ಬೆಂಗಳೂರು: ಇತ್ತೀಚೆಗೆ ನಿಧನರಾದ ರಾಜಕಾರಣಿ, ಹಿರಿಯ ನಟ ಅಂಬರೀಶ್ ಅವರ ಹೆಸರನ್ನು ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಗೆ ನಾಮಕರಣ ಮಾಡಬೇಕು ಎಂದು ನಿರ್ಮಾಪಕ, ಫಿಲ್‌ಮ್ ಚೇಂಬರ್ ಕಾರ್ಯದರ್ಶಿ ಭಾ.ಮಾ. ಹರೀಶ್ ಮನವಿ ಮಾಡಿದ್ದಾರೆ.
ಈ ಕುರಿತಂತೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಟ್ವೀಟ್ ಮೂಲಕ ಮನವಿ ಮಾಡಿರುವ ಅವರು, ಚಿತ್ರರಂಗಕ್ಕೆ ಸಲ್ಲಿಸಿರುವ ಸೇವೆಯನ್ನು ಗುರುತಿಸಿ ಅವರ ಹೆಸರನ್ನು ರೇಸ್‌ಕೋರ್ಸ್ ರಸ್ತೆಗೆ ನಾಮಕರಣ ಮಾಡಬೇಕು. ಅದನ್ನು ಅಂಬರೀಷ್ ರಸ್ತೆಯೆಂದು ಬದಲಿಸಬೇಕು ಎಂದು ಮನವಿ ಮಾಡಿದ್ದಾರೆ.
ಅಂಬರೀಶ್ ರವರು ಚಿತ್ರರಂಗಕ್ಕೆ ಸಲ್ಲಿಸಿರು ಸೇವೆಯನ್ನು ಗುರುತಿಸಿ ಅವರ ಹೆಸರನ್ನು ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯನ್ನ ಅಂಬರೀಶ್ ರಸ್ತೆ ಎಂದು ಬದಲಿಸಿ ಎಂದು
ಮಾನ್ಯ ಮುಖ್ಯಮಂತ್ರಿಗಳಲಿ ಮನವಿ @hd_kumaraswamy– ಭಾ.ಮ.ಹರೀಶ್
ಕಾರ್ಯದರ್ಶಿಗಳು
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ pic.twitter.com/Ejm9yBo6Q7— BAMA HARISH (@BamaHarish) November 27, 2018







Discussion about this post