ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ವಚಾ ಸುವರ್ಣ ಎಂಬುದು ಬಹು ಕಾಲದಿಂದಲೂ ಪ್ರಚಲಿತವಾಗಿರುವ ಆರ್ಯುವೇದ ಔಷಧೀಯ ಪದ್ದತಿ. ಹಿರಿಯರು ಮಕ್ಕಳಿದ್ದ ಮನೆಯಲ್ಲಿ ಈ ಒಂದು ಔಷಧೀಯ ದ್ರವ್ಯವನ್ನು ಒಂದಿಲ್ಲೊಂದು ರೀತಿಯಲ್ಲಿ ಬಳಕೆಗೆ ತರುತ್ತಾರೆ. ಇಷ್ಟೇ ಅಲ್ಲದೆ ಬಾಣಂತಿ ಚಿಕಿತ್ಸೆ, ವಯೋವೃದ್ದರ ಚಿಕಿತ್ಸೆ ಹೀಗೆ ಆಬಾಲರಿಂದ ಹಿಡಿದು ವಯೋವೃದ್ದರವರೆಗೂ ಮನೆಗಳಲ್ಲಿ ನಮ್ಮ ಹಿರಿಯರು ಇದನ್ನು ಔಷಧಿಗೆ ಬಳಸುವುದನ್ನು ಕಾಣಬಹುದು. ಅಷ್ಟೇ ಅಲ್ಲದೆ ಇದನ್ನು ಸಾಂಬಾರು ಪದಾರ್ಥವಾಗಿಯೂ ಬಳಸುವುದನ್ನು ಕಾಣಬಹುದು.
ಬಜೆಯ ಪರಿಚಯ ಹಾಗೂ ಉಪಯೋಗ ವೇದಕಾಲದಿಂದಲೂ ಹಂತ ಹಂತವಾಗಿ ಹೆಚ್ಚುತ್ತಾ ಬಂದಿರುವುದು ವಿಶೇಷ.
ಸಾವಿರಾರು ವರ್ಷ ಹಳೆಯದಾದ ಬಜೆಯ ಪರಿಚಯ ಗ್ರಂಥಗಳು, ಪುರಾಣ, ಬೈಬಲ್ ಹೀಗೆ ಹಲವು ಕಡೆ ಉಲ್ಲೇಖವಿರುವುದನ್ನು ಕಾಣಬಹುದು.
ಸಂಸ್ಕೃತದಲ್ಲಿ ಇದನ್ನು ವಚಾ ಎಂಬ ಹೆಸರಿನಿಂದ ಕರೆಯಲಾಗಿದ್ದು, ಹೆಸರೇ ಹೇಳುವಂತೆ ವಚಾ ಎಂದರೆ ಮಾತು ಎಂದರ್ಥ. ಅಂದರೆ ಬಜೆಯು ಮಾತಿನ ನರಮಂಡಲಗಳ ಮೇಲೆ ಪ್ರಭಾವವನ್ನು ಹೊಂದಿದೆ ಎಂಬುದನ್ನು ತಿಳಿಸುತ್ತದೆ. ಆದ್ದರಿಂದಲೇ ಈ ದ್ರವ್ಯವನ್ನು ಮಾತಿನ ರೋಗಗಳಲ್ಲಿ, ತೊದಲು, ಉಗ್ಗು, ಅಸ್ಪಷ್ಟ ಉಚ್ಚಾರ ಮುಂತಾದ ರೋಗಗಳಲ್ಲಿ ಬಳಸುವುದನ್ನು ಕಾಣಬಹುದು.
ಹಿಂದಿಯಲ್ಲಿ ಬಚಾ ಎಂದು ಕರೆಸಿಕೊಳ್ಳುವ ಇದು, ಆಂಗ್ಲ ಭಾಷೆಯಲ್ಲಿ ಸ್ವೀಟ್ ಫ್ಲಾಗ್ ಎಂದು ನಾಮಾಂಕಿತಗೊಂಡಿದೆ. ಕೆಲಾಮಸ್ ಎಂಬ ಪದವು ಇದರ ಪ್ರಸಿದ್ಧಿಗೆ ಕಾರಣವಾಗಿದೆ.
ಅತ್ಯಂತ ಹೆಚ್ಚಿನ ತನ್ನದೆ ಆದ ಉಗ್ರವಾಸನೆಯನ್ನು ಹೊಂದಿದ್ದರಿಂದ ಇದನ್ನು ಉಗ್ರ ಗಂಧ ಎಂಬುದಾಗಿಯು ಕರೆಯುತ್ತಾರೆ. ಬೇರಿನಲ್ಲಿ ಕೂದಲ ರೀತಿಯ ನಾಳಗಳನ್ನು ಹೊಂದಿದ್ದು ಲೊಮಶಾ ಎಂಬುದಾಗಿಯು, ಬಂಗಾರದ ಬಣ್ಣವನ್ನು ಹೊಂದಿರುವುದರಿಂದ ಹೇಮವತಿ ಎಂಬುದಾಗಿಯು ಇದನ್ನು ಕರೆಯುತ್ತಾರೆ. ಆಯುರ್ವೇದ ಹಾಗೂ ನಾಟೀ ವೈದ್ಯ ಪದ್ದತಿಯಲ್ಲಿ ಇದರ ಉಪಯೋಗವನ್ನು ಬಹಳವಾಗಿ ಕಾಣಬಹುದು.
ಚರಕಾಚಾರ್ಯರ ಪ್ರಕಾರ ಇದನ್ನು ಅರ್ಶಘ್ನ, ತೃಪ್ತಿಗ್ನ, ಅಸ್ತಾಪನೋಪಗ, ಶಿರೋವಿರೇಚನ, ಶೀತ ಪ್ರಶಮನವ ಲೇಖನೀಯ, ಎಂದು ಬಣ್ಣಿಸಲಾಗಿದೆ.
ಇದರ ಉಪಯೋಗವೇನು?
ಕಹಿ ಹಾಗೂ ಖಾರದ ರುಚಿಯನ್ನು ಹೊಂದಿರುವ ಇದು, ಲಗು ಹಾಗೂ ತೀಕ್ಷ್ಣ ಗುಣಗಳನ್ನು ಹೊಂದಿರುವುದರಿಂದ ದೇಹದಲ್ಲಿ ಕಫ ಹಾಗೂ ವಾತ ದೋಷಗಳನ್ನು ಹತೋಟಿಗೆ ತಂದು ಪಿತ್ತ ವೃದ್ಧಿಯನ್ನು ಮಾಡಬಲ್ಲದು.
ದೀಪನ, ಪಾಚನ, ಮದ್ಯಕರ, ಕೆಲಸವನ್ನು ದೇಹದಲ್ಲಿ ಮಾಡುವುದಾಗಿದ್ದು, ಹೊಟ್ಟೆ ಹುಳುಗಳ ನಾಶಕ, ಹೊಟ್ಟೆ ಉಬ್ಬರ, ಹೊಟ್ಟೆ ನೋವುಗಳನ್ನು ಹತೋಟಿಗೆ ತರುವುದಲ್ಲದೇ ಕಟ್ಟಿದ ಮಲ ಹೊರಹಾಕುವಲ್ಲಿ ಸಹಾಯಕವಾಗಿದೆ.
ಗರ್ಭಿಣಿಯರು ಸೇವಿಸಿದರೆ ಪ್ರಯೋಜನವೇನು?
ಗರ್ಭಿಣಿಯಲ್ಲಿ 5ನೆಯ ತಿಂಗಳಲ್ಲಿ ಮಗುವಿನ ಮನಸ್ಸು ಹಾಗೂ 6ನೆಯ ತಿಂಗಳಿನಲ್ಲಿ ಬುದ್ದಿಶಕ್ತಿಯು ಬೆಳವಣಿಗೆಯಾಗುತ್ತದೆ. ಈ ಹಂತದಲ್ಲಿ ಬಜೆ ಬಂಗಾರವನ್ನು ಸೇವಿಸುವುದರಿಂದ ಜನಿಸುವ ಮಗುವಿನ ಮಾನಸಿಕ ಸಾಮರ್ಥ್ಯ ಬಲವಾಗುವ ಜೊತೆಯಲ್ಲಿ ತೀಕ್ಷ್ಣ ಬುದ್ದಿಶಕ್ತಿಯೂ ಬೆಳೆಯುತ್ತದೆ.
