ನವದೆಹಲಿ: ಭಾರತದ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾದ 2016ರ ಸರ್ಜಿಕಲ್ ಸ್ಟ್ರೈಕ್ ಕುರಿತಾಗಿನ ಹೊಸ ವೀಡಿಯೋವೊಂದನ್ನು ಭಾರತೀಯ ಸೇನೆ ಬಿಡುಗಡೆ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಕಾಶ್ಮೀರದಲ್ಲಿರುವ ಎಲ್‌ಒಸಿಯಲ್ಲಿ ಸೇನೆ ನಡೆಸಿದ ಕಾರ್ಯಾಚರಣೆಯ ವೀಡಿಯೋವನ್ನು ಸೇನೆ ಇಂದು ವೀಡಿಯೋ ಬಿಡುಗಡೆ ಮಾಡಿದ್ದು, ವೀರ ಯೋಧರ ಸಾಹಸವನ್ನು ಇದು ತೆರೆದಿಟ್ಟಿದೆ.
#WATCH: More visuals of Surgical strike footage of 29/9/2016 from Pakistan Occupied Kashmir (PoK) pic.twitter.com/GZSMH5Hct6
— ANI (@ANI) September 27, 2018
ವೀಡಿಯೋದಲ್ಲಿ ಭಾರತೀಯ ಸೈನ್ಯದ ಅರೆಸೈನಿಕ ಕಮಾಂಡೊಗಳು ಭಯೋತ್ಪಾದಕ ಉಡಾವಣೆ ಪ್ಯಾಡ್‌ಗ ಳನ್ನು ಸ್ಫೋಟಿಸಿ ನಾಶಪಡಿಸಿರುವುದು ದಾಖಲಾಗಿದೆ.
2016ರಲ್ಲಿ ಉಸಿ ಸೆಕ್ಟರ್‌ನಲ್ಲಿ ನಡೆದ ಉಗ್ರರ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆ ಸರ್ಜಿಕಲ್ ಸ್ಟ್ರೈಕ್ ನಡೆಸಿ, ಹಲವು ಉಗ್ರರನ್ನು ಬಲಿ ಪಡೆದಿತ್ತು.
Discussion about this post