ಕಲ್ಪ ಮೀಡಿಯಾ ಹೌಸ್ | ಮೈಸೂರು |
ಶ್ರೀರಾಂಪುರ ಪಟ್ಟಣ ಪಂಚಾಯ್ತಿ ವ್ಯಾಪ್ತಿಯ ಮೂಕಾಂಬಿಕಾ ಸಮೃದ್ದಿ ಬಡಾವಣೆಯಲ್ಲಿ ಅಯೋಧ್ಯಾ #Ayodhya ಶ್ರೀರಾಮಮಂದಿರದ ಪವಿತ್ರ ಮಂತ್ರಾಕ್ಷತೆ ವಿತರಣೆ ಕಾರ್ಯಕ್ರಮ ನಡೆಯಿತು.
ಪ್ರತಿ ಮನೆಗಳಿಗೂ ಭೇಟಿ ನೀಡಿ ಪವಿತ್ರ ಮಂತ್ರಾಕ್ಷತೆ, ರಾಮಮಂದಿರ #Ramamandira ಪರಿಚಯದ ಕರ ಪತ್ರ ಮತ್ತು ಅಯೋಧ್ಯಾ ರಾಮಮಂದಿರದ ಭಾವಚಿತ್ರ ನೀಡಲಾಯಿತು.

ಈ ಸಂದರ್ಭದಲ್ಲಿ ತಮ್ಮ 90 ವರ್ಷ ವಯಸ್ಸಿನಲ್ಲಿ ಈ ತಿಂಗಳು ಅಯೋಧ್ಯಾ, ಕಾಶಿ #Kashi ಪ್ರವಾಸ ಮುಗಿಸಿ ಬಂದ ಶಾರದಮ್ಮ ವೆಂಕಟಕೃಷ್ಣಪ್ಪ ರವರನ್ನು ಹಾಗೂ ತಮ್ಮ ಜೀವನ ಪೂರ್ತಿ ಪ್ರತಿ ಶನಿವಾರ ಶ್ರೀರಾಮ ಕಥಾ ಪಠಣ ಮಾಡಿದ ಇಂದಿರಮ್ಮ ಗುಂಡಪ್ಪ ರವರವನ್ನು ವಿಶ್ವ ಹಿಂದೂ ಪರಿಷತ್ ನ ಕೆ. ನರಸಿಂಹ ಮೂರ್ತಿ ಭಟ್ ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘದ #RSS ಗಣೇಶ್ ಜಿ.ಎಸ್. ರಾಮ ಮಂದಿರದ ಪವಿತ್ರ ಮಂತ್ರಾಕ್ಷತೆ ನೀಡಿ ಗೌರವಿಸಿದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post