ಭದ್ರಾವತಿ: ಶ್ರೀಲಕ್ಷ್ಮೀ ನರಸಿಂಹಸ್ವಾಮಿ ದೇವಾಲಯ ಮತ್ತು ಕೂಡ್ಲಿ ಶ್ರೀ ನರಸಿಂಹಸ್ವಾಮಿ ದೇವಾಲಯದ ಚಿತ್ರಗಳಿರುವ 5 ರೂ ಮುಖಬೆಲೆಯ ವಿಶೇಷ ಅಂಚೆ ಲಕೋಟೆ ಪ್ರದರ್ಶನವನ್ನು ನ್ಯೂಟೌನ್ ವಿಐಎಸ್‌ಎಲ್ ಕಾರ್ಖಾನೆ ಮುಂಭಾಗದ ಪ್ರಧಾನ ಅಂಚೇ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿತ್ತು.
ಹೊಯ್ಸಳರ ಕಾಲದ ಶ್ರೀ ಲಕ್ಷ್ಮೀ ನರಸಿಂಹ ದೇವಾಲಯ ಹಾಗೂ ಕೂಡ್ಲಿಯ ಶ್ರೀ ಲಕ್ಷ್ಮೀ ನರಸಿಂಹ ದೇವಾಲಯಕ್ಕೆ ಗೌರವ ಆದ್ಯತೆ ನೀಡುವ ಸಲುವಾಗಿ ಅಂಚೆ ಇಲಾಖೆಯಿಂದ ಹೊರತಂದಿರುವ ಬಿಡುಗಡೆ ಮಾಡಲಾಗಿದ್ದು, ಈ ಮೂಲಕ ಐತಿಹಾಸಿಕ ದೇವಾಲಯಕ್ಕೆ ವಂದನೆ ಸಲ್ಲಿಸಲಾಗಿದೆ.
ಕಾರ್ಯಕ್ರಮದಲ್ಲಿ ಅಂಚೆ ಕಚೇರಿಯ ಶಿವಮೊಗ್ಗ ವಿಭಾಗದ ಅಧಿಕಾರಿಗಳಾದ ಚಂದ್ರನ್, ಶ್ರೀನಿವಾಸ್, ಪ್ರಧಾನ ಅಂಚೆ ಕಚೇರಿಯ ಉಷಾ, ವೆಂಕಟೇಶ್, ಬಸವರಾಜ್ ಹಾಗೂ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ದೇವಾಲಯದ ಪ್ರಧಾನ ಅರ್ಚಕ ರಂಗನಾಥ ಶರ್ಮ ಇನ್ನಿತರರು ಭಾಗವಹಿಸಿದ್ದರು.
(ವರದಿ: ಆರ್.ವಿ. ಕೃಷ್ಣ, ಭದ್ರಾವತಿ)
Discussion about this post