ಕಲ್ಪ ಮೀಡಿಯಾ ಹೌಸ್ | ಅರಳಿಹಳ್ಳಿ(ಭದ್ರಾವತಿ) |
ಪರೀಕ್ಷೆಯಲ್ಲಿ ಕೇವಲ ಉತ್ತೀರ್ಣರಾದರೆ ಸಾಲದು, ವಿದ್ಯಾಭ್ಯಾಸ ಮುಂದುವರೆಸಿ, ತಾಂತ್ರಿಕ ಕೋರ್ಸ್ ಮಾಡಿ ಪೋಷಕರಿಗೆ, ಶಿಕ್ಷಕರಿಗೆ ಹಾಗೂ ಶಾಲೆಗೆ ಕೀರ್ತಿ ತರುವಂತೆ ಸಾಧನೆ ಮಾಡಿ ಎಂದು ಇಲ್ಲಿನ ಪ್ರೌಢಶಾಲೆಯ ಎಸ್’ಡಿಎಂಸಿ ಅಧ್ಯಕ್ಷ ಪ್ರಕಾಶ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಇಲ್ಲಿನ ಸರ್ಕಾರಿ ಪ್ರೌಢಶಾಲೆಯಲ್ಲಿನ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷಾರ್ಥಿಗಳಿಗೆ ಲೇಖನ ಸಾಮಗ್ರಿ ಹಾಗೂ ಸಿಹಿ ವಿತರಿಸಿ, ಶುಭ ಕೋರಿ ಅವರು ಮಾತನಾಡಿದರು.
ಪರೀಕ್ಷೆಯಲ್ಲಿ ಕೇವಲ ಉತ್ತೀರ್ಣರಾದರೆ ಸಾಲದು, ವಿದ್ಯಾಭ್ಯಾಸ ಮುಂದುವರೆಸಿ ತಾಂತ್ರಿಕ ಕೋರ್ಸ್ ಮಾಡಿ ಹಳ್ಳಿಗಳನ್ನು ಸಬಲೀಕರಣ ಮಾಡಬೇಕು ಎಂದು ಕರೆ ನೀಡಿದರು.
ಬಗರ್ ಹುಕುಂ ಸಮಿತಿ ಅಧ್ಯಕ್ಷ ಮಣಿಶೇಖರ್ ಮಾತನಾಡಿ, ಎಸ್’ಎಸ್’ಎಲ್’ಸಿ ಪರೀಕ್ಷೆ ಉತ್ತಮ ಭವಿಷ್ಯದ ಹೆಬ್ಬಾಗಿಲು. ಆತ್ಮ ವಿಶ್ವಾಸದಿಂದ ಪರೀಕ್ಷೆ ಎದುರಿಸಿ, ಯಶಸ್ಸು ನಿಮ್ಮದಾಗಲಿ. ಎಲ್ಲರೂ ಉತ್ತಮ ಅಂಕ ತೆಗೆದುಕೊಂಡು ಉತ್ತಿರ್ಣರಾಗಿ ತಂದೆ ತಾಯಿ ಗುರುಗಳಿಗೆ ಮತ್ತು ಓದಿದ ಶಾಲೆಗೆ ಹೆಸರು ತನ್ನಿ ಎಂದು ಎಲ್ಲಾ ವಿದ್ಯಾರ್ಥಿಗಳಿಗೂ ಶುಭ ಹಾರೈಸಿದರು.
ಪರೀಕ್ಷೆ ಬರೆಯುವ ಪ್ರತಿ ವಿದ್ಯಾರ್ಥಿಗೆ ತಲಾ 2 ಪೆನ್ನುಗಳು, ಲೇಖನ ಸಾಮಗ್ರಿ ಮತ್ತು ಸಿಹಿ ವಿತರಿಸಲಾಯಿತು.
ಎಸ್’ಡಿಎಂಸಿ ಉಪಾಧ್ಯಕ್ಷ ಸುರೇಶ್, ಹೇಮಾವತಿ, ಕಟ್ಟಡ ಕಾರ್ಮಿಕರ ಸಂಘದ ಉಪಾಧ್ಯಕ್ಷ ಅಬ್ದುಲ್ ಹಬೀಬ್, ಪ್ರಮುಖರಾದ ಅನಿತಾ, ಗಣಪತಿ ಭಟ್, ಪಾರ್ಥಿಬನ್ ಸೇರಿದಂತೆ ಹಲವರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 



















