ಕಲ್ಪ ಮೀಡಿಯಾ ಹೌಸ್
ಅದು 1954 ರ ಚುನಾವಣೆ ಸಮಯ. ಒಂದು ಕೋಣೆಯಲ್ಲಿ ಬಹು ಮುಖ್ಯ ವಿಷಯದ ಚರ್ಚೆ ನಡೆಯುತ್ತಿದೆ. ಒಂದು ವರ್ಗದ ಪ್ರಮುಖ ಮುಖಂಡರು ಸೇರಿದ್ದಾರೆ. ಈ ಚುನಾವಣೆಯಲ್ಲಿ ನಮ್ಮ ಸಮುದಾಯದ ಮತಗಳೇ ನಿರ್ಣಾಯಕ. ಮತ್ತು ಕಳೆದ ಬಾರಿಯಂತೆ ನಾವು ಸೋಲಬಾರದು. ನಮ್ಮ ನಾಯಕರು ಇನ್ನಿಲ್ಲದಂತೆ ನಮ್ಮ ಏಳಿಗೆಗೆ ಶ್ರಮಿಸಿದವರು. ನಾವು ಎರಡನೇ ಮತವನ್ನು ಚಲಾಯಿಸಿದೇ ಆದರೆ ಅವಶ್ಯವಾಗಿ ನಮ್ಮ ಎದುರಾಳಿಗೆ ಹಾಕಬೇಕು. ಹಾಗಾಗಿ ನಮ್ಮ ಎರಡನೇ ಮತವನ್ನು ಚಲಾಯಿಸುವುದು ಬೇಡ ಎಂಬ ನಿರ್ಣಯಕ್ಕೆ ಬಂದರು. ಇನ್ನೇನು ನಿರ್ಣಯ ಎಲ್ಲರ ಒಪ್ಪಿಗೆ ಆಗಿ ಏಳಬೇಕು, ಬಾಗಿಲು ತೆರೆದ ಸದ್ದು. ಆ ಸಭೆಗೆ ಅನಿರೀಕ್ಷಿತವಾಗಿ ಆ ನಾಯಕ ಬಂದೇ ಬಿಟ್ಟರು. ‘ಏನು, ಯಾವುದರ ಚರ್ಚೆ ಆಗುತ್ತಿದೆ ಇಲ್ಲಿ?’ ಬೇರೆ ದಾರಿ ಇರಲಿಲ್ಲ, ಹೇಳಲೇಬೇಕಿತ್ತು. ‘ಬೇರೆ ಏನಿಲ್ಲ, ನಮ್ಮ ಸುದೀರ್ಘ ಪರಿಶ್ರಮದ ನಂತರವೂ ಹಿಂದಿನ ಚುನಾವಣೆಯಲ್ಲಿ ನಾವು ಸೋಲಬೇಕಾಯಿತು. ಅದಕ್ಕೆ ಮತ್ತೊಂದು ಕಾರಣವೂ ಇತ್ತು. ನಮ್ಮ ಎರಡನೇ ಮತ. ಯಾಕೆಂದರೆ ನಮ್ಮ ಎರಡನೇ ಮತಗಳು ಅವರಿಗೆ ಹೋದರೂ ಅವರ ಪಕ್ಷದ ಕಾರ್ಯಕರ್ತರು ನಮಗೆ ಅವರ ಎರಡನೇ ಮತಗಳ ಎಂದಿಗೂ ಹಾಕುವುದಿಲ್ಲ. ಇದರಿಂದ ನಮ್ಮ ಸೋಲು ಖಚಿತ. ಸಮಾಜದ ಅಭಿವೃದ್ಧಿಗೆ ನಿಮ್ಮ ಅಗತ್ಯತೆ ಇದೆ ನಮಗೆ. ಹಾಗಾಗಿ ಈ ಬಾರಿ ನಾವು ಯಾರೂ ಎರಡನೇ ಮತವನ್ನು ಚಲಾಯಿಸಬಾರದು ಎಂಬ ನಿರ್ಣಯ ಕೈಗೊಂಡೆವು. ಅದರ ಚರ್ಚೆ ನಡೆಯುತ್ತಿತ್ತು ಅಷ್ಟೆ.’ ಇದನ್ನು ಕೇಳಿ ಒಳಗೆ ಬಂದ ಆ ಮಹಾನ್ ನಾಯಕ ಉದ್ರಿಕ್ತನಾದ. ‘ನಾನು ಸೋಲನ್ನು ಎದುರಿಸಲು ಸಿದ್ಧನಿದ್ದೇನೆ, ಆದರೆ ನಿಮ್ಮ ಎರಡನೆಯ ಮತವನ್ನು ಮತದಾನ ಮಾಡದೆ ಇರಲು ನಾನು ನಿಮಗೆ ಬಿಡುವುದಿಲ್ಲ. ನಾನು ಭಾರತ ಸಂವಿಧಾನವನ್ನು ಸಿದ್ಧಪಡಿಸಿದ್ದೇನೆ. ರಾಜಕೀಯ ವ್ಯವಸ್ಥೆಯಲ್ಲಿ ಇಂತಹ ಬೇಜವಾಬ್ದಾರಿಯುತ ಹೆಜ್ಜೆಯನ್ನು ನಾನು ಒಪ್ಪಲು ಸಾಧ್ಯವೇ ಇಲ್ಲ.’ ಎಂದ ಆ ನಾಯಕ ಸ್ಪಷ್ಟ ದನಿಯಲ್ಲಿ. ನಿಮಗೆ ಇದು ಯಾರ ಬಗ್ಗೆ ಹೇಳಿರುವುದು ಎಂದು ಅರಿವು ಆಗಿರಬಹುದು. ಹೌದು ಆತ ಮತ್ಯಾರು ಅಲ್ಲ ಭಾರತದ ಮರೆಯಲಾಗದ ಮಹಾನ್ ನಾಯಕ ಬಾಬಾ ಸಾಹೇಬ್ ಅಂಬೇಡ್ಕರ್. ತನ್ನ ಸೋಲು ಲೆಕ್ಕಿಸದೇ ನ್ಯಾಯ ಮತ್ತು ತಾವೇ ಬರೆದ ಸಂವಿಧಾನಕ್ಕೆ ತಲೆ ಬಾಗಿದ ಮಹಾನ್ ವ್ಯಕ್ತಿತ್ವ. ಈ ಘಟನೆ ನಡೆದಿದ್ದು 1954 ರಲ್ಲಿ. ಮಹಾರಾಷ್ಟ್ರದ ಭಂಡಾರ ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸಿದ್ದ ಬಾಬಾ ಸಾಹೇಬ ರಿಗೆ ಎದುರಾಳಿ ಅಶೋಕ್ ಮೆಹ್ತಾ ಇಂದ ತೀವ್ರ ಸ್ಪರ್ಧೆ ಎದುರಾಗಿತ್ತು. ಅದಲ್ಲದೆ ಹಿಂದಿನ ಚುನಾವಣೆಯಲ್ಲಿ ಬಾಬಾ ಸಾಹೇಬರು ಸೋತಿದ್ದರು. ಹಾಗಿದ್ದಾಗ ಸಭೆ ನಡೆಸಿದ ಪರಿಶಿಷ್ಟ ಜಾತಿ ಒಕ್ಕೂಟ ಅಶೋಕ್ ಮೆಹ್ತಾಗೆ ತಮ್ಮ ಎರಡನೇ ಮತವನ್ನು ಚಲಾಯಿಸಿದ ಪಕ್ಷದಲ್ಲಿ ಬಾಬಾ ಸಾಹೇಬರು ಈ ಬಾರಿಯೂ ಸೋಲುತ್ತಾರೆ ಎಂದು ಅರಿತು ಎರಡನೇ ಮತವನ್ನು ಚಲಾಯಿಸದೇ ಇರಲು ನಿರ್ಧಾರ ಮಾಡುತ್ತಾರೆ. ಆದರೆ ಅಂಬೇಡ್ಕರ್ ಅದಕ್ಕೆ ಅವಕಾಶ ನೀಡಲಿಲ್ಲ. ಹೀಗಿತ್ತು ಬಾಬಾ ಸಾಹೇಬರ ಬದುಕು. ಅವರಿಗೆ ಸೋಲಿನ ಅಂಜಿಕೆ ಇರಲಿಲ್ಲ. 1946 ರ ಚುನಾವಣೆ ಸೋತಾಗ ಅವರು ಹೇಳಿದ ಮಾತು ಇನ್ನೂ ಹಸಿರಾಗಿದೆ “ನಾನು ಈ ಸೋಲಿನ ಮನಸ್ಥಿತಿಯನ್ನು ಹಂಚಿಕೊಳ್ಳುವುದಿಲ್ಲ. ಚುನಾವಣೆಯಲ್ಲಿ ಸ್ಥಾನಗಳನ್ನು ಗೆಲ್ಲುವುದು ಒಕ್ಕೂಟದ ಆದರ್ಶವಲ್ಲ. ಒಕ್ಕೂಟಕ್ಕೆ ಸ್ಥಾನಗಳನ್ನು ಗೆಲ್ಲುವುದು ಒಕ್ಕೂಟದ ಅಂತ್ಯಕ್ಕೆ ನಾಂದಿ ಹಾಡಲಿದೆ ಎಂದು ನನ್ನ ನಂಬಿಕೆ. ಅದು ಜನರಿಗೆ ಸೇವೆಗಾಗಿ ಸ್ಥಾಪಿತವಾಗಿರುವುದು, ಸಮಾಜದ ಅಭ್ಯುದಯವೇ ನಮ್ಮ ಒಕ್ಕೂಟದ ನಿಜವಾದ ಅಂತ್ಯ.” ಇದು ಅವರ ಮನಸ್ಥಿತಿ.

