ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಮಂಗಳೂರು ವಿದ್ಯುತ್ ಸರಬರಾಜು ಕಂಪನಿಯು ಕುಂಸಿ ಗ್ರಾಮದಲ್ಲಿ ನಿರಂತರ ಜ್ಯೋತಿ ಕಾಮಗಾರಿಯು ಪ್ರಗತಿಯಲ್ಲಿರುವುದರಿಂದ 110/11 ಕೆ.ವಿ. ಕುಂಸಿ ವಿದ್ಯುತ್ ವಿವಿ ಕೇಂದ್ರ ಎಫ್-2 ಕುಂಸಿ, ಎಫ್-3 ಸಿರಿಗೆರೆ, ಎಫ್-9 ಆಯನೂರು, ಎಫ್-10 ಹಾರ‌್ನಳ್ಳಿ ಮಾರ್ಗಗಳಿಂದ ಸರಬರಾಜಾಗುವ ಹಳ್ಳಿಗಳಿಗೆ ಅಕ್ಟೋಬರ್ 17ರ ಶನಿವಾರ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.
ಕುಂಸಿ, ಹುಬ್ಬನಹಳ್ಳಿ, ಹಾರ‌್ನಳ್ಳಿ, ರಾಮನಗರ, ಕೆಸವಿನಕಟ್ಟೆ, ವಿಠಗೊಂಡನಕೊಪ್ಪ, ವೀರಣ್ಣನಬೆನವಳ್ಳಿ, ಮುದುಮಾಲ, ಯಡವಾಲ, ದೇವಬಾಳು, ತ್ಯಾಜವಳ್ಳಿ, ಕೊನಗವಳ್ಳಿ, ಆಯನೂರು, ಮಂಡಘಟ್ಟ, ಸಿರಿಗೆರೆ, ಸೂಡೂರು, ಕೂಡಿ, ಮಲೆಶಂಕರ, ದೊಡ್ಡಮತ್ತಲಿ, ತಮ್ಮಡಿಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಅಂದು ಬೆಳಗ್ಗೆ 10 ರಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ಸರಬರಾಜು ವ್ಯತ್ಯಯ ಉಂಟಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಕುಂಸಿ ಮೆಸ್ಕಾಂ ಪಾನಿ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ತಿಳಿಸಿದ್ದಾರೆ.
ಅ.17 ಮತ್ತು 18ರಂದು ಈ ಭಾಗದಲ್ಲಿ ವ್ಯತ್ಯಯ
ಆಲ್ಕೋಳ ನಗರ ಉಪವಿಭಾಗ-3ರ ವ್ಯಾಪ್ತಿಯಲ್ಲಿ ತುರ್ತು ಕಾಮಗಾರಿ ಹಮ್ಮಿಕೊಂಡಿದ್ದು, ಮಾರ್ಗ ಮುಕ್ತತೆ ನೀಡುವುದರಿಂದ ವಿವಿಧ ಬಡಾವನೆಗಳಲ್ಲಿ ಎರಡು ದಿನ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಅಕ್ಟೋಬರ್ 17 ರಂದು ಬೆಳಗ್ಗೆ 10ರಿಂದ ಸಂಜೆ 6ರವರೆಗೆ: ವೀರಣ್ಣ ಲೇಔಟ್, ಕಾಶೀಪುರ, ಸೌಂದರ್ಯ ಹೋಟೆಲ್, ಉಪಾಹಾರ ದರ್ಶಿನಿ ಹೋಟೆಲ್, ಲಕ್ಷ್ಮಿಪುರ ದೇವಸ್ಥಾನ, ಕೆಂಚಪ್ಪ ಲೇಔಟ್, ದಯಾನಂದ ಪ್ರಿಂಟರ್ಸ್, ಪೊಲೀಸ್ ಚೌಕಿಯಿಂದ ಕಾಶಿಪುರ ರೈಲ್ವೆಗೇಟ್, ಸೋಮಿನ ಕೊಪ್ಪ ಮೇನ್ ರೋಡ್, ಹುಚ್ಚರಾಯ ಕಾಲೋನಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸುತ್ತಮುತ್ತಲಿನ ಪ್ರದೇಶಗಳು.
ಅಕ್ಟೋಬರ್ 18 ರಂದು ಬೆಳಗ್ಗೆ 10ರಿಂದ ಸಂಜೆ 6ರವರೆಗೆ: ಸ್ವಾಮಿ ವಿವೇಕಾನಂದ ಬಡಾವಣೆಯ ಎ, ಬಿ, ಸಿ, ಇ ಮತ್ತು ಎಫ್ ಬ್ಲಾಕ್, ಗುಡ್‌ಲಕ್ ಸರ್ಕಲ್, ಲಗಾನ್ ಮಂದಿರ, ಮಹಿಳಾ ಪಾಲಿಟೆಕ್ನಿಕ್, ಜಡ್ಜ್ ಕ್ವಾಟ್ರಸ್, ನಾಗ ಸುಬ್ರಮಣ್ಯ ದೇವಸ್ಥಾನದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ವ್ಯತ್ಯಯ ಉಂಟಾಗಲಿದೆ.
ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ನಉವಿ-3ರ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post