No Result
View All Result
ಪ್ರಧಾನಿ ನರೇಂದ್ರ ಮೋದಿಗೆ ರಾಮಚಂದ್ರಾಪುರ ಮಠದ ಶ್ರೀಗಳ ಅಭಿನಂದನೆ
English Articles

Ramachandrapura Seer Hails PM Narendra Modi’s Leadership

by ಕಲ್ಪ ನ್ಯೂಸ್
June 10, 2026
0

Kalpa Media House  |  Honavar/Sagara  | Jagadguru Shankaracharya Sri Raghaveshwara Bharathi Mahaswamiji of Ramachandrapura Math has extended his congratulations to...

Read moreDetails
ಬ್ರೇಕ್‌ಥ್ರೂ | ದೇಶ ಭದ್ರತೆಯ ಜೋಜಿಲಾ ಸುರಂಗ ಕಾಮಗಾರಿಯಲ್ಲಿ ಐತಿಹಾಸಿಕ ಸಾಧನೆ

MEIL Scripts Himalayan History with Final Breakthrough of Zojila Tunnel

June 9, 2026
ಸಾಗರ | ಆಟವಾಡುತ್ತಿದ್ದ ಎರಡೂವರೆ ವರ್ಷದ ಮಗುವಿಗೆ ಹಾವು ಕಚ್ಚಿ ಸಾವು

18-Month-Old Girl Dies After Falling Into Water Tank in Bagalkot

June 9, 2026
2025–26ನೇ ಹಣಕಾಸು ವರ್ಷದಲ್ಲಿ ನೈಋತ್ಯ ರೈಲ್ವೆ ಗಳಿಸಿದ ಒಟ್ಟು ಆದಾಯವೆಷ್ಟು ಗೊತ್ತಾ?

ILCAD 2026 Observed in Mysuru Division; SWR Promotes Level Crossing Safety

June 9, 2026
ಬೆಂಗಳೂರು–ತುಮಕೂರು ರೈಲು ಮಾರ್ಗದ ವಿದ್ಯುತ್ ವ್ಯವಸ್ಥೆ ಮೇಲ್ದರ್ಜೆಗೆ | ₹162.57 ಕೋಟಿ ಅನುಮೋದನೆ

Indian Railways Sanctions ₹162.57 Crore Upgrade for Bengaluru–Tumakuru Rail Section

June 9, 2026
  • Advertise With Us
  • Grievances
  • About Us
  • Contact Us
Thursday, June 11, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಅಂಕಣ ಕಾನೂನು ಕಲ್ಪ

ಕಾನೂನು ಕಲ್ಪ | ಮಾನಸಿಕ ಸಮಸ್ಯೆ ಇರುವವರು ಆಸ್ತಿ ಹಕ್ಕಿಗೆ ಅರ್ಹರೇ?

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
September 20, 2025
in ಕಾನೂನು ಕಲ್ಪ
0
ಕಾನೂನು ಕಲ್ಪ | ಮಾನಸಿಕ ಸಮಸ್ಯೆ ಇರುವವರು ಆಸ್ತಿ ಹಕ್ಕಿಗೆ ಅರ್ಹರೇ?
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ಕಾನೂನು ಕಲ್ಪ – ಪ್ರಶ್ನೋತ್ತರ ಅಂಕಣ  |
ಪ್ರಶ್ನೆ: ನಾನು 32 ವರ್ಷ ವಯಸ್ಸಿನ ಮಹಿಳೆ. ನಾನು ಖಾಸಗಿ ಬ್ಯಾಂಕ್ ಉದ್ಯೋಗಿ. ನಮ್ಮ ತಂದೆ-ತಾಯಿಗೆ ನಾವು ಮೂವರು ಮಕ್ಕಳು. ಅಕ್ಕನ ವಯಸ್ಸು 39 ಹಾಗು ಅಣ್ಣನ ವಯಸ್ಸು 35. ಇಬ್ಬರಿಗೂ ವಿವಾಹವಾಗಿದೆ. ನನ್ನ ತಂದೆ ಹಾಗು ತಾಯಿ ಇಬ್ಬರೂ ನಿಧನರಾಗಿದ್ದಾರೆ. ನಾನು ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದೇನೆ. ಈ ಸಮಸ್ಯೆಯಿಂದಾಗಿ ನನಗೆ ವಿವಾಹವಾಗಿಲ್ಲ. ನನ್ನ ತಂದೆಯವರು ಅವರ ಸಂಪಾದನೆಯಿಂದ, ನಾವು ವಾಸವಿರುವ ನಗರದಲ್ಲಿ ಎರಡು ಅಂತಸ್ತಿನ ಮನೆ ಕಟ್ಟಿಸಿದ್ದಾರೆ ಹಾಗು 40×45 ಅಡಿ ಅಳತೆಯ ನಿವೇಶನವನ್ನೂ ಖರೀದಿಸಿದ್ದಾರೆ. ನಮ್ಮ ತಂದೆ ಈ ಆಸ್ತಿಗೆ ಸಂಬಂಧಿಸಿದಂತೆ ಯಾವುದೇ ವಿಲ್ ಬರೆದಿಲ್ಲ. ಹಾಲಿ ನನ್ನ ಅಣ್ಣ ಈ ಆಸ್ತಿಯ ಸ್ವಾಧೀನದಲ್ಲಿದ್ದಾರೆ.