ವಿಚಿತ್ರ ನೋಡಿ, ಬಾಬಾ ಸಾಹೇಬರು 1954 ರಲ್ಲೇ ಹೇಳಿದರು ಇಂದಿಗೆ ಸವರ್ಣೀಯರು ಮತ್ತು ದಲಿತರ ನಡುವಿನ ಗೋಡೆ ಇಂದಿಗೆ ಮುರಿದು ಬಿತ್ತು ಎಂದು. ಹಾಗಾದರೆ ಅದರ ಮೇಲೂ ಆ ಗೋಡೆಯನ್ನು ಉಳಿಸಿದವರು ಯಾರು? ಉತ್ತರ ಎಲ್ಲರಿಗೂ ಗೊತ್ತು.
“Thespread and growth of the Caste system is too gigantic a task to be achieved by the power or cunning of an individual or of a class. Similar in argument is the theory that the Brahmins created the Caste. After what I have said regarding Manu, I need hardly say anything more, except to point out that it is incorrect in thought and malicious in intent. The Brahmins may have been guilty of many things, and I dare say they were, but the imposing of the caste system on the non-Brahmin population was beyond their mettle.”
” ಜಾತಿ ವ್ಯವಸ್ಥೆಯ ಹರಡುವಿಕೆ ಮತ್ತು ಬೆಳವಣಿಗೆಯು ಒಬ್ಬ ವ್ಯಕ್ತಿಯ ಅಥವಾ ವರ್ಗದ ಶಕ್ತಿ ಅಥವಾ ಕುತಂತ್ರದಿಂದ ಸಾಧಿಸಬೇಕಾದ ಕಾರ್ಯವು ತುಂಬಾ ದೈತ್ಯಾಕಾರದ ಕೆಲಸವಾಗಿದೆ. ವಾದದಲ್ಲಿ ಹೋಲುತ್ತದೆ ಬ್ರಾಹ್ಮಣರು ಜಾತಿಯನ್ನು ಸೃಷ್ಟಿಸಿದರು ಎಂಬ ಸಿದ್ಧಾಂತ. ಮನುವಿನ ಬಗ್ಗೆ ನಾನು ಹೇಳಿದ ನಂತರ, ಆಲೋಚನೆಯಲ್ಲಿ ತಪ್ಪಾಗಿದೆ ಮತ್ತು ಉದ್ದೇಶದಿಂದ ದುರುದ್ದೇಶಪೂರಿತವಾಗಿದೆ ಎಂದು ಸೂಚಿಸುವುದನ್ನು ಹೊರತುಪಡಿಸಿ, ನಾನು ಹೆಚ್ಚು ಏನನ್ನೂ ಹೇಳಬೇಕಾಗಿಲ್ಲ. ಬ್ರಾಹ್ಮಣರು ಅನೇಕ ವಿಷಯಗಳಲ್ಲಿ ತಪ್ಪಿತಸ್ಥರಾಗಿರಬಹುದು, ಮತ್ತು