ಕಲ್ಪ ಮೀಡಿಯಾ ಹೌಸ್
ನವದೆಹಲಿ: ತುಮಕೂರು ಹಾಗೂ ಶಿವಮೊಗ್ಗ ನಡುವಿನ ರಾಷ್ಟ್ರೀಯ ಹೆದ್ದಾರಿ 206ನ್ನು ಚತುಷ್ಪಥ ಹೆದ್ದಾರಿಯನ್ನಾಗಿ ಅಭಿವೃದ್ಧಿ ಪಡಿಸಲು ಅನುಮೋದನೆ ನೀಡಲಾಗಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
For Karnataka –
Revised cost estimate proposal of 4-Laning of 4 section of road between Tumkur-Shivamogga Stretch of NH-206 in the State of Karnataka on Hybrid Annuity Mode (HAM) under Bharatmala Pariyojana has been approved. #PragatiKaHighway— Nitin Gadkari (@nitin_gadkari) April 2, 2021
ಈ ಕುರಿತಂತೆ ಟ್ವೀಟ್ ಮಾಡಿರುವ ಅವರು, ಭರತಮಾಲಾ ಪರಿಯೋಜನ ಅಡಿಯಲ್ಲಿ ಕರ್ನಾಟಕ ರಾಜ್ಯದಲ್ಲಿ ಹೈಬ್ರಿಡ್ ಆನ್ಯೂಟಿ ಮೋಡ್ (ಎಚ್‌ಎಎಂ) ನಲ್ಲಿ ಎನ್ಎಚ್ -206 ರ ತುಮಕೂರು-ಶಿವಮೊಗ್ಗ ವಿಸ್ತಾರದ ನಡುವಿನ 4 ವಿಭಾಗದ ರಸ್ತೆಯ 4-ಲ್ಯಾನಿಂಗ್ ಪರಿಷ್ಕೃತ ವೆಚ್ಚ ಅಂದಾಜು ಪ್ರಸ್ತಾಪವನ್ನು ಅನುಮೋದಿಸಲಾಗಿದೆ ಎಂದಿದ್ದಾರೆ.
ಈ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು, ತುಮಕೂರು-ಶಿವಮೊಗ್ಗ ನಡುವಿನ 4 ವಿಭಾಗದ ಚತುಷ್ಪಥ ಹೆದ್ದಾರಿ ನಿರ್ಮಾಣಕ್ಕೆ ಅನುಮೋದನೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ.
Thank you PM @narendramodi Ji & Union Min @nitin_gadkari Ji for approving construction of 4 lane NH under #BharatMala proj between Tumakuru & Shivamogga at a total cost of Rs 6397.47 Crs. This will ease congestion & ensure quicker connectivity to Malnad region. #PragatiKaHighway https://t.co/ZguZVN00bL
— CM of Karnataka (@CMofKarnataka) April 3, 2021
6397.47 ಕೋಟಿ ರೂ. ವೆಚ್ಚದ ಈ ಯೋಜನೆಯಿಂದ ಬೆಂಗಳೂರಿನಿಂದ ಮಲೆನಾಡು ಭಾಗದ ಸಂಪರ್ಕ ಇನ್ನಷ್ಟು ಸುಗಮವಾಗಲಿದೆ ಎಂದು ಎಂದು ಅಭಿಪ್ರಾಯಪಟ್ಟಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post