No Result
View All Result
Carnatic Music Intriguing Festival of Raga Tana Pallavi copy
English Articles

RTP | An intriguing festival of Raga-Tana-Pallavi

by kalpa News
September 9, 2026
0

Kalpa Media House  |  Special Article By Rasikapriya  | In a Carnatic music concert, RTP — Ragam, Thanam and Pallavi...

Read moreDetails
Anak Krakatau Eeruption Disrupts Flights Indonesia-Singapore

Singapore Issues Travel Advisory as Mount Anak Krakatau Eruption Disrupts 2.3K Flights in Indonesia

September 8, 2026
Pink Power Run 3.0 Breast Cancer Awareness

Pink Power Run 3.0 to bring 20,000 participants together in Hyderabad

September 8, 2026
Agilent Technologies New Laboratory Solutions India

Agilent Launches 9500 ICP-MS, New GC Systems and OpenLab Sync in India

September 8, 2026
Bengaluru Sparsh Hospital Hennur Completes One Year

When Patients Travel for Hope: How Bengaluru Is Becoming a Destination for Complex Transplant Care

September 4, 2026
  • Advertise With Us
  • Grievances
  • About Us
  • Contact Us
Thursday, September 10, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಬೆಂಗಳೂರು ನಗರ

ಮೂವರು ಗಣ್ಯರಿಗೆ ಭಂಡಾರಕೇರಿ ಮಠದ ಪ್ರಶಸ್ತಿ | ಬೆಂಗಳೂರಿನಲ್ಲಿ 20 ರಂದು ಪ್ರದಾನ

ದಾಮೋದರಾಚಾರ್ಯ, ಮಧ್ವೇಶ, ಸತ್ಯಬೋಧಾಚಾರ್ಯ ಭಾಜನ

kalpa News by kalpa News
May 15, 2024
in ಬೆಂಗಳೂರು ನಗರ
0
ಮೂವರು ಗಣ್ಯರಿಗೆ ಭಂಡಾರಕೇರಿ ಮಠದ ಪ್ರಶಸ್ತಿ | ಬೆಂಗಳೂರಿನಲ್ಲಿ 20 ರಂದು ಪ್ರದಾನ
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ಬೆಂಗಳೂರು  |

ಉಡುಪಿ #Udupi ಶ್ರೀ ಭಂಡಾರಕೇರಿ ಮಠದ ವಾರ್ಷಿಕ ಪ್ರಶಸ್ತಿಗೆ ಈ ಬಾರಿ ಈರೋಡ್ ವೇದವ್ಯಾಸ ಸಂಸ್ಕೃತ ಗುರುಕುಲ #VedavyasaSanskritGurukula ಸೇರಿದಂತೆ ಇಬ್ಬರು ವಿದ್ವಾಂಸರು ಆಯ್ಕೆಯಾಗಿದ್ದಾರೆ.

ವೇದಪೀಠ ಪ್ರಶಸ್ತಿಗೆ ಈರೋಡ್ ವೇದವ್ಯಾಸ ಸಂಸ್ಕೃತ ಗುರುಕುಲ ಆಯ್ಕೆಯಾಗಿದ್ದು, ಹಿರಿಯ ಅಗ್ನಿಹೋತ್ರಿ, ಪ್ರಾಚಾರ್ಯ ದಾಮೋದರಾಚಾರ್ಯರಿಗೆ 1 ಲಕ್ಷ ರೂ. ನಗದು, ಸನ್ಮಾನಪತ್ರ, ಸ್ಮರಣಿಕೆ ನೀಡಿ ಗೌರವಿಸಲಾಗುವುದು ಎಂದು ಎಂದು ಭಂಡಾರಕೇರಿ ಮಠಾಧೀಶ ಶ್ರೀ ವಿದ್ಯೇಶತೀರ್ಥ ಸ್ವಾಮೀಜಿ ತಿಳಿಸಿದ್ದಾರೆ.