- ಅಸ್ಪಷ್ಟ ಉಚ್ಛಾರಣೆ ನಿವಾರಣೆಯಾಗಿ ಸ್ಪಷ್ಟತೆ ಪಡೆಯಬಹುದು
- ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ
- ಬುದ್ದಿಶಕ್ತಿಯಲ್ಲಿ ತೀಕ್ಷ್ಣತೆ
- ಸದೃಢ ಮೈಕಟ್ಟು, ಕಾಂತಿಯುತ ಚರ್ಮ
- ಗ್ರಹ ಬಾಧೆಗಳ ನಿವಾರಣೆ
ಇತರೆ ಪ್ರಯೋಜನಗಳು:
- ಸ್ವರವನ್ನು ಸ್ವಚ್ಚಗೊಳಿಸಿ ಹಾಡುಗಾರರಿಗೆ ಸೂಕ್ತ ಔಷಧವಾಗಿದ್ದು, ಮನೆಯಲ್ಲಿ ಈ ಔಷಧವನ್ನು ಇಡುವುದರಿಂದ ನವಜಾತ ಶಿಶುಗಳಲ್ಲಿ ಕಾಡುವ ಗ್ರಹ ಭಾದೆ, ದೃಷ್ಟಿದೋಷಗಳನ್ನು ಹೊಗಲಾಡಿಸುತ್ತದೆ. ಇದರ ದೂಪದಿಂದ ಕ್ರಿಮಿ ಕೀಟಗಳು ನಾಷವಾಗುತ್ತದೆ.
- ಉಪಯೋಗಕ್ಕೆ ತರುವ ಮುಂಚೆ ಬಜೆಯನ್ನು ಶೋಧನೆಯನ್ನು ಮಾಡಿ ಅದರ ದೋಷವನ್ನು ತೆಗೆಯಲಾಗುತ್ತದೆ. ಇದಕ್ಕೆ ಹಲವಾರು ಕ್ರಮಗಳಿದ್ದು ಸುಲಭವಾಗಿ ಹಾಲಿನಲ್ಲಿ ಅಥವಾ ಮಜ್ಜಿಗೆಯಲ್ಲಿ ನೆನೆ ಇಟ್ಟು ತೆಗೆದು ಒಣಗಿಸಲಾಗುತ್ತದೆ.
- ಮರೆವು, ಸಿಟ್ಟು, ಕಿನ್ನತೆ, ಒತ್ತಡ ಕಾಯಿಲೆಗಳಲ್ಲಿ ಇದನ್ನು ಆಯುರ್ವೇದ ಶಾಸ್ತ್ರದಲ್ಲಿ ಬಳಸುವುದನ್ನು ಕಾಣಬಹುದು. ಪಿಟ್ಸ ಕಾಯಿಲೆಯಲ್ಲು ಇದರ ಔಷಧಿ ಗುಣ ಅಸಾಧಾರಣ ಪರಿಣಾಮ ನೀಡಿದೆ.
- ಎಕ್ಸಿಮ ಕಾಯಿಲೆಗಳಲ್ಲಿ ಇದನ್ನು ಲೇಪವಾಗಿ ಬಳಸಲಾಗುತ್ತದೆ. ಗಂಟು ನೋವು , ಆರ್ತ್ರೈಟಿಸ್ ಕಾಯಿಲೆಗಳಲ್ಲಿ ನೋವಿಗೆ ಲೇಪಕ್ಕೆ ಬಳಸಲಾಗುತ್ತದೆ.
- ಆಯುವೇದ ಶಾಸ್ತ್ರದಲ್ಲಿ ವಾತವ್ಯಾಧಿ, ಅಪಸ್ಮಾರ, ಅತಿಸಾತ, ವಿಭಂದ, ಆದ್ಮಾನ, ಶುಕ್ರದೋಷ, ಶೋಫ ಕಾಯಿಲೆಗಳಲ್ಲಿ ಬಳಸಲಾಗುತ್ತದೆ.
- ಹಲವು ಔಷಧಿಯ ಗುಣಗಳನ್ನು ಹೊಂದಿರುವ ಇಂತಹ ಗಿಡಮೂಲಿಕೆಯ ಬಗ್ಗೆ ಇನ್ನು ಹೆಚ್ಚಿನ ಸಂಶೋಧನೆಗಳು ಅವಶ್ಯಕವಿದ್ದು, ಮನೆಮದ್ದಾದ ಇದನ್ನು ಎಲ್ಲರು ತಮ್ಮ ಮನೆಯ ಹಿತ್ತಲಲ್ಲೆ ಸುಲಭವಾಗಿ ಬೆಳಸಿ ಇದರ ಹಲವಾರು ಉಪಯೋಗಗಳನ್ನು ಪಡೆಯಬಹುದು.