ನನ್ನ ಮಾನಸಿಕ ಸಮಸ್ಯೆಯ ನಡುವೆಯೂ ನಾನು ದೈನಂದಿನ ಜೀವನವನ್ನು ಹಾಗು ನನ್ನ ವೃತ್ತಿಯನ್ನು ಸಹಜವಾಗಿ ನಿರ್ವಹಿಸುತ್ತಿದ್ದೇನೆ. ನನಗೆ ಮಾನಸಿಕ ಸಮಸ್ಯೆ ಇರುವುದರಿಂದ, ನನ್ನ ಅಕ್ಕ ಹಾಗು ಅಣ್ಣ ಆತ್ಮೀಯವಾಗಿ ನಡೆಸಿಕೊಳ್ಳುವುದಿಲ್ಲ ಎಂಬ ಭಾವನೆ ನನ್ನಲ್ಲಿದೆ. ಇದೇ ಕಾರಣದಿಂದ ನನಗೆ ಆಸ್ತಿಯಲ್ಲಿ ಹಕ್ಕು ನಿರಾಕರಿಸುತ್ತಾರೇನೋ ಎಂಬ ಭಯ ನನ್ನನ್ನು ಕಾಡುತ್ತಿದೆ. ನಾನು ನನ್ನ ತಂದೆಯವರ ಆಸ್ತಿಯಲ್ಲಿ ಪಾಲು ಪಡೆಯಲು ಅರ್ಹಳೇ?
ಉತ್ತರ: ಸವಾಲುಗಳ ನಡುವೆ ನಿಮ್ಮ ವೈಯಕ್ತಿಕ ಜೀವನ ಹಾಗು ವೃತ್ತಿಯನ್ನು ಸಹಜವಾಗಿ ನಿರ್ವಹಿಸುತ್ತಿರುವುದಕ್ಕೆ ನಿಮಗೆ ಅಭಿನಂದನೆಗಳು. ನಿಮ್ಮ ಧೈರ್ಯ ಹಾಗು ಆತ್ಮವಿಶ್ವಾಸ ಇತರರಿಗೂ ಮಾದರಿ.

