ಕಲ್ಪ ಮೀಡಿಯಾ ಹೌಸ್ | ಅಯೋಧ್ಯೆ |
ನಿರೀಕ್ಷೆಗೂ ಮೀರಿ ಮಿತಿಮೀರಿದ ಭಕ್ತರು ಆಗಮಿಸಿರುವ ಹಿನ್ನೆಲೆಯಲ್ಲಿ ರಾಮದೇವರ ದರ್ಶನ ಪಡೆಯಲು ತಾತ್ಕಾಲಿಕವಾಗಿ ನಿರ್ಬಂಧ ವಿಧಿಸಲಾಗಿದೆ.
ನಿನ್ನೆ ಪ್ರಾಣಪ್ರತಿಷ್ಠಾಪನೆ ಆದ ಹಿನ್ನೆಲೆಯಲ್ಲಿ ಇಂದಿನಿಂದ ಸಾರ್ವಜನಿಕರಿಗೆ ರಾಮಲಲ್ಲಾನ Ramalalla ದರ್ಶನಕ್ಕೆ ತೆರೆಯಲಾಗಿತ್ತು. ನಸುಕಿನ 3 ಗಂಟೆಯಿಂದಲೇ ಸಾವಿರಾರು ಮಂದಿ ದರ್ಶನಕ್ಕಾಗಿ ಸಾಲುಗಟ್ಟಿ ನಿಂತಿದ್ದರು.
ಮಿತಿ ಮೀರಿದ ಭಕ್ತರ ಸಮೂಹ ಆಗಮಿಸಿದ ಹಿನ್ನೆಲೆಯಲ್ಲಿ ನಿರ್ವಹಣೆ ಕಷ್ಟವಾಗಿ ಪರಿಣಮಿಸಿದೆ. ಹೀಗಾಗಿ, ಅಯೋಧ್ಯೆ Ayodhya ಪೊಲೀಸರು ಮತ್ತು ಸ್ಥಳೀಯ ಆಡಳಿತದ ಇತ್ತೀಚಿನ ನಿರ್ಧಾರದಲ್ಲಿ, ಅಯೋಧ್ಯೆ ರಾಮಮಂದಿರ ಪ್ರವೇಶವನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ.
Also read: ರಾಮನ ದರ್ಶನಕ್ಕೆ ತುಂಬಿ ತುಳುಕುತ್ತಿದೆ ಅಯೋಧ್ಯೆ | ಎಲ್ಲೆಲ್ಲೂ ಜನಸಮೂಹ
ಮೊದಲೇ ಹೇಳಿದಂತೆ, ದೇವಾಲಯವು ಸಾರ್ವಜನಿಕರಿಗಾಗಿ ಇಂದು ತೆರೆದಿರುವುದರಿಂದ ಗಂಟೆಗಟ್ಟಲೆ ಸರದಿಯಲ್ಲಿ ಕಾಯುತ್ತಿದ್ದ ಭಕ್ತರ ಭಾರೀ ನೂಕು ನುಗ್ಗುವಿಕೆಯಿಂದಾಗಿ ಅಯೋಧ್ಯೆ ರಾಮಮಂದಿರ ಪ್ರವೇಶವನ್ನು ಮುಚ್ಚಲಾಗಿದೆ.
ಜನರ ಭದ್ರತೆಯನ್ನು ಗಮನದಲ್ಲಿಟ್ಟುಕೊಂಡು ಆಡಳಿತ ಮತ್ತು ಪೊಲೀಸರು ತಾತ್ಕಾಲಿಕವಾಗಿ ಪ್ರವೇಶವನ್ನು ಮುಚ್ಚಿ, ದೇವಸ್ಥಾನಕ್ಕೆ ಹೋಗುವ ರಸ್ತೆಗಳಲ್ಲಿ ಬ್ಯಾರಿಕೇಡ್’ಗಳನ್ನು ಹಾಕಿದ್ದಾರೆ. ಹೆದ್ದಾರಿಗಳಲ್ಲೂ ಬ್ಯಾರಿಕೇಡ್’ಗಳನ್ನು ಹಾಕಲಾಗಿದ್ದು, ಈ ಮಾರ್ಗದಲ್ಲಿ ಬರುವ ವಾಹನಗಳನ್ನು ಸದ್ಯಕ್ಕೆ ಸ್ಥಗಿತಗೊಳಿಸಲಾಗಿದೆ.
ಪರಿಸ್ಥಿತಿ ನೋಡಿಕೊಂಡು ಮಧ್ಯಾಹ್ನ 2 ಅಥವಾ 3 ಗಂಟೆಗೆಯ ವೇಳೆಗೆ ಮತ್ತೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ ಎಂದು ವರದಿಯಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post