ಕಲ್ಪ ಮೀಡಿಯಾ ಹೌಸ್ | ಆನವಟ್ಟಿ |
ನಾನು ರಾಷ್ಟ್ರಭಕ್ತ ಮುಸ್ಲಿಂರನ್ನು ಗೌರವಿಸುತ್ತೇನೆ. ಕ್ರೈಸ್ತ, ಮುಸ್ಲಿಂ, ಹಿಂದು ಎಲ್ಲರೂ ಅಣ್ಣತಮ್ಮರಿಂದಂತೆ. ಆದರೆ ರಾಷ್ಟ್ರ ದ್ರೋಹಿಗಳು, ಅತ್ಯಚಾರಿಗಳು, ಭಯೋತ್ಪಾದಕ ಮುಸ್ಲಿಂರನ್ನು ದ್ವೇಷಿಸುತ್ತೇನೆ. ಲವ್ ಜಿಹಾದ್ ಹೆಸರಲ್ಲಿ ಹಿಂದು ಮಹಿಳೆಯರನ್ನು ಕೊಲೆ ಮಾಡುವ ಮುಸ್ಲಿಮರಿಗೆ ಶಿಕ್ಷೆಯಾಗುವವರೆಗೂ ಬಿಡುವುದಿಲ್ಲ ಎಂದು ಲೋಕಸಭೆ ಚುನಾವಣೆ ಪಕ್ಷೇತರ ಅಭ್ಯರ್ಥಿ ಹಾಗೂ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ #K S Eshwarappa ಗುಡುಗಿದರು.
ಭಾನುವಾರ ಇಲ್ಲಿನ ಇಂಡಿಯನ್ ಪೆಟ್ರೋಲ್ ಬಂಕ್ ಆವರಣದಲ್ಲಿ ರಾಷ್ಟ್ರಭಕ್ತರ ಬಳಗ ಹಮ್ಮಿಕೊಂಡಿದ್ದ ಕೆ.ಎಸ್, ಈಶ್ವರಪ್ಪ ಅವರ ಮತಯಾಚನೆಯ ಬಹಿರಂಗ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.
ನರೇಂದ್ರ ಮೋದಿ #Narendra Modi ಅವರು ಕಾಂಗ್ರೆಸ್ ಸೊನಿಯಾ ಗಾಂಧಿ, #Sonia Gandhi ರಾಹುಲ್ ಗಾಂಧಿ #Rahul Gandhi ಅವರ ಕುಟುಂಬ ರಾಜಕರಣ ಅಂತ್ಯಗೊಳಿಸುವ ಶಪಥ ಮಾಡಿದ್ದಾರೆ. ಆದರೆ ಕರ್ನಾಟಕದಲ್ಲಿ ಬಿಜೆಪಿ ತೊರೆದು, ಮೋದಿ, ಅಮಿತ್ ಶಾ #Amith Shah ಅವರನ್ನು ಮನಸ್ಸಿಗೆ ಬಂದಂತೆ ಬೈದು, ಮತ್ತೆ ಬಿಜೆಪಿ ಸೇರಿ ತನ್ನ ಕುಟುಂಬದ ಹಿಡಿತದಲ್ಲಿ ಪಕ್ಷವನ್ನು ಇಟ್ಟುಕೊಂಡಿರುವ ಯಡಿಯೂರಪ್ಪ ಅವರು ತಮ್ಮ ಸ್ವಾರ್ಥ ರಾಜಕರಣಕ್ಕೆ ಅಪ್ಪಟ ಹಿಂದುವಾದಿ ನಾಯಕರನ್ನು ಮೂಲೆಗುಂಪು ಮಾಡಿ ತನ್ನಗೆ ಬೇಕಾದವರಿಗೆ ಬಿಜೆಪಿ ಟಿಕೆಟ್ ಕೂಡಿಸಿದ್ದಾರೆ. ರಾಘವೇಂದ್ರ ಅವರನ್ನು ಸೋಲಿಸಿ, ಕುಟುಂಬ ರಾಜಕರಣಕ್ಕೆ ಅಂತ್ಯಕಾಣಿಸುವುದೇ ನನ್ನ ಗುರಿ ಎಂದು ಯಡಿಯೂರಪ್ಪ ಕುಟುಂಬದ ಮೇಲೆ ಹರಿಹಾಯ್ದರು.
ಸಿದ್ದರಾಮಯ್ಯ #Siddaramaiah ಗ್ಯಾರಂಟಿ ಹೆಸರಲ್ಲಿ ರಾಜ್ಯದ ಖಾಜಾನೆ ಕಾಲಿ ಮಾಡಿದ್ದಾರೆ. ಕೇಂದ್ರದಲ್ಲಿ ಕಾಂಗ್ರೆಸ್ ಬಂದರೆ ಐದು ಗ್ಯಾರಂಟಿ ಜನರಿಗೆ ನೀಡುತ್ತೇವೆ ಎಂದು ನೀಡಿರುವ ಕಾರ್ಡ್ ಎಲ್ಲಾ ಹಸಿಸುಳ್ಳು ಅವುಗಳನ್ನು ಸುಟ್ಟು ಹಾಕಿ ಎಂದರು.
