ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಲೋಕಸಭಾ ಚುನಾವಣೆಯ ಮತ ಎಣಿಕೆ #Lok Sabha Election Counting ಮುಂದುವರೆದಿದ್ದು ಮಂಡ್ಯ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ #H D Kumaraswamy 1.32 ಲಕ್ಷಕ್ಕೂ ಅಧಿಕ ಮತಗಳ ಅಂತರ ಕಾಯ್ದುಕೊಂಡು ಮುಂದಿದ್ದಾರೆ.
11 ಗಂಟೆಯ ಮಾಹಿತಿಯಂತೆ ಕುಮಾರಸ್ವಾಮಿ ಅವರು 1 ಲಕ್ಷಕ್ಕೂ ಅಧಿಕ ಮತಗಳಿಂದ ಮುಂದಿದ್ದಾರೆ. ಅಲ್ಲದೇ, ಈ ಚುನಾವಣೆಯಲ್ಲಿ 1 ಲಕ್ಷಕ್ಕೂ ಅಧಿಕ ಲೀಡ್ ಪಡೆದ ಮೊದಲ ಅಭ್ಯರ್ಥಿ ಕುಮಾರಸ್ವಾಮಿ ಅವರು ಆಗಿದ್ದಾರೆ.
ಇನ್ನು, ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಸುಮಾರು 1.2 ಲಕ್ಷಕ್ಕೂ ಅಧಿಕ ಮತಗಳ ಅಂತರಿದಿಂದ ಮುನ್ನಡೆ ಪಡೆದಿದ್ದಾರೆ.
ಯಾವ ಕ್ಷೇತ್ರದಲ್ಲಿ ಯಾರು ಮುನ್ನಡೆ?
ಚಿಕ್ಕಬಳ್ಳಾಪುರ-ಬಿಜೆಪಿ- ಡಾ.ಸುಧಾಕರ್- 35 ಸಾವಿರಕ್ಕೂ ಅಧಿಕ ಲೀಡ್
ಬೆಳಗಾಗಿ-ಬಿಜೆಪಿ-ಜಗದೀಶ್ ಶೆಟ್ಟರ್-95 ಸಾವಿರಕ್ಕೂ ಅಧಿಕ ಲೀಡ್
ಮೈಸೂರು-ಬಿಜೆಪಿ-ಯದುವೀರ್- 40 ಸಾವಿರಕ್ಕೂ ಅಧಿಕ ಲೀಡ್
ಚಿತ್ರದುರ್ಗ-ಬಿಜೆಪಿ-ಗೋವಿಂದ ಕಾರಜೋಳ- 36 ಸಾವಿರಕ್ಕೂ ಅಧಿಕ ಲೀಡ್
ಬೆಂಗಳೂರು ಗ್ರಾಮಾಂತರ-ಬಿಜೆಪಿ-ಡಾ.ಮAಜುನಾಥ್-90 ಸಾವಿರಕ್ಕೂ ಅಧಿಕ ಲೀಡ್
ಚಿಕ್ಕೋಡಿ-ಕಾಂಗ್ರೆಸ್-ಪ್ರಿಯಾAಕ್ ಜಾರಕಿಹೊಳಿ- 52 ಸಾವಿರ ಲೀಡ್
ಕೊಪ್ಪಳ-ಬಿಜೆಪಿ-ರಾಜೇಶ್ ಹಿಟ್ನಾಳ್ – 10 ಸಾವಿರಕ್ಕೂ ಲೀಡ್
ಬೆಳಗಾವಿ-ಬಿಜೆಪಿ-ಜಗದೀಶ್ ಶೆಟ್ಟರ್ –
ಬೆಂಗಳೂರು ದಕ್ಷಿಣ-ಬಿಜೆಪಿ-ತೇಜಸ್ವಿ ಸೂರ್ಯ-99 ಸಾವಿರಕ್ಕೂ ಅಧಿಕ ಲೀಡ್
ಉಡುಪಿ-ಚಿಕ್ಕಮಗಳೂರು-ಬಿಜೆಪಿ-ಕೋಟಾ ಶ್ರೀನಿವಾಸ್ ಪೂಜಾರಿ – 1 ಲಕ್ಷಕ್ಕೂ ಅಧಿಕ ಲೀಡ್
ಚಾಮರಾಜ ನಗರ-ಕಾಂಗ್ರೆಸ್-ಸುನಿಲ್ ಬೋಸ್-35 ಸಾವಿರಕ್ಕೂ ಅಧಿಕ ಲೀಡ್
ಹಾಸನ-ಕಾಂಗ್ರೆಸ್-ಶ್ರೇಯಸ್ ಪಟೇಲ್-5 ಸಾವಿರ ಲೀಡ್
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post