಡಿ ನಿರ್ಮಿಸಿದ್ದನ್ನು ಕಾಣಬಹುದು)

ಈಗ ಅಲ್ಕಟ್ರಾಸ್. ನ್ಯಾಷನಲ್ ಪಾರ್ಕ್ ಯೋಜನೆಗೊಳಪಟ್ಡಿದೆ. ಸುತ್ತಲೂ ಏಳುವ ಪೆಸಿಫಿಕ್ ಸಾಗರದ ಅಲೆಗಳಿಂದಾಗಿ ಆಕರ್ಷಣೀಯವಾಗಿದೆ. ಅಲ್ಲಿನ ಸೆಲ್’ಗಳಲ್ಲಿ ಬಂಧಿಯಾಗಿದ್ದವರ ಫೋಟೋ ಸಹಿತ ಮಾಹಿತಿಗಳಿವೆ. ಕೈದಿಗಳ ಪುಸ್ತಕಾಲಯ, ಸ್ನಾನದ ಮನೆ, ಅಡುಗೆ ಮನೆ, ಊಟದ ಮನೆ, ಅವರಿಗೆ ನೀಡುತ್ತಿದ್ದ ಉಡುಪುಗಳು, ಟವಲ್, ಹೊದಿಕೆ. ಶೇವಿಂಗ್ ಬ್ರಶ್, ತಟ್ಟೆ, ಲೋಟ, ಚಮಚ ಫೋರ್ಕುಗಳು… ಹೀಗೆ ಎಲ್ಲವಕ್ಕೂ ಮ್ಯೂಸಿಯಂ ಮಾದರಿ ಪ್ರದರ್ಶನಕ್ಕಿಟ್ಟಿದ್ದಾರೆ.

ನಮಗೆ ಅಲ್ಲಿ ಸುಮಾರು ನಲವತ್ತೈದು ನಿಮಿಷದ ಶ್ರವಣಯಾನ ಸೌಲಭ್ಯವಿದೆ(Audio Tour). ಆಯಾ ಜಾಗದ ಮಾಹಿತಿಗಳನ್ನು ಕಿವಿಗೆ ಕೇಳಿಸಿಕೊಳ್ಳುತ್ತಾ, ಕೈದಿಗಳ ಧ್ವನಿಯೊಂದಿಗೆ ಇತರ ಶಬ್ದ ಪರಿಣಾಮಗಳ ಮೂಲಕ ಅಂದಿನ ಪರಿಸರಕ್ಕೆ ಹೋದ ಅನುಭವ ನಮಗಾಗುತ್ತದೆ.

Get in Touch With Us info@kalpa.news Whatsapp: 9481252093

Tags: Alka Trans PrisonAudio TourCaliforniaDr Channagiri SudheendraIslandprisonPrisonerSan FranciscoSpecial ArticleUnited States of Americaಅಮೆರಿಕಾಅಲ್ಕಟ್ರಾಸ್ಕಾರಾಗೃಹಕೈದಿಕ್ಯಾಲಿಫೋರ್ನಿಯಾಡಾ.ಚನ್ನಗಿರಿ ಸುಧೀಂದ್ರದ್ವೀಪ
Share208Tweet123Send
Previous Post

ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸುವುದೇ ನಮ್ಮ ಗುರಿ: ಕಾಗೋಡು ತಿಮ್ಮಪ್ಪ ಗುಡುಗು

Next Post

ಬಿಎಂಟಿಸಿ ಮಹಿಳಾ ಕಂಡಕ್ಟರ್ ಮೇಲೆ ಆಸಿಡ್ ದಾಳಿ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ಬಿಎಂಟಿಸಿ ಮಹಿಳಾ ಕಂಡಕ್ಟರ್ ಮೇಲೆ ಆಸಿಡ್ ದಾಳಿ

ಬಿಎಂಟಿಸಿ ಮಹಿಳಾ ಕಂಡಕ್ಟರ್ ಮೇಲೆ ಆಸಿಡ್ ದಾಳಿ

Leave a Reply Cancel reply

Your email address will not be published. Required fields are marked *

  • Trending
  • Latest
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

April 3, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

March 12, 2026
ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

January 16, 2026
ಭಾರತವು ವಿಶ್ವಗುರು ಸ್ಥಾನ ಅಲಂಕರಿಸಲು ಮೂಲಶಕ್ತಿ ವೇದವ್ಯಾಸರು | ವಿದ್ಯೇಶತೀರ್ಥ ಶ್ರೀಗಳ ಅಭಿಮತ

ಭಾರತವು ವಿಶ್ವಗುರು ಸ್ಥಾನ ಅಲಂಕರಿಸಲು ಮೂಲಶಕ್ತಿ ವೇದವ್ಯಾಸರು | ವಿದ್ಯೇಶತೀರ್ಥ ಶ್ರೀಗಳ ಅಭಿಮತ

April 28, 2026
ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

April 28, 2026
ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಸಾಮೂಹಿಕ ನಕಲು ಹೇಳಿಕೆ ಖಂಡನೀಯ: ಕೆ.ಪಿ.ಶ್ರೀಪಾಲ್

ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಸಾಮೂಹಿಕ ನಕಲು ಹೇಳಿಕೆ ಖಂಡನೀಯ: ಕೆ.ಪಿ.ಶ್ರೀಪಾಲ್

April 28, 2026
ಓಪನ್ ಮೈಂಡ್ಸ್ ಶಾಲೆಯಲ್ಲಿ ಕೆ-12 ಸೂಪರ್ ಇಂಟೆಲಿಜೆನ್ಸ್ ಪಠ್ಯಕ್ರಮ: ಕಿರಣ್‍ಕುಮಾರ್

ಓಪನ್ ಮೈಂಡ್ಸ್ ಶಾಲೆಯಲ್ಲಿ ಕೆ-12 ಸೂಪರ್ ಇಂಟೆಲಿಜೆನ್ಸ್ ಪಠ್ಯಕ್ರಮ: ಕಿರಣ್‍ಕುಮಾರ್

April 28, 2026
ನಿರಂತರ ಪ್ರಯತ್ನವೇ ಯಶಸ್ಸಿನ ಸೂತ್ರ: ಡಾ. ಪಿ. ನಾರಾಯಣ

ನಿರಂತರ ಪ್ರಯತ್ನವೇ ಯಶಸ್ಸಿನ ಸೂತ್ರ: ಡಾ. ಪಿ. ನಾರಾಯಣ

April 28, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL