ನವದೆಹಲಿ: ಕನ್ನಡ ಚಿತ್ರರಂಗ ಮಾತ್ರವಲ್ಲ ಇಡಿಯ ಭಾರತೀಯ ಚಿತ್ರರಂಗದಲ್ಲೇ ಹೆಸರು ಮಾಡಿದ್ದ ಹಿರಿಯ ನಟ ಅಂಬರೀಶ್ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ.
ಈ ಕುರಿತಂತೆ ಟ್ವೀಟ್ ಪ್ರಧಾನಿ ಕಾರ್ಯಾಲಯದಿಂದ ಟ್ವೀಟ್ ಮಾಡಲಾಗಿದ್ದು, ಚಿತ್ರರಂಗಕ್ಕೆ ಹಾಗೂ ರಾಜಕೀಯ ಕ್ಷೇತ್ರದ ಮೂಲಕ ದೇಶಕ್ಕೆ ಅಂಬರೀಶ್ ನೀಡಿರುವ ಕೊಡುಗೆ ಅಜರಾಮರವಾದುದು ಎಂದಿದ್ದಾರೆ.
Shri Ambareesh will always be remembered for his memorable performances as an actor and extensive contribution to politics. He was a strong voice for Karnataka’s welfare, at the state and central level. Pained by his demise. Condolences to his family & admirers: PM @narendramodi
— PMO India (@PMOIndia) November 25, 2018
ಕರ್ನಾಟಕದ ಪರವಾಗಿ ಅವರ ಧ್ವನಿ ಎಂದಿಗೂ ದೊಡ್ಡ ಮಟ್ಟದ್ದಾಗಿದ್ದು, ರಾಜ್ಯ ಹಾಗೂ ಕೇಂದ್ರ ಸರ್ಕಾರಗಳೊಂದಿಗೆ ಬಾಂಧವ್ಯ ಹೊಂದಿದ್ದರು. ಅವರ ಕುಟುಂಬಕ್ಕೆ ದುಃಖ ತಡೆದುಕೊಳ್ಳುವ ಶಕ್ತಿ ದೊರೆಯಲಿ ಎಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.
Discussion about this post