ಕಲ್ಪ ಮೀಡಿಯಾ ಹೌಸ್ | ಅಮರಾವತಿ |
ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು #CM Chandrababu Naidu ಸೇಡಿನ ರಾಜಕಾರಣ ಮಾಡುತ್ತಿದ್ದಾರೆ. ಬಹುತೇಕ ಪೂರ್ಣಗೊಂಡಿದ್ದ ವೈಎಸ್ ಆರ್ ಸಿಪಿ #YSRCP ಕೇಂದ್ರ ಕಚೇರಿಯನ್ನು ಸರ್ವಾಧಿಕಾರಿಯಂತೆ ಯಂತ್ರಗಳು ಮತ್ತು ಬುಲ್ಡೋಜರ್‌ಗಳಿಂದ ಕೆಡವಿದ್ದಾರೆ ಎಂದು ಜಗನ್ ಮೋಹನ್ ರೆಡ್ಡಿ #Jaganmohan Reddy ಕಿಡಿಕಾರಿದ್ದಾರೆ.
Also read: ಆಧುನಿಕ ಜೀವನ ಶೈಲಿಯ ಒತ್ತಡಗಳಿಂದ ಹೊರಬರಲು ಯೋಗ ಸಹಕಾರಿ: ದಿವ್ಯಾ ನಾರಾಯಣ್ ಅಭಿಪ್ರಾಯ
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು, ಚಂದ್ರಬಾಬು ನಾಯ್ಡು ನೇತೃತ್ವದ ಎನ್‌ಡಿಎ ರಾಜ್ಯ ಸರ್ಕಾರ ಗುಂಟೂರು ಜಿಲ್ಲೆಯ ತಾಡೆಪಲ್ಲಿಯಲ್ಲಿ ನಿರ್ಮಾಣ ಹಂತದಲ್ಲಿರುವ ವಿರೋಧ ಪಕ್ಷದ ಕೇಂದ್ರ ಕಚೇರಿಯನ್ನು ಧ್ವಂಸಗೊಳಿಸಿದೆ. ಹೈಕೋರ್ಟ್ ಆದೇಶವನ್ನು ಧಿಕ್ಕರಿಸಿ ಕಟ್ಟಡವನ್ನು ನೆಲಸಮಗೊಳಿಸಲಾಗಿದೆ ಎಂದು ರೆಡ್ಡಿ ಆರೋಪಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post