ಶಿವಮೊಗ್ಗ: ಕಲಾ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಶ್ರೀವಿಜಯ ಕಲಾನಿಕೇತನದ ‘ವರ್ಷ ವೈಭವ-2019’ ವಿಶೇಷ ಕಾರ್ಯಕ್ರಮ ಆಗಸ್ಟ್ 24 ಹಾಗೂ 25ರಂದು ನಡೆಲಿದ್ದು, ಈ ಹಿನ್ನೆಲೆಯಲ್ಲಿ ವಿಶಿಷ್ಟ ನೃತ್ಯ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ.
ಶ್ರೀವಿಜಯ ಕಲಾನಿಕೇತನದ 15ನೆಯ ವರ್ಷ ವೈಭವ ಶಾಸ್ತ್ರೀಯ ನೃತ್ಯ ಮಹೋತ್ಸವ ಇದಾಗಿದೆ. ಆಗಸ್ಟ್ 24ರ ಶನಿವಾರದಂದು ‘ಶ್ರೀವಿಜಯ’ದ ವಿದ್ಯಾರ್ಥಿಗಳು ‘ಮಾರ್ಗಂ’ ಎಂಬ ಸಾಂಪ್ರದಾಯಿಕ ಪಂದನಲ್ಲೂರು ಮಾರ್ಗವನ್ನು ಆಧರಿಸಿದ ನೃತ್ಯ ಕಾಯಕ್ರಮವನ್ನು ಪ್ರದರ್ಶಿಸಲಿದ್ದಾರೆ.
ವಿದ್ಯಾರ್ಥಿಗಳೇ ನಿರೂಪಣೆಯನ್ನೂ ನಿರ್ವಹಿಸಲಿರುವ ಈ ಕಾರ್ಯಕ್ರಮದಲ್ಲಿ ಶಿವಮೊಗ್ಗ ರಂಗಾಯಣದ ನಿರ್ದೇಶಕ ಡಾ.ಎಂ. ಗಣೇಶ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು, ಕರ್ನಾಟಕ ಸಂಘದ ಪೂರ್ವಾಧ್ಯಕ್ಷೆ ವಿಜಯಾ ಶ್ರೀಧರ್ ಅಧ್ಯಕ್ಷತೆ ವಹಿಸಲಿದ್ದಾರೆ.
ಆಗಸ್ಟ್ 25ರ ಭಾನುವಾರ ಸಂಜೆ 6 ಗಂಟೆಗೆ, ಡಾ. ಕೆ.ಎಸ್. ಪವಿತ್ರ ಅವರು ಅಕ್ಕಮಹಾದೇವಿಯ ಬದುಕು ಬರೆಹವನ್ನು ಆಧರಿಸಿದ ಅಕ್ಕಾ ಕೇಳವ್ವ ಎಂಬ ನೃತ್ಯ ಕಾರ್ಯಕ್ರಮವನ್ನು ಪ್ರಸ್ತುತ ಪಡಿಸುತ್ತಾರೆ. ಲೇಖಕಿ-ಸಂಶೋಧಕಿ ಡಾ.ವಿಜಯಾದೇವಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು, ಖ್ಯಾತ ಮನೋವೈದ್ಯ ಡಾ. ಕೆ.ಆರ್. ಶ್ರೀಧರ್ ಅಧ್ಯಕ್ಷತೆ ವಹಿಸಲಿದ್ದಾರೆ.
ಎರಡೂ ದಿನದ ಕಾರ್ಯಕ್ರಮಗಳಿಗೆ ನೇರ ಹಿನ್ನೆಲೆ ಸಂಗೀತವನ್ನು ಆಧರಿಸಿ ನಡೆಯುತ್ತಿವೆ. ಸಾಹಿತ್ಯಾಸಕ್ತರು ಮತ್ತು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ‘ಶ್ರೀವಿಜಯ’ ಕೋರಿದೆ.
Discussion about this post