ಯುವ ವಿದ್ವಾಂಸರಿಗೆ ಮಠ ನೀಡುವ ಶ್ರೀ ಭಂಡಾರಕೇರಿ #BandarakeriMutt ರಾಜಹಂಸ ಪ್ರಶಸ್ತಿಗೆ ಬೆಂಗಳೂರಿನ ಪೂರ್ಣಪ್ರಜ್ಞ ವಿದ್ಯಾಪೀಠದ ಪ್ರಾಧ್ಯಾಪಕ ಮಧ್ವೇಶ ನಡಿಲ್ಲಾಯ, ಶ್ರೀ ಸತ್ಯತೀರ್ಥ ಅನುಗ್ರಹ ಪ್ರಶಸ್ತಿಗೆ ಬಸವನಗುಡಿ ಶ್ರೀ ಜಯತೀರ್ಥ ವಿದ್ಯಾಪೀಠದ ವಿದ್ವಾನ್ ಸತ್ಯಬೋಧಾಚಾರ್ಯ ಹೊನ್ನಾಳಿ ಆಯ್ಕೆ ಗೊಂಡಿದ್ದಾರೆ. ಎರಡೂ ಪ್ರಶಸ್ತಿಗಳು ತಲಾ 50 ಸಾವಿರ ರೂ. ನಗದು, ಸನ್ಮಾನಪತ್ರ, ಸ್ಮರಣಿಕೆ ಒಳಗೊಂಡಿವೆ.
ಬೆಂಗಳೂರಿನ #Bengaluru ಗಿರಿನಗರದ ಭಾಗವತಾಶ್ರಮದಲ್ಲಿ ಮೇ. 20ರಂದು ಆಯೋಜಿಸಿರುವ ರಾಷ್ಟ್ರಗುರು ಶ್ರೀ ವೇದವ್ಯಾಸ ಜಯಂತಿ, ಮಾಧ್ವ ರಾದ್ಧಾಂತ ಸಂವರ್ಧಕ ಸಭಾ 81ನೇ ಅಧಿವೇಶನ ಮತ್ತು ಶ್ರೀ ವಿದ್ಯಾಮಾನ್ಯ ತೀರ್ಥರ 24ನೇ ಆರಾಧನೋತ್ಸವದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಇದೇ ಸಂದರ್ಭ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥರಿಗೆ #VishwaprasannaThirthaSwamiji ಅಭಿನಂದನೆ, ಶ್ರೀ ವಿದ್ಯೇಶತೀರ್ಥರ 70ನೇ ವರ್ಧಂತಿ, ವಿದ್ವಾಂಸರಿಂದ ವಾಕ್ಯಾರ್ಥ ಗೋಷ್ಠಿ, ಶೋಭಾಯಾತ್ರೆ, ನರಸಿಂಹ ಮಂತ್ರಹೋಮವೂ ನೆರವೇರಲಿದೆ ಎಂದು ಶ್ರೀಗಳು ತಿಳಿಸಿದ್ದಾರೆ.

Also read: ಲೋಕಸಭಾ ಚುನಾವಣೆ | ಮೋದಿ ಅವರು ಈಗಾಗಲೇ ಬಹುಮತ ಪಡೆದಿದ್ದಾರೆ | ಅಮಿತ್ ಶಾ ವಿಶ್ವಾಸ

ಪ್ರಶಸ್ತಿಗೆ ಭಾಜನರಾದವರ ಪರಿಚಯ:
ವಿದ್ವಾನ್ ದಾಮೋದರಾಚಾರ್ಯ:
ಪ್ರತಿ ದಿನವೂ ಶಾಸ್ತ್ರ ವಿದ್ಯಾ ಅಧ್ಯಯನ, ಅಧ್ಯಾಪನ, ಅಗ್ನಿಹೋತ್ರ #Agnihotra ನಡೆಸುತ್ತಾ, ಸನಾತನ ಭಾರತೀಯ ಪರಂಪರೆಯನ್ನು ಸಂರಕ್ಷಿಸುವ ಮಹತ್ತರ ಜವಾಬ್ದಾರಿಯನ್ನು ಸಂಭ್ರಮದಿಂದಲೇ ನಿರ್ವಹಿಸುತ್ತಿರುವವರು ಈರೋಡಿನ ವಿದ್ವಾನ್ ದಾಮೋದರಾಚಾರ್ಯ.