ಇನ್ನು ನೀವು ಉಲ್ಲೇಖಿಸಿರುವ ನಿಮ್ಮ ತಂದೆಯವರ ಎರಡೂ ಆಸ್ತಿಗಳಲ್ಲೂ ನಿಮಗೆ ಮೂರನೇ ಒಂದರಷ್ಟು ಪಾಲು ಇದೆ. ಹಿಂದೂ ಉತ್ತರಾಧಿಕಾರ ಕಾಯಿದೆಯ ಕಲಂ 28ರ ಪ್ರಕಾರ, ಯಾವುದೇ ದೈಹಿಕ ಅಥವಾ ಮಾನಸಿಕ ಕಾಯಿಲೆಯ ನೆಪವೊಡ್ಡಿ ಆಸ್ತಿ ಹಕ್ಕನ್ನು ನಿರಾಕರಿಸುವಂತಿಲ್ಲ. ತಕ್ಷಣವೇ ನಿಮಗೆ ಆಸ್ತಿಯಲ್ಲಿ ಪಾಲು ಬೇಕು ಎಂದರೆ, ನಿಮ್ಮ ಅಕ್ಕ ಹಾಗು ಅಣ್ಣನವರಲ್ಲಿ ಈ ಕುರಿತಂತೆ ಮಾತನಾಡಿ. ಅವರು ಪಾಲು ನೀಡಲು ಒಪ್ಪದಿದ್ದರೆ, ನೀವು ಆಸ್ತಿಯಲ್ಲಿ ನಿಮ್ಮ ನ್ಯಾಯಯುತ ಪಾಲಿಗಾಗಿ ನ್ಯಾಯಾಲಯದಲ್ಲಿ ದಾವೆ ಹೂಡಬಹುದು. ಈ ನಿಟ್ಟಿನಲ್ಲಿ ಉಚಿತ ಕಾನೂನು ಸಲಹೆ ಅಥವಾ ನೆರವನ್ನು ಪಡೆಯಲು ನೀವು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರವನ್ನೂ ಸಂಪರ್ಕಿಸಬಹುದು. ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರದ ಉಚಿತ ಸಹಾಯವಾಣಿ 15100 ಗೆ ಕೂಡ ಕರೆ ಮಾಡಬಹುದು.

ಆತ್ಮೀಯ ಓದುಗರೇ,
ಕಲ್ಪ ಮೀಡಿಯಾ ಹೌಸ್(ರಿ.) ಅಡಿಯಲ್ಲಿ ಪ್ರಕಟವಾಗುತ್ತಿರುನ ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾದಲ್ಲಿ ನಮ್ಮ ಓದುಗರಿಗಾಗಿ `ಕಾನೂನು ಕಲ್ಪ’ ಎಂಬ ಹೊಸ ಅಂಕಣವನ್ನು ಆರಂಭಿಸಲಾಗಿದ್ದು, ಪ್ರತಿ ಶುಕ್ರವಾರ ಪ್ರಕಟವಾಗಲಿದೆ. ಶಿವಮೊಗ್ಗ-ಭದ್ರಾವತಿಯ ಖ್ಯಾತ ವಕೀಲರು ಹಾಗೂ ಹಿರಿಯ ಪತ್ರಕರ್ತರೂ ಆಗಿರುವ ಶ್ರೀ ವೀರೇಂದ್ರ ಪಿ.ಎಂ. ಅವರು ಯಾವುದೇ ರೀತಿಯ ಕಾನೂನು ಸಮಸ್ಯೆಗಳು, ಕಾನೂನಿನ ಕುರಿತಾಗಿನ ಮಾರ್ಗದರ್ಶನ ಮಾಡಲಿದ್ದಾರೆ. ಸಾರ್ವಜನಿಕರು ತಮಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದರೆ ನಮಗೆ ಕಳುಹಿಸಬಹುದು. ಆ ಪ್ರಶ್ನೆಗಳಿಗೆ ವಕೀಲರಾದ ಶ್ರೀ ವೀರೇಂದ್ರ ಪಿ.ಎಂ. ಅವರು ಉತ್ತರ ನೀಡಲಿದ್ದಾರೆ. ನಿಮ್ಮ ಪ್ರಶ್ನೆಗಳು ಸ್ಪಷ್ಟ, ಸ್ಪುಟ, ನೇರವಾಗಿರಲಿ.

ನಿಮ್ಮ ಪ್ರಶ್ನೆಗಳನ್ನು ಈ ಕೆಳಗಿನ ವಾಟ್ಸಪ್ ಸಂಖ್ಯೆ 9481252093 (ವಾಟ್ಸಪ್ ಮಾತ್ರ) ಅಥವಾ ಇ-ಮೇಲ್ info@kalpa.news ಗೆ ಕಳುಹಿಸಬಹುದು.  