ಅವರು ಎಂದು ನಾನು ಹೇಳುತ್ತೇನೆ, ಆದರೆ ಬ್ರಾಹ್ಮಣೇತರ ಜನಸಂಖ್ಯೆಯ ಮೇಲೆ ಜಾತಿ ವ್ಯವಸ್ಥೆಯನ್ನು ಹೇರುವುದು ಅವರ ಸಾಮರ್ಥ್ಯವನ್ನು ಮೀರಿದೆ.” ಇದು ಭಾರತದಲ್ಲಿ ಇದ್ದ ಜಾತಿ ಪದ್ಧತಿ ಕುರಿತು ಬಾಬಾ ಸಾಹೇಬರ ಅಭಿಪ್ರಾಯ. ಮತ್ತು ಇನ್ನೊಂದು ಅಂಶವೆಂದರೆ ಸಂಸ್ಕೃತವನ್ನು ಭಾರತದ ರಾಷ್ಟ್ರೀಯ ಭಾಷೆ ಮಾಡುವ ಯೋಜನೆಯನ್ನು ಎಲ್ ಕೆ ಮೈತ್ರಾ ಅವರು ತಂದಾಗ ಅಂಬೇಡ್ಕರ್ ಅವರು ಅದನ್ನು ಬೆಂಬಲಿಸಿದ್ದರು. ಯಾರೋ ಯಾಕೆ ನೀವು ಬೇರೆ ಯಾವುದೇ ಧರ್ಮದ ಬದಲು ಬೌದ್ಧ ಧರ್ಮ ಆರಿಸಿಕೊಂಡದ್ದು ಎಂದಾಗ ಅವರ ಉತ್ತರ ಸರಳವಾಗಿತ್ತು ನನಗೆ ಭಾರತೀಯ ಸಂಸ್ಕೃತಿ ಮತ್ತು ಪರಂಪರೆ ಬಗ್ಗೆ ತುಂಬಾ ನಂಬಿಕೆ ಹಾಗೂ ಗೌರವ. ನನ್ನ ದೇಶದ ಪರಂಪರೆಯ ಕಂಪು ಹೊತ್ತ ಯಾವುದೇ ಧರ್ಮವಿರಲಿ ನನಗೆ ಒಪ್ಪಿಗೆ. ಆದ್ದರಿಂದ ಸನಾತನ ಬೌದ್ಧ ಧರ್ಮ ಆರಿಸಿಕೊಂಡದ್ದು ಎಂದು.

1956 ರಲ್ಲಿ ಬೌದ್ಧಧರ್ಮದ ದೀಕ್ಷೆ ಪಡೆಯುವ ಕೆಲವು ದಿನಗಳ ಮೊದಲು, ದತ್ತೊಂಪಂಥರು ಬಾಬಾಸಾಹೇಬರೊಂದಿಗೆ ಬೌದ್ಧಧರ್ಮದ ಆಯ್ಕೆ ಬಗ್ಗೆ ಸುದೀರ್ಘ ಚರ್ಚೆಯನ್ನು ನಡೆಸಿದರು. ಆ ಹೊತ್ತಿಗೆ ಅಂತಹ ಸ್ವಾತಂತ್ರ್ಯ ಇದ್ದುದು ದತ್ತೋಪಂಥರಿಗೆ ಮಾತ್ರ ಅನ್ನಿಸುತ್ತದೆ. “ಅವರ ದೀಕ್ಷೆಗೆ ಕೆಲವು ದಿನಗಳ ಮೊದಲು ನಾನು ಅವರಿಗೆ ಹೇಳಿದ್ದೇನೆಂದರೆ ‘ಹಳೆಯ ದಿನಗಳಲ್ಲಿ ಕೆಲವು ದೌರ್ಜನ್ಯಗಳು ನಡೆದಿವೆ, ನಿಮ್ಮ ಪ್ರಕಾರ ನಮ್ಮಂತಹ ಕೆಲ ಯುವಕರು ಹೊಸ ಸಾಮಾಜಿಕ ಹಾದಿ ಆರಿಸಿಕೊಳ್ಳುವ ಮೂಲಕ ಹಳೆಯ ತಪ್ಪುಗಳ ಸರಿಪಡಿಸಿಕೊಳ್ಳಲು ಸಾಧ್ಯವಿಲ್ಲವೇ?’ ಬಾಬಾಸಾಹೇಬ್, ‘ನಿಮ್ಮ ಮಾತಿನ ಅರ್ಥ ಆರ್ಎಸ್ಎಸ್?’ ಏಕೆಂದರೆ ನಾನು ಆರ್‌ಎಸ್‌ಎಸ್ ಪ್ರಚಾರಕ ಎಂದು ಅವರಿಗೆ ತಿಳಿದಿತ್ತು. ಅವರು, ‘ನಾನು ಇದನ್ನು ಯೋಚಿಸಿಲ್ಲ ಎಂದು ನೀವು ಭಾವಿಸುತ್ತೀರಾ?’ ನಾನು, ‘ನಾನು ಅದನ್ನು ಹೇಗೆ ಹೇಳಬಲ್ಲೆ? ನೀವು ಅದರ ಬಗ್ಗೆ ಯೋಚಿಸಿರಬೇಕು. ‘ ನಂತರ ಅವರು ಕೇಳಿದರು ‘ಸಂಘ ಯಾವಾಗ ರೂಪುಗೊಂಡಿತು? ಎಷ್ಟು ವರ್ಷಗಳು ಕಳೆದಿವೆ? ‘ ನಾನು, ‘ಸಂಘವು 1925 ರಲ್ಲಿ ರೂಪುಗೊಂಡಿತು. ಈಗ 27-28 ವರ್ಷಗಳು ಕಳೆದಿವೆ.’ ಅವರು, ‘ನನಗೆ ಅದು ತಿಳಿದಿದೆ. ಆದರೆ ಒಂದು ವಿಷಯ, ನಿಮ್ಮ ಒಟ್ಟು ಸದಸ್ಯರ ಸಂಖ್ಯೆ? ‘ ನಾನು ‘ಈ ಕ್ಷಣದಲ್ಲಿ ಹೇಳಲು ಸಾಧ್ಯವಿಲ್ಲ’ ಎಂದೆ. ಅವರು, ‘ಪತ್ರಿಕಾಗೋಷ್ಠಿಯಂತೆ ಉತ್ತರಿಸಬೇಡಿ. ಸರಿಯಾಗಿ ಯೋಚಿಸಿ ಹೇಳಿ.’ ‘ನನಗೆ ನಿಜವಾಗಿಯೂ ಗೊತ್ತಿಲ್ಲ’ ಎಂದು ನಾನು ಮತ್ತೆ ಹೇಳಿದೆ. ಆಗ ಅವರು, ‘ನಿಮ್ಮ ಸಂಖ್ಯೆ ಸುಮಾರು 27-28 ಲಕ್ಷ ಎಂದು ಭಾವಿಸೋಣ. ಅಂದರೆ ಇವರನ್ನು ನಿಮ್ಮೊಂದಿಗೆ ಕರೆತರಲು ನೀವು 27-28 ವರ್ಷಗಳನ್ನು ತೆಗೆದುಕೊಂಡಿದ್ದೀರಿ. ಇಡೀ ಸಮಾಜವನ್ನು ಒಂದುಗೂಡಿಸಲು ನೀವು ಎಷ್ಟು ಸಮಯ ತೆಗೆದುಕೊಳ್ಳುತ್ತೀರಿ?’ ನನಗೆ ಏನೂ ಹೇಳಲು ಅವಕಾಶ ಕೊಡದೆ ಅವರು ಮುಂದುವರಿಸಿದರು, ‘ಏನನ್ನೂ ಹೇಳಬೇಡಿ. ಅಂಕಗಣಿತ ಮತ್ತು ಜ್ಯಾಮಿತೀಯ ಬೆಳವಣಿಗೆಗಳು ಒಟ್ಟಿಗೆ ನಡೆಯುವುದಿಲ್ಲ ಎಂದು ನನಗೆ ತಿಳಿದಿದೆ. ಇದು ಬಹಳ ಸಮಯ ತೆಗೆದುಕೊಳ್ಳುತ್ತದೆ. ಅಲ್ಲಿಯವರೆಗೆ ಪರಿಸ್ಥಿತಿ ಕಾಯುತ್ತದೆಯೇ? ಇಲ್ಲ. ಮತ್ತು ನಾನು ಮೌನವಾಗಿ ಕುಳಿತುಕೊಳ್ಳಬೇಕು. ನನ್ನ ಮುಂದಿರುವ ಪ್ರಶ್ನೆ ಏನೆಂದರೆ, ನಾನು ಸಾಯುವ ಮುನ್ನ ಸಮಾಜಕ್ಕೆ ನಿರ್ದೇಶನ ನೀಡಬೇಕು; ಏಕೆಂದರೆ ಈ ಸಮಾಜವು ಇಲ್ಲಿಯವರೆಗೆ ಶೋಷಣೆಗೆ ಬಲಿಯಾಗಿದೆ. ಜನರಲ್ಲಿ ಜಾಗೃತಿ ಇದೆ ಮತ್ತು ಅವರ ಮನಸ್ಸಿನಲ್ಲಿ ಸ್ವಲ್ಪ ದುಃಖ ಮತ್ತು ಕಿರಿಕಿರಿ ಇರುವುದು ಸಹಜ; ಮತ್ತು ಅಂತಹ ಸಮಾಜವು ಕಮ್ಯುನಿಸಂಗೆ ವೇಗವಾಗಿ ಬಲಿಯಾಗುತ್ತದೆ. ಇದು ಕಮ್ಯುನಿಸಂನ ಗುಂಡಿಗೆ ಸುಲಭ ತುತ್ತು. ಪರಿಶಿಷ್ಟ ಜಾತಿ ಸಮಾಜವು ಕಮ್ಯುನಿಸಂನ ಈಡಾಗಬೇಕೆಂದು ನಾನು ಬಯಸುವುದಿಲ್ಲ. ಆದ್ದರಿಂದ ಅವರಿಗೆ ನಿರ್ದೇಶನ ನೀಡುವುದು ರಾಷ್ಟ್ರೀಯ ಹಿತಾಸಕ್ತಿಯಾಗಿದೆ. ನೀವು ಸಂಘದವರು ರಾಷ್ಟ್ರೀಯ ದೃಷ್ಟಿಕೋನದಿಂದ ಕೆಲಸ ಮಾಡುತ್ತಿದ್ದೀರಿ. ಆದರೆ ಪರಿಶಿಷ್ಟ ಜಾತಿ ಮತ್ತು ಕಮ್ಯುನಿಸಂ ನಡುವೆ ನಾನು ಅಂಬೇಡ್ಕರ್ ತಡೆಗೋಡೆ ಹಾಗೂ ಜಾತಿ ಹಿಂದೂಗಳು ಮತ್ತು ಕಮ್ಯುನಿಸಂ ನಡುವೆ ಗೋಲ್ವಾಲ್ಕರ್ ತಡೆಗೋಡೆ ಎಂಬುದನ್ನು ನೆನಪಿನಲ್ಲಿಡಿ. ಇದು ಸರಿಯಲ್ಲವೇ’ ಎಂದು ಕೇಳಿದರು. ‘ಅದಕ್ಕಾಗಿಯೇ ನಾನು ಅವರಿಗೆ ನಿರ್ದೇಶನ ನೀಡಲು ವಿಫಲವಾದರೆ, ಸಮಾಜದ ಒಂದು ದೊಡ್ಡ ಭಾಗವು ಕಮ್ಯುನಿಸಂ ಕಡೆಗೆ ಆಕರ್ಷಿಸುತ್ತದೆ. ನಂತರ ಅವರನ್ನು ಮತ್ತೆ ರಾಷ್ಟ್ರೀಯ ಮುಖ್ಯವಾಹಿನಿಗೆ ತರುವುದು ನಿಮಗೆ ಸುಲಭವಲ್ಲ; ಏಕೆಂದರೆ ಪ್ರಶ್ನೆ ನೀವು ಹೇಳುತ್ತಿರುವುದು ಸರಿಯಲ್ಲ ಅಥವಾ ಇಲ್ಲ. ನೀವೆಲ್ಲರೂ ಮೇಲ್ಜಾತಿಯ ಜನರು, ನಮ್ಮ ಸಮಾಜವು ನಿಮ್ಮ ಮಾತನ್ನು ಕೇಳುವುದಿಲ್ಲ. ಅದಕ್ಕಾಗಿಯೇ ನಾನು ಸಾಯುವ ಮುನ್ನ ಈ ವ್ಯವಸ್ಥೆಯನ್ನು ಮಾಡಿದ್ದೇನೆ’ ಎಂದರು.”


ಇನ್ನು ಸಂಘದ ವಿಚಾರಕ್ಕೆ ಬರುವುದಾದರೆ 1935 ರಿಂದ ಹಿಡಿದು ಮುಂದಿನ ಹಲವು ವರ್ಷಗಳ ತನಕ ಹಲವಾರು ಬಾರಿ ಅವರು ಸಂಘದ ಚರ್ಚೆಗಳಲ್ಲಿ ಭಾಗವಹಿಸಿದರು. ಅಲ್ಲದೆ ಮಹಾತ್ಮ ಗಾಂಧಿ ಹತ್ಯೆ ನಂತರ ಸಂಘದ ಮೇಲೆ ವಿನಾಕಾರಣ ಹೇರಲಾಗಿದ್ದ ನಿಷೇಧವನ್ನು ತೆರವು ಮಾಡಲು ಅಂಬೇಡ್ಕರ್ ಪ್ರಯತ್ನವೂ ಇತ್ತು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news











Discussion about this post