ವಿದ್ವಾನ್ ಪದ್ಮನಾಭಾಚಾರ್ಯ – ಜಾನಕೀಬಾಯಿ ಅವರ ಪುತ್ರರಾದ ಇವರು ತಂದೆಯಿಂದಲೇ ವ್ಯಾಕರಣ, ವೇದ, ಶಾಸ್ತ್ರಗಳನ್ನು ಕಲಿತರು. ಪವಿತ್ರ ಕ್ಷೇತ್ರ ರಂಗದ ಬಳಿಯ ಸಿರುಗಮಣಿ ಎಂಬ ಗ್ರಾಮದಲ್ಲಿ ತಂದೆಯವರೇ ಪ್ರಾರಂಭಿಸಿದ ವೇದರಕ್ಷಣ ವೇದವ್ಯಾಸ ಗುರುಕುಲದಲ್ಲಿ 12 ವರ್ಷ ವೇದ ಅಧ್ಯಯನ ಮಾಡಿದವರು. ನಂತರ ಕಾಂಚೀಪುರದ ಶ್ರೀ ಶಂಕರಾಚಾರ್ಯ ಸಂಸ್ಕೃತ ಪಾಠಶಾಲೆಯಲ್ಲಿ ವೇದಾಂತ, ಘನ, ಐತರೇಯ ಬ್ರಾಹ್ಮಣ, ಗೃಹ್ಯಸೂತ್ರಗಳ ಸಹಿತ ವೇದಾಧ್ಯಯನ ನಡೆಸಿದರು.

ನಂತರ ಮುಂಬೈನ ಶ್ರೀ ಸತ್ಯಧ್ಯಾನ ವಿದ್ಯಾಪೀಠದಲ್ಲಿ ಹಿರಿಯ ವಿದ್ವಾಂಸ ಮಾಹುಲಿ ಗೋಪಾಲಾಚಾರ್ಯ ಮತ್ತು ವಿದ್ಯಾಸಿಂಹಾಚಾರ್ಯರ ಶಿಷ್ಯತ್ವ ಪಡೆದು 8 ವರ್ಷಗಳ ಕಾಲ ದ್ವೈತ ವೇದಾಂತ ಅಧ್ಯಯನ ನಡೆಸಿದರು. ಬಹು ವಿಶೇಷ ಎಂದರೆ ಇವರು ನಿತ್ಯ ಅಗ್ನಿಹೋತ್ರಿಗಳು, ಸೋಮಯಾಜಿಗಳು. ವಾಜಪೇಯ ಮಹಾಯಾಗ ಮಾಡಲು ಸಿದ್ಧರಾಗಿರುವ ಸಿದ್ಧಪುರುಷರು. ತಮ್ಮ ತಂದೆಯರು ಸ್ಥಾಪಿಸಿದ ಗುರುಕುಲವನ್ನು 2000ರಿಂದ ಈರೋಡಿನಲ್ಲಿ ಮುನ್ನಡೆಸುತ್ತಿರುವುದು ಬಹು ವಿಶೇಷ.

