Read - < 1 minute
ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೆಂಗಳೂರು: ಕೋವಿಡ್19 ಲಾಕ್ ಡೌನ್ ಹಿನ್ನೆಲೆಯಲ್ಲಿ ಸಂಕಷ್ಟದಲ್ಲಿರುವ ವರ್ಗಗಳಂತೆ ಆಟೋ ಚಾಲಕರಿಗೂ ಸಹ ಒಂದು ಬಾರಿ ಪರಿಹಾರವಾಗಿ 5 ಸಾವಿರ ರೂ.ಗಳನ್ನು ರಾಜ್ಯ ಸರ್ಕಾರ ಪ್ರಕಟಿಸಿದ್ದು, ಇದನ್ನು ಪಡೆಯಲು ಸೇವಾ ಸಿಂಧು ಪೋರ್ಟಲ್ ಮೂಲಕ ಸುಲಭವಾಗಿ ಅರ್ಜಿ ಸಲ್ಲಿಸಬಹುದಾಗಿದೆ.
https://sevasindhu.karnataka.gov.in/Sevasindhu/English
ಅರ್ಜಿ ಸಲ್ಲಿಸುವಾಗ ಏನೆಲ್ಲಾ ಕೊಡಬೇಕು?
- ಸೇವಾ ಸಿಂಧು ಪೋರ್ಟಲ್ ಮೂಲಕ ಸುಲಭವಾಗಿ ಅರ್ಜಿ ಸಲ್ಲಿಸಿ
- 01.03.2020ಕ್ಕೆ ಚಾಲ್ತಿಯಲ್ಲಿರುವಂತೆ ಚಾಲನಾ ಅನುಜ್ಞಾ ಪತ್ರ ಹಾಗೂ ಬ್ಯಾಡ್ಜ್ ಹೊಂದಿರುವವರು ಮಾತ್ರ ಯೋಜನೆಯ ಫಲಾನುಭವಿಗಳು
- ಚಾಲಕರ ಆಧಾರ್ ಕಾರ್ಡ್‌ವಿವರ ನಮೂದಿಸುವುದು ಕಡ್ಡಾಯ
- ಬ್ಯಾಂಕ್ ಅಕೌಂಟಿನ ವಿವರ, ಸಂಬಂಧಪಟ್ಟ ಬ್ಯಾಂಕ್ ಐಎಫ್’ಎಸ್’ಸಿ ಕೋಡ್ ನಮೂದಿಸುವುದು
- ಚಾಲಕರು ಚಾಲನೆ ಮಾಡುವ ವಾಹನದ ನೋಂದಣಿ ಸಂಖ್ಯೆ ವಿವರ ನಮೂದಿಸಬೇಕು
- ದೈನಂದಿನ ಉದ್ಯೋಗವನ್ನು ನಡೆಸಲಾಗದೇ ಆದಾಯ ಕಳೆದುಕೊಂಡಿರುವ ಬಗ್ಗೆ ಸ್ವಯಂ ಘೋಷಣೆ ಮಾಡಬೇಕು
- ಅರ್ಹ ಫಲಾನುಭವಿಗಳು ಆಧಾರ್ ಸಂಖ್ಯೆಯ ಮೂಲಕ ಡಿಬಿಟಿ ಮಾಡಬೇಕು ಅಥವಾ ಆನ್’ಲೈನ್ ಮೂಲಕ ಬ್ಯಾಂಕಿಗೆ ಜಮಾ ಮಾಡಬೇಕು
Get in Touch With Us info@kalpa.news Whatsapp: 9481252093
Discussion about this post