ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಶ್ರೀ ಅಖಿಲ ಹವ್ಯಕ ಮಹಾಸಭೆಯು ನೀಡುವ ವಾರ್ಷಿಕ ಹವ್ಯಕ ವಿಶೇಷ ಪ್ರಶಸ್ತಿಗೆ ಸಾಧಕರನ್ನು ಆಯ್ಕೆ ಮಾಡಲಾಗಿದ್ದು, ಮಾರ್ಚ 31 ಭಾನುವಾರ ನಡೆಯುವ 81 ನೆಯ ವರ್ಷದ ಹವ್ಯಕ ಸಂಸ್ಥಾಪನೋತ್ಸವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.
ಮಲ್ಲೇಶ್ವರದಲ್ಲಿರುವ ಹವ್ಯಕ ಭವನದಲ್ಲಿ ಭಾನುವಾರ ಸಂಜೆ 04 ಗಂಟೆಗೆ ನಡೆಯುವ ಸಂಸ್ಥಾಪನೋತ್ಸವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.

ಹವ್ಯಕ ವಿಭೂಷಣ:
ಹೆಚ್. ಎಂ. ತಿಮ್ಮಪ್ಪ ಕಲಸಿ – ಸಾಹಿತ್ಯ
Also read: ಬಿ.ವೈ. ರಾಘವೇಂದ್ರ ಅವರದು ‘ಕುಲಘಾತುಕ’ ಸಂಸ್ಕೃತಿ: ಆಯನೂರು ಮಂಜುನಾಥ್ ವಾಗ್ದಾಳಿ
ಹವ್ಯಕ ಭೂಷಣ:
ಗಣೇಶ್ ಎಲ್ ಭಟ್ – ಶಿಲ್ಪಶಾಸ್ತ್ರ
ಶಿವಾನಂದ ಕಳವೆ – ಪರಿಸರ
ಯೋಗರತ್ನ ಶ್ರೀ ಗೋಪಾಲಕೃಷ್ಣ
ದೇಲಂಪಾಡಿ – ಯೋಗ

ಗಿರಿಧರ್ ದಿವಾನ್ – ಛಾಯಾಗ್ರಹಣ, ಸಂಗೀತ ನಿರ್ದೇಶನ
ಗಣೇಶ್ ದೇಸಾಯಿ – ಸಂಗೀತ
ಮಂಗಳ ಬಾಲಚಂದ್ರ – ಕಥಾಕೀರ್ತನಕಾರರು
ಹವ್ಯಕ ಸೇವಾಶ್ರೀ
ಶ್ರೀಕಾಂತ ಹೆಗಡೆ ಅಂತ್ರವಳ್ಳಿ, ವಿಶ್ರಾಂತ ಸಂಪಾದಕರು ‘ಹವ್ಯಕ’ ಪತ್ರಿಕೆ

ಸಮಾಜದ ಅರ್ಹ ಸಾಧಕರನ್ನು ಗುರುತಿಸಿ; ಆಯ್ಕೆಯ ಮಾನದಂಡಗಳ ಅನ್ವಯ ಪ್ರಶಸ್ತಿಗಳನ್ನು ನೀಡಲಾಗುತ್ತಿದ್ದು, ಮಹಾಸಭೆಯ ಸದಸ್ಯರುಗಳು ಪ್ರಶಸ್ತಿಗೆ ಹೆಸರುಗಳನ್ನು ಸೂಚಿಸಬಹುದಾಗಿದ್ದು; ಸ್ವಯಂ ಅಭ್ಯರ್ಥಿಗಳೇ ಪ್ರಶಸ್ತಿಗಾಗಿ ಅರ್ಜಿಸಲ್ಲಿಸಲು ಅವಕಾಶವಿರುವುದಿಲ್ಲ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post