ಚೆನ್ನೈನಲ್ಲಿರುವ ಶ್ರೀ ಕಾಂಚಿಪುರಂ ವೇದ ರಕ್ಷಣಾ ನಿಧಿ ಟ್ರಸ್ಟ್ ಸಹಾಯ ಪಡೆದು ಗುರುಕುಲವನ್ನು ಸುವ್ಯವಸ್ಥಿತ ವಿದ್ಯಾಕೇಂದ್ರ ಮಾಡಿರುವುದು ಹೆಮ್ಮೆಯ ವಿಚಾರ. ಪ್ರಸ್ತುತ ಎಂಟನೇ ತಂಡದ ವಿದ್ಯಾರ್ಥಿಗಳಿಗೆ ಪಾಠ ಹೇಳುತ್ತಿರುವ ದಾಮೋದರಾಚಾರ್ಯ ನಾಡಿನ ಹಿರಿಮೆ. ಅಪರೂಪದಲ್ಲಿ ಅನುರೂಪ ವ್ಯಕ್ತಿತ್ವ ಹೊಂದಿದವರು.
ವಿದ್ವಾನ್ ಮಧ್ವೇಶ ನಡಿಲ್ಲಾಯ
ಪೇಜಾವರ ಅಧೋಕ್ಷಜ ಮಠದ ಪೀಠಾಧಿಪತಿ ಶ್ರೀ ವಿಶ್ವಪ್ರಸನ್ನ ತೀರ್ಥರ ಶಿಷ್ಯರು. ಬೆಂಗಳೂರಿನ ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ಅಧ್ಯಯನ ಮಾಡಿದ ಈ ಯುವ ಪ್ರತಿಭೆ, ವಿದ್ಯಾರ್ಥಿ ದಿಸೆಯಲ್ಲಿಯೇ ದೆಹಲಿಯ ರಾಷ್ಟ್ರೀಯ ಸಂಸ್ಕೃತ ಸಂಸ್ಥಾನ ಆಯೋಜಿಸಿದ್ದ ರಾಷ್ಟ್ರ ಮಟ್ಟದ ಸಂಸ್ಕೃತ ಸ್ಪರ್ಧೆಗಳಲ್ಲಿ 7 ಚಿನ್ನದ ಪದಕ, ತಿರುಪತಿಯ ವಿಶ್ವವಿದ್ಯಾಲಯ ಹಮ್ಮಿಕೊಂಡಿದ್ದ ರಾಷ್ಟ್ರ ಮಟ್ಟದ ಸ್ಪರ್ಧೆಗಳಲ್ಲಿ 3 ಚಿನ್ನದ ಪದಕ, ರಾಜ್ಯ ಮಟ್ಟದ ಸಂಸ್ಕೃತ ಸ್ಪರ್ಧೆಗಳಲ್ಲಿ 11 ಚಿನ್ನದ ಪದಕ ಪಡೆದ ಜ್ಞಾನ ಚೇತನ. 2021ರಲ್ಲಿ ವಿವಿಧ ಮಾಧ್ವ ಪೀಠಾಧಿಪತಿಗಳ ಸಮ್ಮುಖ ಸಮಗ್ರ ಶ್ರೀಮನ್ ನ್ಯಾಯಸುಧಾ ಪರೀಕ್ಷೆ ನೀಡಿ ‘ಸುಧಾ ಪಂಡಿತ’ ಕೀರ್ತಿಗೆ ಭಾಜನರಾದವರು. ಸದ್ಯ ಬೆಂಗಳೂರಿನ ಪ್ರತಿಷ್ಠಿತ ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ಅಧ್ಯಾಪಕರಾಗಿ ಮಧ್ವೇಶ ಕಾರ್ಯನಿರ್ವಹಿಸುತ್ತಿರುವುದು ವಿಶೇಷ.

