No Result
View All Result
Indian Railway PM Modi to Inaugurate 4 Modern Railway Stations in Karnataka
English Articles

Indian Railway | PM Modi To Launch 4 Stations In Karnataka

by kalpa News
July 16, 2026
0

Kalpa Media House  |  Bengaluru  | Indian Railways continues its transformative journey with a strong focus on modernization and global...

Read moreDetails
SWR to run special trains for Good Friday, Easter rush

Indian Railway | Danapur and Bengaluru Special Trains Extension

July 16, 2026
Shivamogga's Sri Raghavendra Swamy Mutt Becomes First In South India To Receive Three ISO Certifications

Shivamogga | Raghavendra Swamy Mutt Becomes First In South India To Receives 3 ISO Certification

July 16, 2026
Mysore - Shivamogga - Talguppa Train Indian Railway

Indian Railway | Visakhapatnam– Bengaluru–Visakhapatnam Special Train Extension

July 16, 2026
Amrit Bharat Station Scheme

Hubballi Division Hosts Student Competitions to Promote Amrit Bharat Station Scheme

July 16, 2026
  • Advertise With Us
  • Grievances
  • About Us
  • Contact Us
Saturday, July 18, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Small Bytes

ಸಾಂಸ್ಕೃತಿಕ ಭಾವೈಕ್ಯತೆಯ ಧ್ಯೋತಕ | ನಟನ ತರಂಗಿಣಿಯ ಅಮೋಘ ನೃತ್ಯ ಪ್ರದರ್ಶನ

kalpa News by kalpa News
October 17, 2025
in Small Bytes, ನಾದ ಕಲ್ಪ
0
ಸಾಂಸ್ಕೃತಿಕ ಭಾವೈಕ್ಯತೆಯ ಧ್ಯೋತಕ | ನಟನ ತರಂಗಿಣಿಯ ಅಮೋಘ ನೃತ್ಯ ಪ್ರದರ್ಶನ
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ಬೆಂಗಳೂರು  |ಸಿಲಿಕಾನ್ ಸಿಟಿಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಒಂದಿಲ್ಲೊಂದು ವಿಶೇಷತೆಯಿಂದ ಗಮನ ಸೆಳೆಯುತ್ತಲೇ ಇರುತ್ತವೆ. ಅಂತಹ ಕಾರ್ಯಕ್ರಮಗಳಲ್ಲಿ ನವರಾತ್ರಿ ಅಂಗವಾಗಿ ನಟನ ತರಂಗಿಣಿ ಸಂಸ್ಥೆ ಆಯೋಜಿಸಿದ್ದ ಕಚೇರಿಗಳು ಕಲಾರಸಿಕರ ಮನಸೂರೆಗೊಂಡವು.

ನಮ್ಮ ಸಂಸ್ಕೃತಿಯ ಬುನಾದಿಯೇ ಲಲಿತ ಕಲೆಗಳು. ಇದರಲ್ಲಿಯೂ ಮುಖ್ಯವಾಗಿ ಸಂಗೀತ, ನೃತ್ಯ ಮುಂತಾದ ಪ್ರದರ್ಶನ ಕಲೆಗಳು. ಇವುಗಳನ್ನು ಪೋಷಿಸಿ ಬಳೆಸುವುದು ನಮ್ಮ ಸಮಾಜದ ಆದ್ಯ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಅನೇಕ ಸಂಸ್ಥೆಗಳು ಹಲವು ರೀತಿಯ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಿರುವುದು ಸಮಾಜ ದೃಷ್ಟಿಯಿಂದ ಹಿತಕರವಾದ ಬೆಳವಣಿಗೆ.

ಬೆಂಗಳೂರಿನ ನಟನ ತರಂಗಿಣಿ ಸಂಸ್ಥೆ ಅನೇಕ ಸಂಗೀತ, ನೃತ್ಯ ಕಾರ್ಯಕ್ರಮಗಳನ್ನು ಏರ್ಪಡಿಸಿ ವಿದ್ಯಾರ್ಥಿಗಳಿಗೆ, ಉದಯೋನ್ಮುಖ ಕಲಾವಿದರಿಗೆ ಪ್ರೋತ್ಸಾಹ ನೀಡಲು ವೇದಿಕೆಯನ್ನು ಕಲ್ಪಿಸತೊಡಗಿದೆ.
ನವರಾತ್ರಿಯ ಒಂಬತ್ತು ದಿನಗಳೂ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿತ್ತು. ಈ ಅಂಗವಾಗಿ, ಅಂಜನಾಪುರದ ಶ್ರೀಪ್ರಸನ್ನ ವೆಂಕಟೇಶ್ವರ ಸ್ವಾಮಿಯ ದೇವಾಲಯಲ್ಲಿ ಭರತನಾಟ್ಯ ಪ್ರದರ್ಶನ ಜರುಗಿತು.

