ಕಲ್ಪ ಮೀಡಿಯಾ ಹೌಸ್ | ಲಕ್ನೋ |
ಉತ್ತರ ಪ್ರದೇಶ ಚುನಾವಣಾ Uttara Pradesh Election ಸಮಯದಲ್ಲಿ ಬಿಜೆಪಿ ಪರ ಪ್ರಚಾರ ನಡೆಸಿದ್ದ ಮುಸ್ಲಿಂ ವ್ಯಕ್ತಿಯನ್ನು ದುಷ್ಕರ್ಮಿಗಳು ಹತ್ಯೆಗೈದಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ CM Yogi Adithyanath ಆದೇಶಿಸಿದ್ದಾರೆ.
ಭಾನುವಾರ ಬಾಬರ್ ಅಲಿಯನ್ನು ನೆರೆಹೊರೆಯವರು ಥಳಿಸಿ ಹತ್ಯೆಗೈದಿದ್ದಾರೆ ಎಂದು ಪೊಲೀಸರು ತಿಳಿಸಿದ್ದು, ಮೃತ ದುರ್ದೈವಿಯನ್ನು ಬಾಬರ್ ಅಲಿ (25) ಎಂದು ಗುರುತಿಸಲಾಗಿದೆ.
ಉತ್ತರ ಪ್ರದೇಶದ ಕುಶಿನಗರದಲ್ಲಿ ಭಾರತೀಯ ಜನತಾ ಪಕ್ಷ ಪರ ಪ್ರಚಾರ ನಡೆಸಿದ್ದರು. ಹಾಗೂ ಇತ್ತೀಚೆಗೆ ರಾಜ್ಯದಲ್ಲಿ ಬಿಜೆಪಿ ಗೆಲುವನ್ನು ಆಚರಿಸಿದ್ದರು.
Also read: ಮಕ್ಕಳಿಗೆ ಗುಡ್ ನ್ಯೂಸ್! ಶಿವಮೊಗ್ಗದ ಮಾಲ್’ನಲ್ಲಿ ಇಂಡೋರ್ ಗೇಮ್ ಲೋಕ ‘ಬಿ-ಫನ್’ ಆರಂಭ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post