ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಬಳ್ಳಾರಿ ಕೇಂದ್ರ ಕಾರಾಗ್ರಹಕ್ಕೆ ನಟ ದರ್ಶನ್ #Actor Darshan ಸ್ಥಳಾಂತರ ಬೆನ್ನಲ್ಲೇ ನಟ ಚಿಕ್ಕಣ್ಣಗೆ #Actor Chikkanna ಮತ್ತೊಮ್ಮೆ ಸಂಕಷ್ಟ ಎದುರಾಗಿದೆ.
ಹೌದು.. ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ #Renukaswamy Murder Case ಸಂಬಂಧಪಟ್ಟಂತೆ ಚಿಕ್ಕಣ್ಣ ಸಾಕ್ಷಿ ಹೇಳಿಕೆ ನೀಡಿದ್ದರು. ಬಳಿಕ ಜೈಲಿನಲ್ಲಿ ಆರೋಪಿ ದರ್ಶನ್ ನ ಭೇಟಿ ಮಾಡಿದ ಹಿನ್ನೆಲೆ ತನಿಖಾಧಿಕಾರಿ ಎಸಿಪಿ ಚಂದನ್ ನಟ ಚಿಕ್ಕಣ್ಣಗೆ ನಿನ್ನೆ ತಡರಾತ್ರಿ ನೋಟೀಸ್ ಜಾರಿ ಮಾಡಿದ್ದರು. ನೋಟೀಸ್ ಹಿನ್ನೆಲೆ ನಟ ಚಿಕ್ಕಣ್ಣ ಇಂದು ಬೆಳಿಗ್ಗೆ ಬಸವೇಶ್ವರ ನಗರ ಠಾಣೆ ಎಸಿಪಿ ಮುಂದೆ ಹಾಜರಾಗಿದ್ದಾರೆ.
Also read: ಬಳ್ಳಾರಿ ಜೈಲಿಗೆ ದರ್ಶನ್ ಶಿಫ್ಟ್ | ಎಷ್ಟು ಖೈದಿ ನಂಬರ್ | ಹುಚ್ಚು ಅಭಿಮಾನಿಗಳಿಗೆ ಲಾಠಿ ರುಚಿ
ಚಿಕ್ಕಣ್ಣಗೆ ಪೊಲೀಸರು ಕೇಳಿದ ಸಂಭವನೀಯ ಪ್ರಶ್ನೆಗಳು
- ನಟ ದರ್ಶನ್ ಭೇಟಿ ಮಾಡಿದ ಕಾರಣ ಏನು…?
- ಭೇಟಿ ವೇಳೆ ಸಾಕ್ಷಿಯ ನುಡಿದ ಬಗ್ಗೆ ದರ್ಶನ್ ಕೇಳಿದ್ರಾ..?
- ದರ್ಶನ್ ಗೆ ನೀವು ನೀಡಿರುವ 164 ಹೇಳಿಕೆಯ ವಿವರ ಹೇಳಿದ್ರಾ.?
- ಸಾಕ್ಷಿ ನಡಿದಿರುವ ಬಗ್ಗೆ ದರ್ಶನ್ ಗೆ ಏನಾದ್ರು ಅಕ್ಷೇಪಣೆ ಇದೆ ಎಂದು ಹೇಳಿದ್ರಾ..?
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post