ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ವೈದ್ಯಕೀಯ ವಿದ್ಯಾರ್ಥಿಗಳು ಮೊದಲ ವರ್ಷದಿಂದಲೇ ಸಂಶೋಧನೆಗಳ ಕುರಿತಾಗಿ ಯೋಚಿಸಿ, ಅದರಲ್ಲಿ ತೊಡಗಿಸಿಕೊಳ್ಳಬೇಕು ಎಂದು ಮಂಗಳೂರಿನ ಕಸ್ತೂರಬಾ ಮೆಡಿಕಲ್ ಕಾಲೇಜಿನ ಡೀನ್ ಡಾ.ಬಿ. ಉನ್ನಿಕೃಷ್ಣನ್ ಕರೆ ನೀಡಿದರು.
ಸುಬ್ಬಯ್ಯ ವೈದ್ಯಕೀಯ ಕಾಲೇಜಿನಲ್ಲಿ #Subbaiah Medical College `ಸುಬ್ಬಯ್ಯ ಸ್ಟೂಡೆಂಟ್ ರಿಸರ್ಚ್ ಕೌನ್ಸಿಲ್’ ಉದ್ಘಾಟಿಸಿ ಅವರು ಮಾತನಾಡಿದರು.
ಯುವ ಮನಸ್ಸುಗಳು ವಿಭಿನ್ನ ಚಿಂತನೆಗಳಿಗೆ ತೆರೆದುಕೊಳ್ಳಲು ಸಂಶೋಧನೆ ಅವಶ್ಯವಾಗಿದೆ. ಸುಮಾರು 25 ವರ್ಷಗಳ ಹಿಂದೆ ನಾವು ಮಣಿಪಾಲ ಕಾಲೇಜಿನಲ್ಲಿ ಮಾಡಿದ್ದೆವು. ಅದರಿಂದ ವೈದ್ಯಕೀಯ ಕ್ಷೇತ್ರಕ್ಕೆ ಬಹಳಷ್ಟು ಕೊಡುಗೆ ನೀಡಲಾಗಿದೆ ಎಂದರು.
ವೈದ್ಯಕೀಯ ವಿದ್ಯಾರ್ಥಿಗಳು #Medical Students ಮೊದಲ ವರ್ಷದಿಂದಲೇ ಸಂಶೋಧನಾತ್ಮಕ ಮನಃಸ್ಥಿತಿಯನ್ನು ಬೆಳೆಸಿಕೊಳ್ಳಬೇಕು. ಇದು ಬದಲಾವಣೆಗೆ ಒಂದು ಅವಕಾಶವಾಗಿದ್ದು, ಇದನ್ನು ಸದುಪಯೋಗ ಮಾಡಿಕೊಳ್ಳಬೇಕು. ಎಐ ಬಂದ ನಂತರ ವೈದ್ಯಕೀಯ ಕ್ಷೇತ್ರದಲ್ಲಿ ಬಹಳಷ್ಟು ಬದಲಾವಣೆಯಾಗಿದೆ. ಇದಕ್ಕೆ ಪೂರಕವಾಗಿ ರಿಸರ್ಚ್ ಆದರೆ ಇನ್ನೂ ಬದಲಾವಣೆಯಾಗಲಿದೆ ಎಂದರು.
ವಿದ್ಯಾರ್ಥಿಗಳು ಸಂಶೋಧನೆಯಲ್ಲಿ ತೊಡಗಿಕೊಂಡರೆ ಇಂಟರ್ ಡಿಸಿಪ್ಲೀನರಿ ಕಲಿಸುತ್ತದೆ. ಇದರಲ್ಲಿ ಆಸಕ್ತಿ ಬೆಳೆಸಿಕೊಳ್ಳಲು ಉಪನ್ಯಾಸಕರು ಹಾಗೂ ಎಚ್’ಒಡಿಗಳು ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಬೇಕು ಎಂದು ತಿಳಿಸಿದರು.
Also read: ಬೆಂಗಳೂರು | ಮೈಕೋ ವಿಪ್ರಸಭಾದಿಂದ NR ಕಾಲೋನಿಯಲ್ಲಿ ಗಾಯತ್ರಿ ಹೋಮ, ವಿದ್ಯಾರ್ಥಿ ವೇತನ ವಿತರಣೆ
ಪ್ರಮುಖವಾಗಿ ವೈದ್ಯಕೀಯ ವಿದ್ಯಾರ್ಥಿಗಳು ಸಂಶೋಧನಾತ್ಕಕ ಲೇಖನಗಳನ್ನು ಬರೆಯಬೇಕು. ಇದರೊಟ್ಟಿಗೆ ಪ್ರಶ್ನೆ ಮಾಡುವುದು ಹಾಗೂ ವಿಚಾರಗಳನ್ನು ತಿಳಿದುಕೊಳ್ಳುವುದನ್ನು ಕಲಿಯಬೇಕು. ಈ ಕೌನ್ಸಿಲ್ ಮೂಲಕ ಬೇರೆ ಕಾಲೇಜಿನ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲು ಅವಕಾಶವಿದೆ. ಇದನ್ನು ಸದುಪಯೋಗ ಮಾಡಿಕೊಳ್ಳಿ ಎಂದು ಕರೆ ನೀಡಿದರು.
