Read - < 1 minute
ಮೈಸೂರು: ತುಮಕೂರು-ಮಲ್ಲಸಂದ್ರ-ಗುಬ್ಬಿ-ಅರಸೀಕೆರೆ ನಡುವಿನ ರೈಲು ಹಳಿ ಡಬ್ಲಿಂಗ್ ಹಿನ್ನೆಲೆಯಲ್ಲಿ ಹಲವು ರೈಲುಗಳ ಸಂಚಾರದಲ್ಲಿ ಬದಲಾವಣೆ ಮಾಡಲಾಗಿದ್ದು, ಇನ್ನು ಕೆಲವು ರೈಲುಗಳ ಸಂಚಾರವನ್ನು ರದ್ದು ಮಾಡಲಾಗಿದೆ.
ಈ ಕುರಿತಂತೆ ದಕ್ಷಿಣ ಪಶ್ಚಿಮ ರೈಲ್ವೆ ಮೈಸೂರು ವಿಭಾಗದ ಅಧಿಕಾರಿಗಳು ಆದೇಶ ಹೊರಡಿಸಿದೆ.
ತಾತ್ಕಾಲಿಕವಾಗಿ ರದ್ದಾದ ರೈಲುಗಳು ಹಾಗೂ ದಿನಾಂಕಗಳು:
1. ಬೆಂಗಳೂರು-ಶಿವಮೊಗ್ಗ ಟೌನ್ ಪ್ಯಾಸೆಂಜರ್(56227)- 22.05.2019 ರಿಂದ 28.05.2019
2. ಶಿವಮೊಗ್ಗ-ಬೆಂಗಳೂರು ಟೌನ್ ಪ್ಯಾಸೆಂಜರ್(56229)-23.05.2019 ರಿಂದ 29.05.2019
3. ಹರಿಹರ-ಯಶವಂತಪುರ ಎಕ್ಸ್'ಪ್ರೆಸ್(16578)- ಮೇ 23, 24 ಹಾಗೂ 29
4. ಯಶವಂತಪುರ-ಹರಿಹರ ಎಕ್ಸ್'ಪ್ರೆಸ್(16577)- ಮೇ 22, 23 ಹಾಗೂ 28
5. ಬೆಂಗಳೂರು-ತಾಳಗುಪ್ಪ ಎಕ್ಸ್'ಪ್ರೆಸ್(20651)- 22.05.2019 ರಿಂದ 28.05.2019
6. ತಾಳಗುಪ್ಪ-ಬೆಂಗಳೂರು ಎಕ್ಸ್'ಪ್ರೆಸ್(20652)- 23.05.2019 ರಿಂದ 29.05.2019
7. ಯಶವಂತಪುರ-ಶಿವಮೊಗ್ಗ ಟೌನ್ ಎಕ್ಸ್'ಪ್ರೆಸ್(16579)- 25.05.2019, 26.05.2019 ಹಾಗೂ 27.05.2019
8. ಶಿವಮೊಗ್ಗ ಟೌನ್-ಯಶವಂತಪುರ ಎಕ್ಸ್'ಪ್ರೆಸ್(16580)- 25.05.2019, 26.05.2019 ಹಾಗೂ 27.05.2019
9. ಬೆಂಗಳೂರು-ಚಿಕ್ಕಜಾಜೂರು-ಚಿತ್ರದುರ್ಗ ಪ್ಯಾಸೆಂಜರ್(56519)- 23.05.2019 ರಿಂದ 29.05.2019
10. ಚಿತ್ರದುರ್ಗ-ಹರಿಹರ ಪ್ಯಾಸೆಂಜರ್(56517)- 23.05.2019 ರಿಂದ 29.05.2019
ಭಾಗಷಃ ರದ್ದತಿ:
1. ಚಿಕ್ಕಮಗಳೂರು-ಬೆಂಗಳೂರು ಪ್ಯಾಸೆಂಜರ್(56277)- 23.05.2019 ರಿಂದ 29.05.2019ರವರೆಗೂ ಅರಸೀಕೆರೆಯಿಂದ ಯಶವಂತಪುರದವರೆಗೂ ಮಾತ್ರ ಸಂಚಾರ ರದ್ದು.
2. ಬೆಂಗಳೂರು-ಚಿಕ್ಕಮಗಳೂರು(56278)-23.05.2019 ರಿಂದ 29.05.2019ರವರೆಗೂ ಯಶವಂತಪುರದಿಂದ ಅರಸೀಕೆರೆಯವರೆಗೂ ಮಾತ್ರ ಸಂಚಾರ ರದ್ದು.
ಸಮಯ ಬದಲಾವಣೆ:
1. ಹುಬ್ಬಳ್ಳಿ-ಅಶೋಕಪುರಂ ಎಕ್ಸ್'ಪ್ರೆಸ್(17325)- 22.05.2019 ಹಾಗೂ 27.05.2019ರಂದು 55 ನಿಮಿಷ ಸಂಚಾರದಲ್ಲಿ ವ್ಯತ್ಯಯ.
2. ವೆಲ್ಲಾಂಕಣಿ-ವಾಸ್ಕೋ ಡ ಗಾಮಾ ಎಕ್ಸ್'ಪ್ರೆಸ್(17316)- 21.05.2019ರಂದು 45 ನಿಮಿಷ ಸಂಚಾರದಲ್ಲಿ ವ್ಯತ್ಯಯ.







Discussion about this post