ಕಲ್ಪ ಮೀಡಿಯಾ ಹೌಸ್
ಬೆಂಗಳೂರು: ಕೋವಿಡ್-19 ದೇಶದೆಲ್ಲೆಡೆ ಶರವೇಗದಲ್ಲಿ ಹರಡುತ್ತಿದ್ದು ಇದರ (ಚೈನ್ ಲಿಂಕ್) ಕೊಂಡಿ ಕಳಚುವ ಸಲುವಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಈಗಾಗಲೇ ಜನತಾ ಕರ್ಫ್ಯೂ ಈಗಾಗಲೇ ಜಾರಿ ಮಾಡಲಾಗಿದೆ. ಇದರ ಪರಿಣಾಮ ನಿರ್ಗತಿಕರಿಗೆ – ಬಡವರಿಗೆ, ಕೂಲಿಕಾರ್ಮಿಕರಿಗೆ ಡಾ. ಕೆ.ವೈ. ರಾಮಚಂದ್ರ ನೇತೃತ್ವದಲ್ಲಿ ಕನ್ನಡ ತಿಂಡಿ ಕೇಂದ್ರ ಹಾಗೂ ಕನ್ನಡ ಸಾಂಸ್ಕೃತಿಕ ಕೇಂದ್ರದ ವತಿಯಿಂದ ಬನ್ ಹಾಗೂ ಕುಡಿಯುವ ನೀರನ್ನು ಹಂಚಿ ಹಸಿದವರನ್ನು ಸಂತೈಸುವ ಅಭಿಯಾನವನ್ನು ಆರಂಭಗೊಳಿಸಲಾಗಿದೆ.
ಇಂತಹ ವಿಷಮ ಪರಿಸ್ಥಿತಿಯಲ್ಲಿ ನಗರದ ಪ್ರಮುಖ ರಸ್ತೆಗಳಲ್ಲಿ ಹಸಿವು ಹಾಗೂ ಬಾಯಾರಿಕೆಯಿಂದ ಬಳಲುವ ನಿರ್ಗತಿಕರನ್ನು, ಕೂಲಿ ಕಾರ್ಮಿಕರನ್ನು, ಪುಟ್‌ಪಾತ್ ಮೇಲೆ ಮಲಗಿರುವ ಭಿಕ್ಷುಕರಿಗೆ ಆಹಾರ ನೀಡುವ ಅಭಿಯಾನವನ್ನು ಹಮ್ಮಿಕೊಳ್ಳುವ ಮೂಲಕ ಹಸಿದವರ ನೆರವಿಗೆ ನಿಂತಿದೆ.
ಪೊಲೀಸ್ ಹಾಗೂ ಆರೋಗ್ಯ ಇಲಾಖೆ ಕಾರ್ಯ ಶ್ಲಾಘನೀಯ:
ಚಾಮರಾಜ ಪೇಟೆ, ಮಾರ್ಕೆಟ್, ಮಂಡಿ ಪೇಟೆ ಸೇರಿದಂತೆ ನಗರದ ವಿವಿಧ ಭಾಗಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪೊಲೀಸ್ ಇಲಾಖೆ ಸಿಬ್ಬಂದ್ದಿಗಳಿಗೂ ಸಹ ಬನ್ ಹಾಗೂ ನೀರು ವಿತರಿಸಲಾಯಿತು.
ಕನ್ನಡ ತಿಂಡಿ ಕೇಂದ್ರದ ಪ್ರಮುಖ ಡಾ. ಕೆ.ವೈ. ರಾಮಚಂದ್ರ ಮಾತನಾಡಿ, ಆಸ್ಪತ್ರೆಯಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡವಲ್ಲಿ ವೈದ್ಯಕೀಯ ಸಿಬ್ಬಂದಿ ವರ್ಗದವರು ನಿತರರಾಗಿದ್ದು, ಈ ಕಠಿಣ ಪರಿಸ್ಥಿತಿಯಿಂದ ನಾವೆಲ್ಲರೂ ಹೊರ ಬರಬೇಕಾಗಿದೆ. ಈ ಸಂದರ್ಭದಲ್ಲಿ ಪೊಲೀಸ್ ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿಗಳ ಕಾರ್ಯ ಶ್ಲಾಘನೀಯ ಎಂದರು.
ಇದು ಬರಿ ಮೂರು ದಿನದ ಕೆಲಸವಲ್ಲ ಲಾಕ್ ಡೌನ್ ಎಲ್ಲಿಯವರೆಗೆ ಸರ್ಕಾರ ವಿಧಿಸುತ್ತದೆಯೋ, ಅಲ್ಲಿಯವರೆಗೆ ನಾವು ನಿರಂತರ ಹಸಿದವರಿಗೆ ಊಟ ನೀಡುವ ವ್ಯವಸ್ಥೆಯನ್ನು ಮಾಡುತ್ತೇವೆ ಎಂದು ಹೇಳಿದರು.
ಡಾ . ಕೆ ವೈ ರಾಮಚಂದ್ರ ಅವರ ಫೇಸ್‌ಬುಕ್ ಪೇಜ್ ನೋಡಿ ಮೂಲತಃ ಬೆಂಗಳೂರಿನವರಾದ ರಘು ರಾಮ್ ಅವರು ಜರ್ಮನಿಯಿಂದ ಕರೆ ಮಾಡಿ, ನಿಮ್ಮ ಜೊತೆ ನಾವೂ ಇದ್ದೇವೆ, ನಮ್ಮ ಕೈಯಲ್ಲಿ ಆಗುವ ಸಹಾಯ ಮಾಡುತ್ತೇವೆ. ಹಸಿದವರ ಹಸಿವು ತಣಿಸುವ ನಿಮ್ಮ ಅಭೂತ ಪೂರ್ವ ಕಾರ್ಯಕ್ರಮವನ್ನು ಹೀಗೆ ಮುಂದುವರೆಸಿ. ಇಂದು ಕಷ್ಟದ ದಿನಗಳು, ನಾಡಿನ ಜನತೆಗೆ ನಿಮ್ಮಂಥ ಸಾಮಾಜಿಕ ಕಾರ್ಯ ಮಾಡುವ ಜನರ ಅಗತ್ಯವಿದ್ದು, ತಮ್ಮ ಸಂಪೂರ್ಣ ಬೆಂಬಲ ಇದೆ ಎಂದು ಹೇಳಿದ್ದಾರೆ.
-ಡಾ. ಕೆ.ವೈ. ರಾಮಚಂದ್ರ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post