ನವದೆಹಲಿ: ಯಾವುದೇ ರೀತಿಯ ಶತ್ರುಗಳಿಂದ ಎದುರಾಗಬಹುದಾದ ಯಾವುದೇ ರೀತಿಯ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಪ್ಯಾರಾ ಬ್ರಿಗೇಡ್ ಸಂಪೂರ್ಣ ಸಿದ್ದವಾಗಿದೆ ಎಂದು ಸೇನೆ ಹೇಳಿದೆ.
ಈ ಕುರಿತಂತೆ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರು ಹೇಳಿರುವುದಾಗಿ ಸೇನಾ ವಕ್ತಾರರು ಹೇಳಿಕೆ ನೀಡಿದ್ದು, ಯಾವುದೇ ಹೊತ್ತಿನಲ್ಲಿ ಶತ್ರುಗಳಿಂದ ಉದ್ಭವಗೊಳ್ಳುವ ಸಂಭವನೀಯ ಮತ್ತು ನಿರ್ಣಾಯಕ ಸವಾಲುಗಳನ್ನು ಸಮರ್ಥವಾಗಿ ನಿಭಾಯಿಸುವ ದಿಶೆಯಲ್ಲಿ ಪ್ಯಾರಾ ಬ್ರಿಗೇಡ್ ಪೂರ್ಣ ಪ್ರಮಾಣದಲ್ಲಿ ಸಿದ್ಧವಾಗಿರಬೇಕು ಎಂದರು.
ಪ್ಯಾರಾ ಬ್ರಿಗೇಡ್ ಸಂಪೂರ್ಣವಾಗಿ ವೈಮಾನಿಕ ಬ್ರಿಗೇಡ್ ಆಗಿದ್ದು ಸಂಭವನೀಯ ಕಾರ್ಯಾಚರಣೆಯ ಸಂದರ್ಭದಲ್ಲಿ ಇವುಗಳ ಪಾತ್ರ ಅತ್ಯಂತ ನಿರ್ಣಾಯಕವಾಗಿರುತ್ತದೆ ಎಂದಿದ್ದಾರೆ.
Discussion about this post