ನವದೆಹಲಿ: ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಪ್ರಕರಣದಲ್ಲಿ ವರ್ಮಾ ಅವರ ಉತ್ತರ ಸೋರಿಕೆಯಾಗಿರುವ ಕುರಿತಾಗಿ ಕೆಂಡಾಮಂಡಲವಾಗಿ ಸುಪ್ರೀಂ ಕೋರ್ಟ್ ಚಾಟಿ ಬೀಸಿದೆ.
ಈ ಕುರಿತಂತೆ ಸಿಜೆಐ ರಂಜನ್ ಗೊಗೋಯ್ ನೇತೃತ್ವದ ಮೂವರು ನ್ಯಾಯಾಧೀಶರ ಪೀಠ ಇಂದು ವಿಚಾರಣೆ ನಡೆಸಿದ್ದು, ಕೇಂದ್ರ ಸರ್ಕಾರ ತಮ್ಮ ವಿರುದ್ಧ ಕೈಗೊಂಡಿರುವ ಕ್ರಮವನ್ನು ಪ್ರಶ್ನಿಸಿ ಅಲೋಕ್ ವರ್ಮಾ ಸಲ್ಲಿಸಿರುವ ಅರ್ಜಿಯ ಬಗ್ಗೆ ಕೇಂದ್ರ ಜಾಗೃತ ಆಯೋಗ ನಡೆಸಿದೆ. ಈ ತನಿಖೆಯ ವಿವರ ಹಾಗೂ ವರ್ಮಾ ಅವರ ಉತ್ತರ ನ್ಯೂಸ್ ವೆಬ್ ಸೈಟ್ ಒಂದರಲ್ಲಿ ಪ್ರಕಟಗೊಂಡಿದೆ. ಅಂದರೆ, ಅದು ಮಾಧ್ಯಮಕ್ಕೆ ಸೋರಿಕೆಯಾಗಿದೆ ಎಂದು ಸುಪ್ರೀಂ ಕಿಡಿ ಕಾರಿದೆ.
ಪ್ರಕರಣದ ಮುಂದಿನ ವಿಚಾರಣೆಯಲ್ಲಿ ನ.29ಕ್ಕೆ ನಿಗದಿಪಡಿಸಲಾಗಿದೆ.
Discussion about this post