ನವದೆಹಲಿ: ದೇಶ ಕಂಡ ಅಜಾತಶತ್ರು ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರ ಸ್ಮಾರಕವನ್ನು ಪ್ರಧಾನಿ ನರೇಂದ್ರ ಮೋದಿ ಇಂದು ಲೋಕಾರ್ಪಣೆಗೊಳಿಸಿದರು.
ಅಟಲ್ ಜೀ ನಿಧನರಾದ ನಂತರ ಇದೇ ಮೊದಲ ಬಾರಿಗೆ ಇಂದು ಅವರ ಜನ್ಮ ದಿನವನ್ನು ದುಃಖತಪ್ತ ಮನದಿಂದ ದೇಶ ಆಚರಿಸುತ್ತಿದ್ದು, ಜನ್ಮದಿನದ ಸಂಭ್ರಮ ಎನ್ನುವುದಕ್ಕಿಂತಲೂ, ಹಿರಿಯ ನಾಯಕರಿಗೆ ಗೌರವ ನಮನವನ್ನು ದೇಶ ಸಲ್ಲಿಸುತ್ತಿದೆ.
ನವದೆಹಲಿಯ ಸ್ಮೃತಿ ಸ್ಥಳದಲ್ಲಿ ತ್ವರಿತ ಹಾಗೂ ಅರ್ಥಪೂರ್ಣವಾಗಿ ನಿರ್ಮಿಸಿರುವ ಅಟಲ್ ಜೀ ಅವರ ಸ್ಮಾರಕವನ್ನು ಪ್ರಧಾನಿಯವರು ಇಂದು ಲೋಕಾರ್ಪಣೆಗೊಳಿಸಿದರು. ತಮ್ಮ ತಂದೆ ಸಮಾನ ಮಾತ್ರವಲ್ಲ ಗುರುವೂ ಸಹ ಆಗಿದ್ದ ಅಟಲ್ ಜೀ ಸ್ಮಾರಕಕ್ಕೆ ಪುಷ್ಪನಮನ ಸಲ್ಲಿಸಿದ ಮೋದಿ, ತಲೆಬಾಗಿ ನಮಿಸಿದರು.
ಇನ್ನು, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ರಾಷ್ಟ್ರಪತಿ ರಾಮನಾಥ ಕೋವಿಂದ್, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಕೇಂದ್ರ ಸಚಿವರುಗಳು ಸೇರಿದಂತೆ ಬಿಜೆಪಿ ಮುಖಂಡರು ಅಟಲ್ ಜೀಗೆ ಗೌರವ ನಮನ ಸಲ್ಲಿಸಿದರು.
हम सबके प्रिय, पूर्व प्रधानमंत्री स्वर्गीय अटल बिहारी वाजपेयी जी को उनकी जयंती पर शत-शत नमन।
Tributes to Atal Ji on his Jayanti. We reiterate our commitment towards creating the India he dreamt of. pic.twitter.com/CnD1NtQCWp
— Narendra Modi (@narendramodi) December 25, 2018
Discussion about this post