ಕಲ್ಪ ಮೀಡಿಯಾ ಹೌಸ್
ಗುವಾಹಟಿ: ಅಸ್ಸಾಂನ ನಾಂಗಾವ್ ಜಿಲ್ಲೆಯಲ್ಲಿ ಸಿಡಿಲು ಬಡಿದು 18 ಕಾಡಾನೆಗಳು ಸಾವನ್ನಪ್ಪಿರುವ ಧಾರುಣ ಘಟನೆ ನಡೆದಿದೆ.
ನಿನ್ನೆ ರಾತ್ರಿ ಕಂಡಲಿ ಉದ್ದೇಶಿತ ಮೀಸಲು ಅರಣ್ಯ ಬೆಟ್ಟದ ಮೇಲೆ ಭಾರೀ ಸಿಡಿಲು ಬಡಿದ ಪರಿಣಾಮ ನಾಲ್ಕು ಆನೆಗಳು ಭಾಗಷಃ ಸುಟ್ಟು ಹೋಗಿದ್ದು, ಅಸುನೀಗಿದ ಆನೆಗಳ ಮೃತದೇಹ ಪತ್ತೆಯಾಗಿದೆ.
ಈ ಕುರಿತಂತೆ ರಾಷ್ಟ್ರೀಯ ಮಾಧ್ಯಮಗಳಿಗೆ ಮಾತನಾಡಿರುವ ಅಸ್ಸಾಂ ಮುಖ್ಯ ವನ್ಯಜೀವಿ ವಾರ್ಡನ್ ಎಂ.ಕೆ. ಯಾದವ್, ಗ್ರಾಮಸ್ಥರು ಮಾಹಿತಿ ನೀಡಿದ ನಂತರ ಆನೆಗಳ ಸಾವಿನ ಸುದ್ದಿ ಗುರುವಾರ ಮಧ್ಯಾಹ್ನ ತಿಳಿದುಬಂದಿದೆ. ಆನೆಗಳು ದೊಡ್ಡ ಸಂಖ್ಯೆಯಲ್ಲಿ ಮೃತಪಟ್ಟಿವೆ. ಪಶುವೈದ್ಯಕೀಯ ವೈದ್ಯರು ಮತ್ತು ವನ್ಯಜೀವಿ ತಜ್ಞರ ತಂಡ ಕಂಡಲಿಗೆ ಅರಣ್ಯಕ್ಕೆ ತೆರಳಿದ್ದು, ಶುಕ್ರವಾರ ಬೆಳಗ್ಗೆ ಅವರು ಸ್ಥಳಕ್ಕೆ ತಲುಪುವ ನಿರೀಕ್ಷೆಯಿದೆ ಎಂದಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post