ಬಡವರ ಹೆಸರಲ್ಲಿ ರಾಜಕರಣ ಮಾಡುವ ಕಾಂಗ್ರೆಸ್ , ಬಿಜೆಪಿ ಬಡವರಿಗೆ ಏನು ಅನುಕೂಲ ಮಾಡಿಲ್ಲ. ನಾನು ಉಪಮುಖ್ಯಮಂತ್ರಿಯಾಗಿದ್ದಾಗ ಶಿವಮೊಗ್ಗದ ಸಾಕಾಷ್ಟು ಬಡವರಿಗೆ ಅನುಕೂಲ ಮಾಡಿಕೊಟ್ಟಿದ್ದೇನೆ. ಮಠ, ಮಂದಿರಗಳಿಗೆ ಅನುದಾನ ಕೂಡಿಸಿದ್ದೇನೆ. ಆದರೆ ಸೊರಬ ತಾಲ್ಲೂಕಿನಲ್ಲಿ 35 ವರ್ಷದಿಂದ ಬಗರ್ ಹುಕಂ, ಅರಣ್ಯ ವಾಸಿಗಳಿಗೆ ಹಕ್ಕು ಪತ್ರ ನೀಡುತ್ತೇವೆ ಎಂದು ಹೇಳುತ್ತಲ್ಲೇ ಜನರಿಗೆ ಮೋಸ ಮಾಡಿದ್ದಾರೆ. ಎಲ್ಲಾ ಜಾತಿ ಧರ್ಮದಲ್ಲೂ ಬಡವರಿದ್ದಾರೆ. ಅವರಿಗೆ ನ್ಯಾಯ ಒದಗಿಸುವುದೇ ನನ್ನ ಮೊದಲ ಕೆಲಸ ಎಂದರು.
ಬಂಗಾರಪ್ಪ ಅವರನ್ನು ಕಂಡರೇ ನನಗೆ ತುಂಬ ಗೌರವ, ಕಾರಣ ಅವರು ಬಡವರ ಪರ ಚಿಂತನೆ ಮಾಡುತ್ತಿದ್ದರು ಮತ್ತು ಬಡವರ ಪರ ಯೋಜನೆಗಳನ್ನು ಜಾರಿಗೆ ತಂದಿದ್ದರು ಎಂದ ಅವರು ಅವರ ಮಕ್ಕಳಾದ ಕುಮಾರ್ ಬಂಗಾರಪ್ಪ, ಮಧು ಬಂಗಾರಪ್ಪ ಅವರ ಕಚ್ಚಾಟದಿಂದ ಸೊರಬ ಕ್ಷೇತ್ರ ಅಭಿವೃಧಿಯಾಗಿಲ್ಲ. ಸಂಪೂರ್ಣ ನೀರಾವರಿ ಕಲ್ಪಿಸಲು ಸಾಧ್ಯವಾಗಿಲ್ಲ. ಇನ್ನೂ ಅವರ ಪುತ್ರಿ ಗೀತಾ ಶಿವಕುಮಾರ್ ಏನು ಮಾಡಬಹುದು ಎಂದು ನೀವೆ ಯೋಚಿಸಿ ಎಂದರು.
ಬಿಜೆಪಿ ನನಗೆ ತಾಯಿ ಇದ್ದಂತೆ, ನಾನು ಬಿಜೆಪಿ ಬಿಟ್ಟು ಎಲ್ಲೂ ಹೋಗಲ್ಲ. ಲೋಕಸಭೆ ಚುಣಾವಣೆಯಲ್ಲಿ ಗೆದ್ದು ಮತ್ತೆ ಬಿಜೆಪಿ ಕೈಹಿಡಿಯುತ್ತೇನೆ. ಯಡಿಯೂರಪ್ಪ ಕುಟುಂಬ ನನ್ನ ಬಗ್ಗೆ ಇಲ್ಲಸಲ್ಲ ವಂಧತಿ ಹರಡಿಸಿದ್ದರು. ಆದರೆ ಪಕ್ಷವನ್ನು ಶುದ್ಧೀಕರಿಸುವ ತಪಸ್ಸು ಕೈಗೊಂಡಿದ್ದೇನೆ. ದೇಶಕ್ಕೆ ಮೋದಿ, ಶಿವಮೊಗ್ಗಕ್ಕೆ ನಿವೇ ಕರೆಯುವಂತೆ ಹಿಂದೂ ಹುಲಿ ಕೆ.ಎಸ್ ಈಶ್ವರಪ್ಪ, ನನ್ನ ಕಬ್ಬು ಹಿಡಿದ ರೈತನ ಗುರುತಿಗೆ ಮತ ನೀಡುವಂತೆ ಮನವಿ ಮಾಡಿದರು.
ಬಹಿರಂಗ ಸಮಾವೇಶದಲ್ಲಿ ಆನವಟ್ಟಿ ಘಟಕದ ರಾಷ್ಟ್ರ ಭಕ್ತರ ಬಳಗದ ಅಧ್ಯಕ್ಷ ರಾಮಾನಾಯ್ಕ ಕೋಟಿಪುರ, ಸದಸ್ಯರಾದ ಕೇಶವ ನಾಯ್ಕ, ಸಂಜೀವ್ ನಾಯ್ಕ, ಪ್ರಶಾಂತ ನೆಲ್ಲಿಕೊಪ್ಪ ಮುಖಂಡರಾದ ವಿಠ್ಠಲ್ ಬನ್ನಿ, ಟಿ.ವಿ ಬೆಳಗಾವಿ, ಎನ್‍ವೀರಪ್ಪ, ಮೂಗಡಪ್ಪ, ಸುಜಾತ ಕಳ್ಳಿಕೇರಿ, ದುರ್ಗಪ್ಪ ಅಂಗಡಿ, ದಾನಪ್ಪ ಗಂಟೇರ್, ಪ್ರಭಾಕರ್ ರಾಯ್ಕರ್, ಚಿದಾನಂದಗೌಡ, ಮಂಜುನಾಥ ಸಾಗರ, ಹೇಮಾರವಿ, ವಕೀಲ ಶಿವಪ್ಪ ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post