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news   

Tags: Kannada News WebsiteKanunu KalpaLatest News KannadaLegal adviceLegal Helpmental healthproperty rightsಕಾನೂನು ಕಲ್ಪಪ್ರಶ್ನೋತ್ತರ ಅಂಕಣವಿವಾಹ
Share203Tweet123Send
Previous Post

ಈಜು ಸ್ಪರ್ಧೆ | ಕ್ರೈಸ್ಟ್‌ಕಿಂಗ್ ಕಾಲೇಜಿನ ಆರ್ಯನ್ ಕೋಟ್ಯಾನ್ ರಾಜ್ಯಮಟ್ಟಕ್ಕೆ ಆಯ್ಕೆ

Next Post

ಕ್ಯಾನ್ಸರ್ ಅರಿವು ಆಭಿಯಾನ ಗಮನಾರ್ಹ: ಶಾಸಕ ಚನ್ನಬಸಪ್ಪ ಅಭಿಪ್ರಾಯ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ಕ್ಯಾನ್ಸರ್ ಅರಿವು ಆಭಿಯಾನ ಗಮನಾರ್ಹ: ಶಾಸಕ ಚನ್ನಬಸಪ್ಪ ಅಭಿಪ್ರಾಯ

ಕ್ಯಾನ್ಸರ್ ಅರಿವು ಆಭಿಯಾನ ಗಮನಾರ್ಹ: ಶಾಸಕ ಚನ್ನಬಸಪ್ಪ ಅಭಿಪ್ರಾಯ

Leave a Reply Cancel reply

Your email address will not be published. Required fields are marked *

  • Trending
  • Latest
ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

May 5, 2026
ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

April 28, 2026
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

April 3, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಪ್ರಧಾನಿ ನರೇಂದ್ರ ಮೋದಿಗೆ ರಾಮಚಂದ್ರಾಪುರ ಮಠದ ಶ್ರೀಗಳ ಅಭಿನಂದನೆ

Ramachandrapura Seer Hails PM Narendra Modi’s Leadership

June 10, 2026
ಪ್ರಧಾನಿ ನರೇಂದ್ರ ಮೋದಿಗೆ ರಾಮಚಂದ್ರಾಪುರ ಮಠದ ಶ್ರೀಗಳ ಅಭಿನಂದನೆ

ಪ್ರಧಾನಿ ನರೇಂದ್ರ ಮೋದಿಗೆ ರಾಮಚಂದ್ರಾಪುರ ಮಠದ ಶ್ರೀಗಳ ಅಭಿನಂದನೆ

June 10, 2026
ಸೊರಬ | 10 ವರ್ಷದ ಚಿರತೆ ಸಾವು | ವಿದ್ಯುತ್ ಹರಿಸಿ ಕೊಂದರಾ?

ಸೊರಬ | 10 ವರ್ಷದ ಚಿರತೆ ಸಾವು | ವಿದ್ಯುತ್ ಹರಿಸಿ ಕೊಂದರಾ?

June 10, 2026
ಬಾಯಿ ತೆರೆಯಲಾಗದೆ 14 ತಿಂಗಳು ಹೋರಾಟ | ಶಸ್ತ್ರಚಿಕಿತ್ಸೆಯಿಂದ ಶಿವಮೊಗ್ಗ ಮಹಿಳೆಗೆ ಹೊಸ ಜೀವನ

ಬಾಯಿ ತೆರೆಯಲಾಗದೆ 14 ತಿಂಗಳು ಹೋರಾಟ | ಶಸ್ತ್ರಚಿಕಿತ್ಸೆಯಿಂದ ಶಿವಮೊಗ್ಗ ಮಹಿಳೆಗೆ ಹೊಸ ಜೀವನ

June 10, 2026
ಶಿಕ್ಷಣದಿಂದ ಸಮಾಜ ನಿರ್ಮಾಣ ಸಾಧ್ಯ: ಡಾ. ವಾಸುದೇವ ಕೆ. ಆತ್ರೆ

ಶಿಕ್ಷಣದಿಂದ ಸಮಾಜ ನಿರ್ಮಾಣ ಸಾಧ್ಯ: ಡಾ. ವಾಸುದೇವ ಕೆ. ಆತ್ರೆ

June 10, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL