ಕಲ್ಪ ಮೀಡಿಯಾ ಹೌಸ್ | ಬಳ್ಳಾರಿ |
ರೇಣುಕಾಸ್ವಾಮಿ ಹತ್ಯೆ ಪ್ರಕರಣದ #Renukaswamy Murder Case ಆರೋಪಿ ಎ2 ನಟ ದರ್ಶನ್’ನಲ್ಲಿ #Actor Darshan ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ಇಂದು ಮುಂಜಾನೆ ಸ್ಥಳಾಂತರ ಮಾಡಲಾಗಿದೆ.
ಪರಪ್ಪನ ಅಗ್ರಹಾರ ಜೈಲಿನಲ್ಲಿ #Parappana Agrahara ವಿಶೇಷ ರಾಜಾತಿಥ್ಯ ಪಡೆಯುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ ನ್ಯಾಯಾಲಯದ ಅನುಮತಿ ಪಡೆದು ಪೊಲೀಸರು ಇಂದು ದರ್ಶನನನ್ನು ಸ್ಥಳಾಂತರ ಮಾಡಿದ್ದಾರೆ.

ಹೇಗಿದ್ದಾರೆ ದರ್ಶನ್?
ವಿಗ್ ಇಲ್ಲದೇ ಸಣ್ಣ ಕೂದಲಿನಲ್ಲಿರುವ ದರ್ಶನ್ ಕಪ್ಪು ಟೀ ಶರ್ಟ್ ತೊಟ್ಟು, ಎಡಗೈಗೆ ಕ್ರೇಪ್ ಬ್ಯಾಂಡ್ ಧರಿಸಿ, ಬೆಡ್ ಶೀಟ್, ಬಲಗೈಯಲ್ಲಿ ನೀರಿನ ಬಾಟಲ್ ಹಿಡಿದುಕೊಂಡು ದರ್ಶನ್ ಜೈಲಿನೊಳಗೆ ಪ್ರವೇಶಿಸಿದ್ದಾರೆ.
Also read: ಶಿವಮೊಗ್ಗಕ್ಕೆ ಮತ್ತೆ ಬರ್ತಿದಾರೆ ಕಿಡಿಗೇಡಿಗಳ ಪಾಲಿನ ಸಿಂಹಸ್ವಪ್ನ ಇನ್ಸ್’ಪೆಕ್ಟರ್ ಗುರುರಾಜ್

ಬಳ್ಳಾರಿ ಕಾರಾಗೃಹದ ಸೆಲ್ ನಂರ್ಬ 15ರಲ್ಲಿ ಅವರನ್ನು ಇಡಲಾಗುತ್ತಿದೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ 6106 ನಂಬರ್ ನೀಡಲಾಗಿತ್ತು. ಈಗ ಬಳ್ಳಾರಿ ಜೈಲಿನಲ್ಲಿ 511 ನಂಬರನ್ನು ದರ್ಶನ್’ಗೆ ನೀಡಲಾಗಿದೆ.
ಹುಚ್ಚು ಅಭಿಮಾನಿಗಳಿಗೆ ಲಾಠಿ ರುಚಿ
ದರ್ಶನನನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಗುತ್ತದೆ ಎಂಬ ಸುದ್ದಿ ಹೊರಬಿದ್ದ ನಂತರ ನಿನ್ನೆಯೇ ಅಲ್ಲಿನ ಕಾರಾಗೃಹದ ಬಳಿ ಅಭಿಮಾನಿಗಳು ನೆರೆದಿದ್ದರು.
ಇಂದು ಮುಂಜಾನೆ ಕರೆತರುವ ಮಾಹಿತಿಯ ಹಿನ್ನೆಲೆಯಲ್ಲಿ ಕಾರಾಗೃಹದ ಬಳಿಯಲ್ಲಿ ಅಭಿಮಾನಿಗಳು ನೆರೆದಿದ್ದರು. ಅಭಿಮಾನಿಗಳು ಕಾರಾಗೃಹದ ಪಕ್ಕ ಬೆಳಗ್ಗೆಯಿಂದಲೇ ಕಾದುಕುಳಿತಿದ್ದರು.
ಅಲ್ಲಿ ಸೇರಿದ್ದ ಜನರನ್ನು, ಪುಂಡಪೋಕರು, ಅಭಿಮಾನಿಗಳನ್ನು ಚದುರಿಸಲು ಪೊಲೀಸರು ಲಾಠಿಚಾರ್ಜ್ ಮಾಡಿ ಚದುರಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 







Discussion about this post