ಕಲ್ಪ ಮೀಡಿಯಾ ಹೌಸ್ | ಬಳ್ಳಾರಿ |
2024-25ನೇ ಸಾಲಿನಲ್ಲಿ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಎಫ್.ಎ.ಕ್ಯೂ ಗುಣಮಟ್ಟದ ತೊಗರಿ #Toordal ಖರೀದಿಗೆ ಸಂಬಂಧಿಸಿದಂತೆ, ಕೇಂದ್ರ ಸರ್ಕಾರದ ಬೆಂಬಲ ಬೆಲೆ ರೂ.7,550/- ರ ಜೊತೆಗೆ ರಾಜ್ಯ ಸರ್ಕಾರದ ಪ್ರೋತಾಹ ಧನ ರೂ.450/- ಪ್ರತಿ ಕ್ವಿಂಟಾಲ್ ಗೆ, ಸೇರಿ ಒಟ್ಟು ರೂ.8,000/- ಪ್ರತಿ ಕ್ವಿಂಟಾಲ್ ರಂತೆ ತೊಗರಿ ಖರೀದಿಸಲು ಜವಳಿ, ಕಬ್ಬು ಅಭಿವೃಧಿ, ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್ #Minister Shivananda Patil ಅವರು ಕಳೆದ ಜನವರಿ ಮಾಹೆಯಲ್ಲಿ ಭರವಸೆ ನೀಡಿದ್ದರು.
ಈ ಸಂಬಂಧ ಮಾನ್ಯ ಮುಖ್ಯ ಮಂತ್ರಿಗಳು ಅನುಮೋದನೆ ನೀಡಿದ್ದು, ಆರ್ಥಿಕ ಇಲಾಖೆಯೂ ಸಹ ಸಹಮತಿ ನೀಡಿದೆ. ಈ ಕುರಿತು ಸಂಭದಿಸಿದ ಇಲಾಖೆಗೆ ತಕ್ಷಣದಿಂದ ಅನುಷ್ಠಾನಗೊಳಿಸಲು ಸೂಕ್ತ ನಿರ್ದೇಶನ ನೀಡಲಾಗಿದೆ.
Also read: ಮೆಡಿಕಲ್ ವಿದ್ಯಾರ್ಥಿಗಳು ಸಂಶೋಧನೆಯಲ್ಲಿ ತೊಡಗಿಸಿಕೊಳ್ಳಿ: ಡಾ. ಉನ್ನಿಕೃಷ್ಣನ್ ಕರೆ

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post