ಫೋನ್ ಮೂಲಕ ಆರ್ಡರ್ ಮಾಡಿ, ಶೇ.15ರಷ್ಟು ರಿಯಾಯ್ತಿ ಪಡೆಯಿರಿ!
- ಭದ್ರಾವತಿಯ ಉದ್ಗೀಥ ಆರ್ಯುವೇದ ಚಿಕಿತ್ಸಾಲಯದ ಡಾ.ಸುದರ್ಶನ್ ಕೆ. ಆಚಾರ್ ಹಾಗೂ ಕಾಂಚನ ಎಸ್. ಆಚಾರ್ ಅವರುಗಳ ಕಳೆದ 10 ವರ್ಷಗಳಲ್ಲಿ ಆರ್ಯುವೇದ ಚಿಕಿತ್ಸೆ ನೀಡುತ್ತಿದ್ದು, ನೂರಾರು ಮಂದಿಗೆ ಬಜೆ ಬಂಗಾರ ನೀಡಿದ್ದಾರೆ.
- ಪ್ರಮುಖವಾಗಿ, ರಸ ಶಾಸ್ತ್ರದಲ್ಲಿ ಎಂಡಿ ಮಾಡಿರುವ ಡಾ.ಸುದರ್ಶನ್ ಕೆ. ಆಚಾರ್ ಅವರ ವಿಶೇಷ ಆಸಕ್ತಿಯಿಂದ ಉದ್ಗೀಥ ಬಜೆ ಬಂಗಾರ ತಯಾರಿಸಿರುವುದು ವಿಶೇಷ.
- ನೀವು ಯಾವುದೇ ರಾಜ್ಯ, ನಗರದಲ್ಲಿದ್ದರೂ ಫೋನ್ ಮೂಲಕ ಆರ್ಡರ್ ಮಾಡಿ, ಕೊರಿಯರ್ ಮೂಲಕ ಬಜೆ ಬಂಗಾರವನ್ನು ತರಿಸಿಕೊಳ್ಳಬಹುದಾಗಿದೆ.
- ನಮ್ಮ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ಅಥವಾ ಎಸ್’ಎಂಎಸ್ ಮಾಡಿ ಇಂದೇ ಆರ್ಡರ್ ಮಾಡಿ, ಎಂಆರ್’ಪಿ ದರದ ಮೇಲೆ ಶೇ.15ರಷ್ಟು ರಿಯಾಯ್ತಿ ಪಡೆಯಿರಿ.
ಆರ್ಡರ್ ಮಾಡುವುದು ಹೇಗೆ?
- 91 8296371083 ಸಂಖ್ಯೆಗೆ ಕರೆ ಮಾಡಿ ಅಥವಾ ಎಸ್’ಎಂಎಸ್ ಮಾಡಿ ಉದ್ಗೀಥ ಬಜೆ ಬಂಗಾರ ಆರ್ಡರ್ ಮಾಡಿ
- ಆನ್’ಲೈನ್ ಮೂಲಕ ಬ್ಯಾಂಕ್ ಖಾತೆಗೆ ಅಥವಾ ಗೂಗಲ್ ಪೇ ಮೂಲಕವೂ ಪಾವತಿ ಮಾಡಿ
- ಹಣ ತಲುಪಿದ ನಂತರ ನಿಮ್ಮ ಮೊಬೈಲ್ ಸಂದೇಶ ಕಳುಹಿಸಲಾಗುತ್ತದೆ
- ಆರ್ಡರ್ ಮಾಡಿದ 48 ಗಂಟೆಯೊಳಗೆ ನಿಮ್ಮ ಬಜೆ ಬಂಗಾರವನ್ನು ಕೊರಿಯರ್ ಮೂಲಕ ಕಳುಹಿಸಲಾಗುತ್ತದೆ ಹಾಗೂ ನಿಮಗೆ ಸಂದೇಶವನ್ನೂ ಸಹ ಕಳುಹಿಸಲಾಗುತ್ತದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post