ಶ್ರೀ ವೆಂಕಟೇಶ್ವರ ಸ್ವಾಮಿಯು ವರಾಹಾವತಾರಿಯಾಗಿ ಕಂಗೊಳಿಸುತ್ತಿರಲು ನಟನ ತರಂಗಿಣಿಯ ವಿದ್ಯಾರ್ಥಿನಿ ಕು.ಜಿ.ವಿ.ಶ್ರೀಲಾಸ್ಯ, ತನ್ನಲಾಸ್ಯ-ತಾಂಡವಯುತ ಭರತನಾಟ್ಯ ಪ್ರದರ್ಶನವನ್ನು ನೀಡಿ ನೆರೆದಿದ್ದ ಜನಮನವನ್ನು ಸೆಳೆದರು.ವೈ.ಜಿ. ಶ್ರೀಲತಾ ನಿಕ್ಷಿತ್ ಅವರ ಶಿಷ್ಯಳಾದ ಕು.ಶ್ರೀಲಾಸ್ಯ ಭರತನಾಟ್ಯ ವಿದ್ವತ್ಪೂರ್ವವನ್ನು ಮುಗಿಸಿ ಅಂತಿಮ ಹಂತದ ತಯಾರಿಯಲ್ಲಿ ಇರುವರು. ಎರಡನೇ ವರ್ಷದ ನ್ಯೂರೋಸೈನ್ಸ್ ಡಿಗ್ರಿ ವ್ಯಾಸಂಗ ಮಾಡುತ್ತ ನೃತ್ಯ ಕಲಿಕೆಯನ್ನೂ ಸತತವಾಗಿ ಮುಂದುವರಿಸುತ್ತಿದ್ದಾರೆ.

ಯಾವುದೇ ಭರತನಾಟ್ಯ ಪ್ರದರ್ಶನದ ಮೊದಲ ವಿನಿಕೆ ಪುಷ್ಪಗಳನ್ನು ಅರ್ಪಿಸಿ ವೇದಿಕೆಗೆ, ಸಭೆಗೆ ಸಲ್ಲಿಸುವ ನಮನ, ಪುಷ್ಪಾಂಜಲಿ ಹೀಗೆ ನರ್ತನವನ್ನು ಪ್ರಾರಂಭಿಸಿದ ಶ್ರೀಲಾಸ್ಯ, ಊತ್ತುಕ್ಕಾಡು ವೆಂಕಟ ಸುಬ್ಬಯ್ಯ ಅವರ ಶ್ರೀ ವಿಘ್ನರಾಜಂಭಜೇ ಕೃತಿಯ ಮೂಲಕ ತಮ್ಮ ನೃತ್ತದ ಕುಶಲತೆಯನ್ನು ವ್ಯಕ್ತಪಡಿಸಿದರು.

ದೇವಿಯನ್ನು ಕುರಿತ, ವಿದ್ವಾನ್ ಗುರುಮೂರ್ತಿ ಅವರ ಓಂಕಾರ ಬಿಂದು, ದೇವಿಯ ಓಂಕಾರ ರೂಪವನ್ನು ತೋರಿದರೆ, ಶ್ರೀಪುರಂದರದಾಸರ ಹನುಮಂತ ದೇವನಮೋ, ಹನುಮಂತನ ರಾಮಭಕ್ತಿ , ಕಾರ್ಯಪರತೆಯ ಹಾಸ್ಯ ಬೆರೆತ ನಿರೂಪಣೆ ಗಮನ ಸೆಳೆಯಿತು.
ಜಗದೊಡೆಯನಾದ ಶ್ರೀಕೃಷ್ಣನನ್ನು ಬಾಲನೆಂದು ವಾತ್ಸಲ್ಯದಿಂದ ಕೊಂಡಾಡುವ ಯಶೋದೆಯ ನಿರ್ಮಲ ಭಕ್ತಿಯನ್ನು ಸಾರುವ ಪ್ರಸಿದ್ಧ ದೇವರನಾಮ, ಶ್ರೀಪುರಂದರದಾಸರ ಜಗದೋದ್ಧಾರನ, ಈಶ್ವರನ ತಾಂಡವ ಹಾಗೂ ನವರಸಗಳ ಸೊಗಸಾದ ನೃತ್ಯ ಆನಂದ ತಾಂಡವೇಶ್ವರನ (ಶ್ರೀಮತಿ ದ್ವಾರಕಿ ಕೃಷ್ಣಸ್ವಾಮಿ ವಿರಚಿತ). ಶ್ರೀತ್ಯಾಗರಾಜರ ಸೀತಾಕಲ್ಯಾಣದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು. ಉತ್ತಮ ಸಂಗೀತದ ಮುದ್ರಿಕೆಗಳು ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಿದವು.

