ನವದೆಹಲಿ: ನಿನ್ನೆ ಇಹಲೋಕ ತ್ಯಜಿಸಿದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಅಂತ್ಯ ಸಂಸ್ಕಾರ ಇಂದು ಮಧ್ಯಾಹ್ನ ಸ್ಮೃತಿ ಸ್ಥಳದಲ್ಲಿ ನಡೆಯಲಿದ್ದು, ಇಂದು ಮಧ್ಯಾಹ್ನ 1 ಗಂಟೆಗೆ ಅವರ ಅಂತಿಮ ಯಾತ್ರೆ ಆರಂಭವಾಗಲಿದೆ.
ವಯೋಸಹಜ ಅಸ್ವಸ್ಥತೆ ಹಾಗೂ ಕೆಲವು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಅಟಲ್ ಜೀ, ನಿನ್ನೆ ಸಂಜೆ ಕೋಟ್ಯಂತರ ಭಾರತೀಯರನ್ನು ಅಗಲು ಬಾರದ ಲೋಕಕ್ಕೆ ಪ್ರಯಾಣ ಬೆಳೆಸಿದ್ದರು. ಅಟಲ್ ಜೀ ಅಗಲಿಕೆ ಇಡಿಯ ದೇಶವನ್ನು ದುಃಖದ ಮಡಿಲಿಗೆ ದೂಡಿದ್ದು, ದೇಶದ ಉದ್ದಗಲಕ್ಕೂ ದೇಶವಾಸಿಗಳು ತಮ್ಮ ಕುಟುಂಬ ಸದಸ್ಯರೊಬ್ಬರನ್ನು ಕಳೆದುಕೊಂಡಂತೆ ರೋಧಿಸುತ್ತಿದ್ದಾರೆ.
ನಿನ್ನೆ ರಾತ್ರಿಯಿಂದ ಅಟಲ್ ಜೀ ಅವರ ಪಾರ್ಥಿವ ಶರೀರವನ್ನು ಅವರ ಸ್ವಗೃಹದಲ್ಲಿ ಸಾರ್ವಜನಿಕರ ದರ್ಶನಕ್ಕಾಗಿ ಇರಿಸಲಾಗಿದ್ದು, 10 ಗಂಟೆಗೆ ಬಿಜೆಪಿ ಕೇಂದ್ರ ಕಚೇರಿಗೆ ತೆಗೆದುಕೊಂಡು ಹೋಗಿ, ಅಲ್ಲಿ ಇರಿಸಲಾಗುತ್ತದೆ. ಮಧ್ಯಾಹ್ನ 1 ಗಂಟೆಗೆ ಅಂತಿಮ ಯಾತ್ರೆ ಆರಂಭವಾಗಲಿದೆ.
ಗಣ್ಯಾತಿಗಣ್ಯರ ಕಂಬನಿ
ಅಟಲ್ ಜೀ ನಿಧನಕ್ಕೆ ಸಂತಾಪ ಕೋರಿರುವ ರಾಷ್ಟ್ರಪತಿ ರಾಮನಾಥ ಕೋವಿಂದ್, ನಿಜವಾದ ಭಾರತೀಯ ರಾಜಕಾರಣಿಯಾಗಿದ್ದ ವಾಜಪೇಯಿ ಇನ್ನಿಲ್ಲ ಎನ್ನುವುದನ್ನು ಕೇಳಲು ಅತ್ಯಂತ ದುಃಖವಾಗುತ್ತಿದೆ ಎಂದಿದ್ದಾರೆ.
Extremely sad to hear of the passing of Shri Atal Bihari Vajpayee, our former Prime Minister and a true Indian statesman. His leadership, foresight, maturity and eloquence put him in a league of his own. Atalji, the Gentle Giant, will be missed by one and all #PresidentKovind
— President of India (@rashtrapatibhvn) August 16, 2018
ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಮಾತನಾಡಿ, ಬಡವರು ತಮ್ಮ ಧ್ವನಿಯನ್ನು ಕಳೆದುಕೊಂಡಿದ್ದಾರೆ ಎಂದಿದ್ದಾರೆ.
असंभव की किताबों पर जय का चक्रवर्ती निनाद करने वाले मानवता के स्वयंसेवक, परम आदरणीय अटल जी को श्रद्धांजलि अर्पित की।
अटल जी के निधन के साथ ही भारतीय राजनीति का ध्रुवतारा अस्त हो गया।
आप सदैव हमारे हृदय में रहेंगे। pic.twitter.com/yo5va77CHx— Amit Shah (@AmitShah) August 16, 2018
LIVE : Shri @AmitShah speaks to media. https://t.co/T9oLhkImwv
— BJP (@BJP4India) August 16, 2018
ನಾನು ಅಟಲ್ ಬಿಹಾರಿ ವಾಜಪೇಯಿ ಅವರ ಅಗಲಿಕೆಯಿಂದ ತೀವ್ರ ದುಃಖಿತಳಾಗಿದ್ದೇನೆ. ನಮ್ಮ ರಾಷ್ಟ್ರೀಯ ಜೀವನದಲ್ಲಿ ವಾಜಪೇಯಿ ಅವರು ಅತ್ಯುನ್ನತ ವ್ಯಕ್ತಿಯಾಗಿದ್ದರು. ತನ್ನ ಜೀವನದುದ್ದಕ್ಕೂ ಅವರು ಪ್ರಜಾಪ್ರಭುತ್ವದ ಮೌಲ್ಯಗಳ ರಕ್ಷಣೆಗೆ ಕಟಿಬದ್ದರಾಗಿದ್ದರು. ಸಂಸತ್ ಸದಸ್ಯರಾಗಿ, ಸಚಿವ ಸಂಪುಟ ಸಚಿವ ಅಥವಾ ಭಾರತದ ಪ್ರಧಾನಿಯಾಗಿ ಅವರು ಉತ್ತಮ ಕೆಲಸ ಮಾಡಿದ್ದಾರೆ ಎಐಸಿಸಿಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳಿದ್ದಾರೆ.
"He was a spell-binding orator, a leader of great vision, a patriot to the core for whom the national interest was paramount. But above all, he was a man with a very large heart and a real spirit of magnanimity," says Sonia Gandhi #AtalBihariVajpayee #AtaljiForever pic.twitter.com/NVWc0EpEV6
— Sonia Gandhi (@_SoniaGandhi) August 16, 2018
ಆಧುನಿಕ ಭಾರತದ ಅತಿ ಎತ್ತರದ ನಾಯಕರು ಅಟಲ್ ಅವರಾಗಿದ್ದರೆಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹೇಳಿದ್ದಾರೆ. ನಮ್ಮ ದೇಶವರ ಸೇವೆಗಳನ್ನು ದೀರ್ಘಕಾಲದವರೆಗೆ ನೆನಪಿನಲ್ಲಿಟ್ಟುಕೊಳ್ಳಲಿದೆ. ನಾನು ಅವರಿಂದ ಬಹಳಷ್ಟು ವಿಚಾರಗಳನ್ನು ಕಲಿತಿದ್ದೇನೆ ಎಂದಿದ್ದಾರೆ.
Former Prime Minister Manmohan Singh pays tribute to former Prime Minister #AtalBihariVajpayee . pic.twitter.com/ZYE8BYcway
— Dr. Manmohan Singh (@_ManmohanSingh) August 16, 2018
Discussion about this post