ಸುಬ್ಬಯ್ಯ ವೈದ್ಯಕೀಯ ಕಾಲೇಜಿನ ವೈದ್ಯಕೀಯ ನಿರ್ದೇಶಕ ಡಾ.ಎಸ್. ನಾಗೇಂದ್ರ ಮಾತನಾಡಿ, ನಾವೆಲ್ಲಾ ಎಂಬಿಬಿಎಸ್ ಮಾಡುವಾಗ ಇಂಟರ್’ನೆಟ್, ರಿಸರ್ಚ್ ಗೈಡ್ ಮಾಡುವವರು ಇರಲಿಲ್ಲ. ಆದರೂ ಆಸಕ್ತಿ ಮೂಡಿಸುವ ವಾತಾವರಣ ಮಣಿಪಾಲದಲ್ಲಿತ್ತು. ಎಲ್ಲರಿಗೂ ಶಿಕ್ಷಣ ಒಂದು ಕನಸು. ಆದರೆ, ಅದನ್ನು ಮೀರಿ ಸಂಶೋಧನೆಯಲ್ಲಿ ತೊಡಗಿಕೊಂಡು ಜ್ಞಾನ ವೃದ್ಧಿಸಿಕೊಂಡರೆ ನಿಜವಾದ ವೈದ್ಯರಾಗಿ ಬೆಳೆಯುತ್ತೀರಾ. ಇದರಿಂದ ಸಾಧನೆ ಸಾಧ್ಯ ಎಂದರು.
ಕಾಲೇಜಿನ ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ. ಲತಾ ನಾಗೇಂದ್ರ ಮಾತನಾಡಿ, ವಿದ್ಯಾರ್ಥಿಗಳ ಜ್ಞಾನ ವೃದ್ಧಿಗಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಇದನ್ನು ಸದುಪಯೋಗ ಮಾಡಿಕೊಂಡು ಪ್ರತಿ ವಿದ್ಯಾರ್ಥಿಯೂ ವೈದ್ಯಕೀಯ ಕ್ಷೇತ್ರದಲ್ಲಿ ಸಂಶೋಧನೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಸಾಧನೆ ಮಾಡಬೇಕು ಎಂದರು.
ವೈದ್ಯಕೀಯ ಕ್ಷೇತ್ರದಲ್ಲಿ ಸಂಶೋಧನೆ ಎನ್ನುವುದು ಮಹತ್ವದ ಪಾತ್ರ ವಹಿಸುತ್ತದೆ. ಕೇವಲ ವೈದ್ಯರಾಗಿ ಹೊರಹೊಮ್ಮುವ ಬದಲಾಗಿ ಸಂಶೋಧನೆಯ ಮನಃಸ್ಥಿತಿಯೊಂದಿಗೆ ಸಾಧಿಸುವುದು ವೃತ್ತಿ ಜೀವನದಲ್ಲಿ ಪರಿಪೂರ್ಣತೆಯನ್ನು ನೀಡುತ್ತದೆ ಎಂದರು.
ಸುಬ್ಬಯ್ಯ ಸ್ಟೂಡೆಂಟ್ ರಿಸರ್ಚ್ ಸೆಂಟರ್ ಆರಂಭದ ಹಿಂದೆ ಡಾ. ಲತಾ ನಾಗೇಂದ್ರ ಅವರ ಶ್ರಮ ದೊಡ್ಡದಿದೆ.
ಕಾಲೇಜಿನ ಡೀನ್ ಡಾ.ವಿನಾಯಕ್ ಮಾತನಾಡಿದರು. ಪ್ರಾಂಶುಪಾಲ ಡಾ.ಸಿದ್ದಲಿಂಗಪ್ಪ, ಕಮ್ಯುನಿಟಿ ಮೆಡಿಸನ್ ಎಚ್’ಒಡಿ ಡಾ.ಪಿ.ಎಸ್. ಬಾಲು, ಪೀಡಿಯಾಟ್ರಿಕ್ ವಿಭಾಗದ ಎಚ್’ಒಡಿ ಡಾ. ವಿಕ್ರಂ, ಮೈಕ್ರೋ ಬಯಾಲಜಿ ವಿಭಾಗದ ಡಾ.ಎಸ್. ಆರ್. ರಮ್ಯಾ ಸೇರಿದಂತೆ ಹಲವರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post