ಕು.ಚೈತನ್ಯ ಒಳ್ಳೆಯ ಕಂಠ ಸಿರಿಯಿಂದ ಶ್ರೀ ರಾಗದ ವರ್ಣದಿಂದ ಪ್ರಾರಂಭಿಸಿ, ಅಪರೂಪದ ಛಾಯಾ ತರಂಗಿಣೆ, ಮುಖ್ಯಪ್ರಸ್ತುತಿಯಾಗಿ ಪಂತುವರಾಳಿ ಉತ್ತಮವಾಗಿ ಹಾಡಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾದರು.

ಭಜನೆ, ನಾಮ ಸಂಕೀರ್ತನ, ಪ್ರಸ್ತುತಿಗಳು ಕಛೇರಿಯನ್ನು ಮೆರಗುಗೊಳಿಸಿದವು. ಡಾ.ಬಾಲಮುರಳೀ ಕೃಷ್ಣ ಅವರ ಕದನ ಕುತೂಹಲ ರಾಗದ ತಿಲ್ಲಾನದೊಂದಿಗೆ ಕಛೇರಿ ಸಂಪನ್ನಗೊಂಡಿತು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news    

http://kalpa.news/wp-content/uploads/2024/04/VID-20240426-WA0008.mp4

 

Tags: BENGALURUBharatanatyamKannada News WebsiteLatest News KannadaMusicMusic Concertನಟನ ತರಂಗಿಣಿ ಸಂಸ್ಥೆನವರಾತ್ರಿನೃತ್ಯನೃತ್ಯ ಕಾರ್ಯಕ್ರಮಬೆಂಗಳೂರುಭರತನಾಟ್ಯಸಂಗೀತಸಂಸ್ಕೃತಿಸಿಲಿಕಾನ್ ಸಿಟಿ
Share196Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಅತ್ಯಾಧುನಿಕ ವ್ಯವಸ್ಥೆ ಖಜಾನೆ ಸಾಫ್ಟ್‌ವೇರ್ ’ನಿಂದ ಏನೆಲ್ಲಾ ಪ್ರಯೋಜನಗಳಿವೆ?

Next Post

ದೀಪಾವಳಿಗೆ ಮೈಸೂರು-ಜೈಪುರ ನಡುವೆ ವಿಶೇಷ ರೈಲು | ಯಾವ ಮಾರ್ಗಕ್ಕೆಲ್ಲಾ ಪ್ರಯೋಜನ?

kalpa News

kalpa News

Next Post
ಗದಗ-ಧಾರವಾಡ ಪ್ಯಾಸೆಂಜರ್ ರೈಲು ಪುನಾರಂಭ? ಕೇಂದ್ರ ಸಚಿವ ಜೋಶಿ ಹೇಳಿದ್ದೇನು?

ದೀಪಾವಳಿಗೆ ಮೈಸೂರು-ಜೈಪುರ ನಡುವೆ ವಿಶೇಷ ರೈಲು | ಯಾವ ಮಾರ್ಗಕ್ಕೆಲ್ಲಾ ಪ್ರಯೋಜನ?

Leave a Reply Cancel reply

Your email address will not be published. Required fields are marked *

No Result
View All Result
Indian Railway PM Modi to Inaugurate 4 Modern Railway Stations in Karnataka
English Articles

Indian Railway | PM Modi To Launch 4 Stations In Karnataka

by kalpa News
July 16, 2026
0

Kalpa Media House  |  Bengaluru  | Indian Railways continues its transformative journey with a strong focus on modernization and global...

Read moreDetails
SWR to run special trains for Good Friday, Easter rush

Indian Railway | Danapur and Bengaluru Special Trains Extension

July 16, 2026
Shivamogga's Sri Raghavendra Swamy Mutt Becomes First In South India To Receive Three ISO Certifications

Shivamogga | Raghavendra Swamy Mutt Becomes First In South India To Receives 3 ISO Certification

July 16, 2026
Mysore - Shivamogga - Talguppa Train Indian Railway

Indian Railway | Visakhapatnam– Bengaluru–Visakhapatnam Special Train Extension

July 16, 2026
Amrit Bharat Station Scheme

Hubballi Division Hosts Student Competitions to Promote Amrit Bharat Station Scheme

July 16, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL