ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಕರ್ನಾಟಕ ಸೇರಿದಂತೆ ದೇಶದಾದ್ಯಂತ ಪೆಟ್ರೋಲ್ #Petrol ಹಾಗೂ ಡೀಸೆಲ್ #Diesel ಬೆಲೆ ಏರಿಕೆಯಾಗುತ್ತಿರುವ ಬೆನ್ನಲ್ಲೇ ಪೆಟ್ರೋಲಿಯಂ ಕಂಪೆನಿಗಳು ಕೃತಕ ಅಭಾವ ಸೃಷ್ಠಿಸುತ್ತಿವೆಯೇ ಎಂಬ ಅನುಮಾನಗಳು ಕಾಡಲಾರಂಭಿಸಿದೆ.
ಹೌದು… ರಾಜ್ಯದ ಹಲವು ಜಿಲ್ಲೆಗಳ, ಕೆಲವು ನಗರ ಪ್ರದೇಶದಲ್ಲಿ ಸಾರ್ವಜನಿಕರಿಗೆ ಪೆಟ್ರೋಲ್, ಡೀಸೆಲ್ ದೊರೆಯದೇ ಇರುವುದು ಮಾತ್ರವಲ್ಲದೇ, ಕೆಲವು ಬಂಕ್’ಗಳು ತೈಲ ಪೂರೈಕೆಯಿಲ್ಲದೇ ತಾತ್ಕಾಲಿಕವಾಗಿ ಮುಚ್ಚಿವೆ ಎಂದು ವರದಿಯಾಗಿದೆ. ಇದು ವಾಹನ ಸವಾರರ ಹಾಗೂ ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ. ಇದರ ಬೆನ್ನಲ್ಲೇ ಯುದ್ಧದ ನೆಪವೊಡ್ಡಿ ಕೃತಕ ಅಭಾವ ಸೃಷ್ಠಿ ಮಾಡಲಾಗುತ್ತಿದೆ ಎಂಬ ಅನುಮಾನಗಳು ವ್ಯಕ್ತವಾಗುತ್ತಿವೆ.

Also Read: ಚುನಾವಣೆಯಲ್ಲಿ ಬಿಜೆಪಿ ಪರ ಪ್ರಚಾರ ಹಿನ್ನೆಲೆ ಮುಸ್ಲಿಂ ವ್ಯಕ್ತಿ ಹತ್ಯೆ: ತನಿಖೆಗೆ ಸಿಎಂ ಯೋಗಿ ಆದೇಶ
ಆದರೆ, ಹಲವು ಕಡೆಗಳಲ್ಲಿ ಸಾರ್ವಜನಿಕರಿಗೆ ಈಗಾಗಲೇ ಪೆಟ್ರೋಲ್ ಹಾಗೂ ಡೀಸೆಲ್ ದೊರೆಯುತ್ತಿಲ್ಲ ಎಂಬ ಘಟನೆಗಳು ನಡೆಯುತ್ತಿವೆ. ರಾಜ್ಯದ ಕೆಲವು ನಗರಗಳಲ್ಲಿ ಖಾಸಗಿ ಬಂಕ್’ಗಳು ತಾತ್ಕಾಲಿಕವಾಗಿ ಮುಚ್ಚಿರುವ ಕುರಿತಾಗಿ ವರದಿಯಾಗಿದೆ. ಕೆಲವು ಕಡೆಗಳಲ್ಲಿ ಗ್ರಾಹಕರಿಗೆ ನಿಗದಿತ ಬೆಲೆಯಲ್ಲಿ ಇಂಧನ ಪೂರೈಕೆ ಮಾಡಲು ತೊಂದರೆಯಾಗುತ್ತಿದ್ದು ತಾತ್ಕಾಲಿಕವಾಗಿ ಇಂಧನ ಪೂರೈಕೆಯನ್ನು ಸ್ಥಗಿತಗೊಳಿಸಿದ್ದೇವೆ. ಅತಿ ಶೀಘ್ರದಲ್ಲೇ ಇಂಧನ ಪೂರೈಕೆ ಪುನಾರಂಭ ಮಾಡುತ್ತೇವೆ ಎಂದು ಖಾಸಗಿ ಕಂಪೆನಿಯೊಂದು ಸಾರ್ವಜನಿಕರಿಗೆ ಮಾಹಿತಿ ಪ್ರಕಟಿಸಿದೆ.
ಈ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಿದರೆ ರಷ್ಯಾ-ಉಕ್ರೇನ್ ಯುದ್ಧದಿಂದ ಕಚ್ಚಾ ತೈಲ ಬೆಲೆ ಏರಿಕೆಯಾಗುತ್ತಿರುವುದರ ಲಾಭ ಮಾಡಿಕೊಳ್ಳುತ್ತಿರುವ ಖಾಸಗಿ ಪೆಟ್ರೋಲಿಯಂ ಕಂಪೆನಿಗಳು ಪೆಟ್ರೋಲ್, ಡೀಸೆಲ್ ಸ್ಟಾಕ್ ಇದ್ದರೂ ವಿತರಕರಿಗೆ ಸರಿಯಾದ ಸಮಯದಲ್ಲಿ ಪೂರೈಕೆ ಮಾಡುತ್ತಿಲ್ಲ ಎಂಬ ಅನುಮಾನ ವ್ಯಕ್ತವಾಗಿದೆ. ಕಚ್ಚಾ ತೈಲ ಬೆಲೆ ಏರಿಕೆಯಾಗುತ್ತಲೇ ಇರುವ ಹಿನ್ನೆಲೆಯಲ್ಲಿ ಪರಿಸ್ಥಿತಿಯ ಲಾಭ ಪಡೆದುಕೊಳ್ಳಲು ಯತ್ನಿಸಿ, ಕೃತಕ ಅಭಾವ ಸೃಷ್ಠಿಸುತ್ತಿವೆ ಎಂಬ ಆರೋಪಗಳು ವಿತರಕ ಹಾಗೂ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ.
Also Read: ಪುನೀತ್ ಅವರನ್ನು ಮರಳಿ ಕಳುಹಿಸು ಪ್ರಭುವೇ: ದೇವರ ಹುಂಡಿಯಲ್ಲಿ ದೊರೆತ ಭಾವನಾತ್ಮಕ ಚೀಟಿ
ಈಗ ಹಲವು ಕಡೆಗಳಲ್ಲಿ ಉದ್ಬವಾಗಿರುವ ಅಭಾವದ ಪರಿಸ್ಥಿತಿ ದಿನದಿಂದ ದಿನಕ್ಕೆ ಗಂಭೀರತೆಯ ರೂಪ ಪಡೆದುಕೊಳ್ಳುತ್ತಿದೆ. ಇದು ನೇರವಾಗಿ ಸಾರ್ವಜನಿಕರಿಗೆ ಹಾಗೂ ವಿತರಕರ ಮೇಲೆ ಬೀರುತ್ತಿದೆ. ಹೀಗಾಗಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತತಕ್ಷಣ ಎಚ್ಚೆತ್ತು ಸಮಸ್ಯೆಯನ್ನು ಪರಿಹರಿಸಬೇಕಿದೆ. ಇಲ್ಲದೇ ಹೋದಲ್ಲಿ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಬೇಕಾಗುತ್ತದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post