ಶ್ರೀನಗರ: ಜಮ್ಮುವಿನ ಪುಲ್ವಾಮಾದಲ್ಲಿ ಜೈಷ್ ಉಗ್ರರು ಕಳೆದ ಗುರುವಾರ ನಡೆಸಿದ ಭೀಕರ ದಾಳಿಯಲ್ಲಿ ಸಿಆರ್’ಪಿಎಫ್’ನ 42 ಯೋಧರ ಹತ್ಯೆಯಾದ ಬೆನ್ನಲ್ಲೆ ಕಣಿವೆ ರಾಜ್ಯದಲ್ಲಿ ಸೇನಾ ನೇಮಕಾತಿ ಆರಂಭವಾಗಿದೆ.
#WATCH Queues seen at an Army recruitment drive for 111 vacancies in Baramulla earlier today. #JammuAndKashmir pic.twitter.com/BJFbHmBcaL
— ANI (@ANI) February 19, 2019
ಬಾರಾಮುಲ್ಲಾ ಜಿಲ್ಲೆಯಲ್ಲಿ 111 ಹುದ್ದೆಗಳಿಗೆ ಸೇನಾ ನೇಮಕಾತಿಗೆ ಇಂದು ಪ್ರಕ್ರಿಯೆಗಳು ಆರಂಭವಾಗಿದ್ದು, ಸಾವಿರಾರು ಕಾಶ್ಮೀರಿ ಯುವಕರು ಸೇನೆಗೆ ಸೇರಲು ಮುಂದಾಗಿದ್ದಾರೆ.
ಈ ವೇಳೆ ಸೇನೆಗೆ ಸೇರಲು ಮುಂದಾಗಿರುವ ಯುವಕರು ಮಾತನಾಡಿದ್ದು, ನಮ್ಮ ದೇಶ ಹಾಗೂ ನಮ್ಮ ಕುಟುಂಬಗಳನ್ನು ರಕ್ಷಣೆ ಮಾಡಿಕೊಳ್ಳಲು ನಾವು ಮುಂದಾಗಿದ್ದೇವೆ. ನಮ್ಮ ದೇಶದ ಮೇಲೆ ನಡೆಯುತ್ತಿರುವ ಶತ್ರುಗಳ ದಾಳಿಯ ವಿರುದ್ಧ ಹೋರಾಡುವ ಅಗತ್ಯವಿದೆ. ಅಲ್ಲದೇ, ನಮ್ಮ ದೇಶದ ರಕ್ಷಣೆ ಹಾಗೂ ನಮ್ಮ ಕುಟುಂಬಗಳ ರಕ್ಷಣೆಯೇ ನಮಗೆ ಮುಖ್ಯವಾಗಿದೆಯೇ ಹೊರತು ಇನ್ನೇನೂ ಬೇಡ ಎಂದಿದ್ದಾರೆ.
Discussion about this post