ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ನಮ್ಮ ಭಾರತೀಯ ಸಂಸೃತಿಯಲ್ಲಿ ತುಂಬಾ ಶ್ರೇಷ್ಠವಾದ ಹಬ್ಬ ಮಹಾ ಶಿವರಾತ್ರಿ . ಈ ದಿನ ಎಲ್ಲರು ಕೂಡ ಉಪವಾಸ ಮಾಡಿ , ಶಿವನ ಧ್ಯಾನ ಮಾಡುತ್ತ ರಾತ್ರಿ ಇಡೀ ಜಾಗರಣೆ ಮಾಡಿಕೊಂಡು, ಸಕಲ ಸಂಕಷ್ಟಗಳ ನಿವಾರಣೆಗಾಗಿ ಮಾಡುವ ವ್ರತ.
ಶಿವನಿಗೆ ಬಿಲ್ವ ಪತ್ರೆ ಆರಾಧನೆ ಬಹಳ ಪ್ರಿಯವಾದದ್ದು . 108 ಬಾರಿ ” ಓಂ ನಮಃ ಶಿವಾಯ ” ಎಂದು ಧ್ಯಾನ ಮಾಡಿದ್ದಲ್ಲಿ ನಮ್ಮ ಮನಸಿಗೆ ನೆಮ್ಮದಿ ಶಾಂತಿ ಏಕಾಗ್ರತೆ ಆತ್ಮ ಸ್ಥೈರ್ಯ , ಅರೋಗ್ಯ , ಅಯಷು , ಆಲೋಚನಾ ಶಕ್ತಿ ಮಾನಸಿಕವಾಗಿ ಒತ್ತಡ ಕಡಿಮೆ ಇನ್ನು ಹಲವಾರು ಉಪಯೋಗಗಳಿವೆ .
ಓಂ ಕಾರ ನಾದಕ್ಕೆ ಜಗತ್ತಿನ ಅತ್ಯುತ್ತಮ ವೈಜ್ಞಾನಿಕ ಸಂಸ್ಥೆ ನಾಸಾ ಸಂಸ್ಥೆಯು ಕೂಡ ಓಂಕಾರ ಶಬ್ದ ಕೇಳುವುದರಿಂದ ಮತ್ತು ಹೇಳುವುದರಿಂದ ಆತ್ಮ ಶಕ್ತಿ ಮತ್ತು ಮನೋ ವಿಕಾಸ ವೃದ್ಧಿಸುತ್ತದೆ ಎಂದು ಹೇಳಿದೆ .
ನಮ್ಮ ಪೂರ್ವಜರು ಮತ್ತು ಋಷಿ ಮುನಿಗಳು ನಮಗೆ ಕೊಟ್ಟಿರುವ ಎಲ್ಲಾ ಹಬ್ಬಗಳ ವಿಶೇಷತೆ ಮತ್ತು ಅದರ ಮಹತ್ವವನ್ನು ತಿಳಿದುಕೊಂಡು ನಮ್ಮ ಮುಂದಿನ ಪೀಳಿಗೆಗೆ ತೆಗೆದುಕೊಂಡು ಹೋಗಬೇಕಾಗಿದೆ.
ದೇವಸ್ಥಾನಗಳಿಗೆ ಕುಟುಂಬ ಸಮೇತರಾಗಿ ಹೋಗುವುದರಿಂದ ಕುಟುಂಬದ ಸಾಮರಸ್ಯ ಇನ್ನಷ್ಟು ವೃದ್ಧಿಯಾಗುತ್ತದೆ ಕುಟುಂಬದಲ್ಲಿ ನೆಮ್ಮದಿ ಬಂದು ಮನಸ್ತಾಪಗಳು ಕ್ರಮೇಣ ಕಡಿಮೆಯಾಗುತ್ತದೆ ಅಂತಹ ಶಕ್ತಿ ಅದ್ಯಾತ್ಮಿಕದಿಂದ ಕಂಡುಕೊಳ್ಳಬಹುದಾಗಿದೆ.
ಆಧ್ಯಾತ್ಮಕ ಶಕ್ತಿ ಅನ್ನುವುದು ನಮ್ಮಲ್ಲಿ ಇದ್ದಲ್ಲಿ ಜಗತ್ತಿನ ಯಾವ ಮೂಲೆಗೆ ಹೋದರು ಸಾಧಿಸುವ ಛಲವು ನಮ್ಮಒಡನೆ ಬರುತ್ತದೆ. ಶ್ರೀ ಶಿವಕುಮಾರ ಸ್ವಾಮಿಯವರು ಸಹ ಇದೆ ಮಾರ್ಗದಲ್ಲಿ ಬಂದು ಈಗ ಜಗತ್ ಪ್ರಸಿದ್ದಿ ಆಗಿರುವುದು ನಮ್ಮ ಕಣ್ಣ ಮುಂದೆಯೇ ಇದೆ ,ಅದೇ ದಾರಿಯಲ್ಲಿ ಈಗಿನ ಯುವ ಸಮೂಹ ಕೂಡ ಹೋಗಬೇಕಾಗಿದೆ.
ಹಿಂದೂ ಧರ್ಮದ ಎಲ್ಲ ಹಬ್ಬಗಳಿಗೂ ಸಹ ವೈಜ್ಞಾನಿಕವಾಗಿ ಮಹತ್ವವನ್ನು ಪಡೆದುಕೊಂಡಿದೆ. ಅದಕ್ಕಾಗಿಯೇ ಹಿಂದುತ್ವ ಇಂದು ಜಗತ್ತಿನ ಮೂಲೆ ಮೂಲೆಗಳಿಗೆ ತಲುಪಿ ವಿಶ್ವ ಗುರುವಿನ ಸ್ಥಾನದಲ್ಲಿ ಕುಳಿತುಕೊಂಡಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post