https://kalpa.news/wp-content/uploads/2024/04/VID-20240419-WA0018.mp4

ವಿದ್ವಾನ್ ಸತ್ಯಬೋಧಾಚಾರ್ಯ ರಟ್ಟಿಹಳ್ಳಿ
ದಾವಣಗೆರೆ ಜಿಲ್ಲೆ ಹೊನ್ನಾಳಿ ಮೂಲದ  ಸತ್ಯಬೋಧಾಚಾರ್ಯ ರಟ್ಟಿಹಳ್ಳಿ ಅವರು ಶ್ರೀಧರಾಚಾರ್ಯ ಮತ್ತು ಧನ್ಯಾ ಅವರ ಪುತ್ರ. ದ್ವಿತೀಯ ಮಂತ್ರಾಲಯ ಹೊನ್ನಾಳಿಯಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ ವೃಂದಾವನ ಸೇವೆ ಮಾಡಿ ವಿಶೇಷ ಅನುಗ್ರಹೀತರಾದ ಇವರು ಬೆಂಗಳೂರಿನ ಉತ್ತರಾದಿ ಮಠದ ಶ್ರೀ ಜಯತೀರ್ಥ ವಿದ್ಯಾಪೀಠದಲ್ಲಿ 14 ವರ್ಷ ಅಧ್ಯಯನ ಮಾಡಿದರು. 2012 ರಲ್ಲಿ ಧಾರವಾಡದಲ್ಲಿ ಸುಧಾ ಪರೀಕ್ಷೆ ನೀಡಿ ಸುಧಾ ಪಂಡಿತರೆಂಬ ಕೀರ್ತಿಗೆ ಭಾಜನರಾದವರು.

2015ರಲ್ಲಿ ಬೆಂಗಳೂರಿನಲ್ಲಿ ಸಮಗ್ರ ಶ್ರೀಮನ್ ನ್ಯಾಯ ಸುಧಾ ಎಂಬ ಕಠಿಣತಮ ಪರೀಕ್ಷೆ, 2017ರಲ್ಲಿ ಏಕಕಾಲದಲ್ಲಿ ವ್ಯಾಸತ್ರಯಗಳ ಪರೀಕ್ಷೆ ನೀಡಿದ ಪ್ರತಿಭಾ ಪುಂಜ. ಉತ್ತರಾದಿ ಮಠಾಧೀಶ ಶ್ರೀ ಸತ್ಯಾತ್ಮತೀರ್ಥ ಸ್ವಾಮೀಜಿ ಸಾನ್ನಿಧ್ಯದಲ್ಲಿ ಆಯೋಜನೆಗೊಂಡಿದ್ದ ವಿದ್ವತ್ ಸಭೆಯಲ್ಲಿ ಶ್ರೀ ಮನ್ ನ್ಯಾಯಸುಧಾಚಾರ್ಯ ಹಾಗೂ ವ್ಯಾಸತ್ರಯಾಚಾರ್ಯ ಪ್ರಶಸ್ತಿಯನ್ನು ಸ್ವೀಕರಿಸಿದ ಯುವ ಚೇತನ. ತಿರುಪತಿಯಲ್ಲಿ ಖ್ಯಾತ ವಿದ್ವಾಂಸ ದೇವನಾಥಾಚಾರ್ಯರ ಬಳಿ ತರ್ಕ ಮತ್ತು ಮೀಮಾಂಸಾ ಶಾಸ್ತ್ರಗಳ ಅಧ್ಯಯನ ಮಾಡಿ, 2009- 2010ರಲ್ಲಿ ತೆನಾಲಿ ಪರೀಕ್ಷೆಯಲ್ಲೂ ಜಯಭೇರಿ ಬಾರಿಸಿದ ಜ್ಞಾನವಂತ. ವಯಸ್ಸು ಚಿಕ್ಕದಿದ್ದರೂ ಅಧ್ಯಯನ ಮತ್ತು ಅಧ್ಯಾಪನದಲ್ಲಿ ವಿಶೇಷ ಶ್ರದ್ಧೆ ಮತ್ತು ಆಸಕ್ತಿ ಹೊಂದಿದ್ದು, ಗುರುಸೇವೆಯಲ್ಲೇ ಪರಮ ಸುಖ ಕಾಣುವ ಸಾಧಕರಾಗಿರುವುದು ಗಮನಾರ್ಹ.

