ಕಲ್ಪ ಮೀಡಿಯಾ ಹೌಸ್ | ಅಮೆರಿಕ |
ಇರಾನ್ ಯುದ್ಧ Iran War “ಅಂತ್ಯದ ಹಂತಕ್ಕೆ ಸಮೀಪಿಸಿದೆ” ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ Donald Trump ಅವರು ಹೇಳಿಕೆ ನೀಡಿದ್ದು, ಈ ಹೇಳಿಕೆ ವಿಶ್ವದ ಗಮನವನ್ನು ಸೆಳೆದಿದೆ.
ನ್ಯೂಯಾರ್ಕ್ ಪೋಸ್ಟ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಟ್ರಂಪ್ ಅವರು, ಮುಂದಿನ 2 ದಿನಗಳಲ್ಲಿ ಏನಾದರೂ ಸಂಭವಿಸಬಹುದು, ನಾವು ಅಲ್ಲಿಗೆ ಹೋಗಲು ಸಿದ್ಧರಾಗಿದ್ದೇವೆ’ ಎಂದು ಹೇಳಿದ್ದು, ಪಾಕಿಸ್ತಾನದ ಸೇನಾ ನಾಯಕತ್ವದ ಪಾತ್ರವನ್ನು ಮೆಚ್ಚಿದ್ದಾರೆ.
ಟ್ರಂಪ್ ಈ ಹೇಳಿಕೆ ಶಾಂತಿ ಸ್ಥಾಪನೆ ಬಗ್ಗೆ ಸ್ವಲ್ಪ ಮಟ್ಟಿನ ಆಶಾವಾದ ಮೂಡಿಸಿದರೂ, ನೆಲಮಟ್ಟದಲ್ಲಿ ನಡೆಯುತ್ತಿರುವ ಸೈನಿಕ ಕ್ರಮಗಳು ಮತ್ತು ಆರ್ಥಿಕ ಒತ್ತಡಗಳು ಪರಿಸ್ಥಿತಿಯನ್ನು ಇನ್ನೂ ಅಸ್ಥಿರವಾಗಿಯೇ ಉಳಿಯುವಂತೆ ಮಾಡಿದೆ.
ವಾರಾಂತ್ಯದಲ್ಲಿ ನಡೆದ ಮಾತುಕತೆಗಳು ನಿರೀಕ್ಷಿತ ಫಲಿತಾಂಶ ನೀಡದಿದ್ದರೂ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೆ ಸಂಧಾನ ಮಾತುಕತೆಯ ಸುಳಿವು ನೀಡಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 





















