ಕಲ್ಪ ಮೀಡಿಯಾ ಹೌಸ್ | ಅಯೋಧ್ಯೆ |
ರಾಮಮಂದಿರ #Ayodhye Ramamandira ನಿರ್ಮಾಣದ ನಂತರ ವಿಶ್ವದ ಗಮನ ಸೆಳೆದಿರುವ ಅಯೋಧ್ಯೆ, ಈಗ ಇಂತಹುದ್ದೇ ಇನ್ನೊಂದು ಐತಿಹಾಸಿಕ ಯೋಜನೆಗೆ ಸಾಕ್ಷಿಯಾಗಲಿದೆ.
ಹೌದು… ರಾಮ ಭಕ್ತರನ್ನು ಇನ್ನಷ್ಟು ಆಕರ್ಷಿಸುವ ಉದ್ದೇಶದಿಂದ ಅಯೋಧ್ಯೆಯಲ್ಲಿ ಟಾಟಾ ಸನ್ಸ್ ಸಂಸ್ಥೆಯು #TATA Suns 650 ಕೋಟಿ ರೂ. ವೆಚ್ಚದಲ್ಲಿ ದೇಗುಲಗಳ ಮ್ಯೂಸಿಯಂ ಸ್ಥಾಪಿಸಲು ಉದ್ದೇಶಿಸಿದೆ.
ಈ ಕುರಿತಂತೆ ಟಾಟಾ ಗ್ರೂಪ್ಸ್ #TATA Groups ಮಾತೃ ಸಂಸ್ಥೆಯಾಗಿರುವ ಟಾಟಾ ಸನ್ಸ್’ನ ಈ ಯೋಜನೆಗೆ ಸಿಎಂ ಯೋಗಿ ಆದಿತ್ಯನಾಥ್ ಅಧ್ಯಕ್ಷತೆಯ ಸಚಿವ ಸಂಪುಟ ಸಭೆಯಲ್ಲಿ ಹಸಿರು ನಿಶಾನೆ ತೋರಿಸಲಾಗಿದೆ.
Also read: ರೈಲಿನ ಲೋಯರ್ ಬರ್ತ್’ನಲ್ಲಿ ಮಲಗಿದ್ದ ವ್ಯಕ್ತಿ ಮೇಲೆ ಬಿದ್ದ ಯುವಕ | ವೃದ್ಧ ಸಾವು | ಘಟನೆ ನಡೆದಿದ್ದು ಹೇಗೆ?
ಟಾಟಾ ಸನ್ಸ್ ತನ್ನ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ ನಿಧಿಯ ಅಡಿಯಲ್ಲಿ 650 ಕೋಟಿ ರೂ. ವೆಚ್ಚದಲ್ಲಿ ವಸ್ತುಸಂಗ್ರಹಾಲಯವನ್ನು ನಿರ್ಮಿಸಲು ಕೇಂದ್ರ ಸರ್ಕಾರದ ಮೂಲಕ ಯೋಜನೆಯನ್ನು ಪ್ರಸ್ತಾಪಿಸಿದೆ.
ಈ ಅತ್ಯಾಧುನಿಕ ವಸ್ತುಸಂಗ್ರಹಾಲಯವು ಅಂತಾರಾಷ್ಟ್ರೀಯ ಗುಣಮಟ್ಟವನ್ನು ಪೂರೈಸುತ್ತಿದ್ದು, ಭಾರತದ ಪ್ರಸಿದ್ಧ ದೇವಾಲಯಗಳ ಇತಿಹಾಸ ಮತ್ತು ವಾಸ್ತುಶಿಲ್ಪವನ್ನು ಪ್ರದರ್ಶಿಸುತ್ತದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post