ಪ್ರಸ್ತುತ ಉತ್ತರಾದಿ ಮಠದ ಸುಧಾ ಗ್ರಂಥ ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ಅಂತಿಮ ಹಂತದ ಪರೀಕ್ಷೆಗಾಗಿ ಉನ್ನತ ಮಟ್ಟದ ತರಬೇತಿ ನೀಡುವ ಗುರುತರ ಜವಾಬ್ದಾರಿ ನಿರ್ವಹಣೆ ಮಾಡುತ್ತಿರುವುದು ವಿಶೇಷ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

https://kalpa.news/wp-content/uploads/2024/05/Kumadwathi-1.mp4
https://kalpa.news/wp-content/uploads/2024/04/VID-20240426-WA0008.mp4
Tags: AgnihotraBandarakeri MuttBENGALURUKannada News WebsiteLatest News KannadamysoreUdupiVedavyasa Sanskrit Gurukulaಅಗ್ನಿಹೋತ್ರಉಡುಪಿಪೇಜಾವರ ಮಠಬೆಂಗಳೂರುಭಂಡಾರಕೇರಿ ಮಠವೇದವ್ಯಾಸ ಸಂಸ್ಕೃತ ಗುರುಕುಲಶ್ರೀ ವಿದ್ಯೇಶತೀರ್ಥರುಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದಂಗಳವರು
Share199Tweet124Send
Aniruddha Vasishta S R

Aniruddha Vasishta S R

Editor-in-Chief

Previous Post

ವ್ಯಾಸ-ದಾಸ ಸಾಹಿತ್ಯ ಜ್ಞಾನ ಪ್ರಸಾರಕ್ಕೆ ವಿಶೇಷ ಆದ್ಯತೆ ನೀಡೋಣ | ಶ್ರೀ ವಿದ್ಯೇಶತೀರ್ಥ ಸ್ವಾಮೀಜಿ ಆಶಯ

Next Post

ಸಿಬಿಎಸ್’ಸಿ ಫಲಿತಾಂಶ | ಜೈನ್ ಪಬ್ಲಿಕ್ ಶಾಲೆಯ ಕೆ.ಎನ್. ವಿನೀತ್ ರಾವ್ ಜಿಲ್ಲೆಗೆ ಪ್ರಥಮ

kalpa News

kalpa News

Next Post
ಸಿಬಿಎಸ್’ಸಿ ಫಲಿತಾಂಶ | ಜೈನ್ ಪಬ್ಲಿಕ್ ಶಾಲೆಯ ಕೆ.ಎನ್. ವಿನೀತ್ ರಾವ್ ಜಿಲ್ಲೆಗೆ ಪ್ರಥಮ

ಸಿಬಿಎಸ್'ಸಿ ಫಲಿತಾಂಶ | ಜೈನ್ ಪಬ್ಲಿಕ್ ಶಾಲೆಯ ಕೆ.ಎನ್. ವಿನೀತ್ ರಾವ್ ಜಿಲ್ಲೆಗೆ ಪ್ರಥಮ

Leave a Reply Cancel reply

Your email address will not be published. Required fields are marked *

No Result
View All Result
Carnatic Music Intriguing Festival of Raga Tana Pallavi copy
English Articles

RTP | An intriguing festival of Raga-Tana-Pallavi

by kalpa News
September 9, 2026
0

Kalpa Media House  |  Special Article By Rasikapriya  | In a Carnatic music concert, RTP — Ragam, Thanam and Pallavi...

Read moreDetails
Anak Krakatau Eeruption Disrupts Flights Indonesia-Singapore

Singapore Issues Travel Advisory as Mount Anak Krakatau Eruption Disrupts 2.3K Flights in Indonesia

September 8, 2026
Pink Power Run 3.0 Breast Cancer Awareness

Pink Power Run 3.0 to bring 20,000 participants together in Hyderabad

September 8, 2026
Agilent Technologies New Laboratory Solutions India

Agilent Launches 9500 ICP-MS, New GC Systems and OpenLab Sync in India

September 8, 2026
Bengaluru Sparsh Hospital Hennur Completes One Year

When Patients Travel for Hope: How Bengaluru Is Becoming a Destination for Complex Transplant Care

September 4, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL