ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಬಿಎಂಶ್ರೀ ಪ್ರತಿಷ್ಠಾನದ ವತಿಯಿಂದ ನರಸಿಂಹರಾಜ ಕಾಲೋನಿಯ ಬಿಎಂಶ್ರೀ ಕಲಾಭವನದಲ್ಲಿ #BMSriKalabhavan ಆಯೋಜಿಸಲಾಗಿದ್ದ ನಾಡಿನ ಪ್ರತಿಷ್ಠಿತ ಕವಿಗಳಿಂದ ರಚಿಸಲ್ಪಟ್ಟ ಪ್ರಸಿದ್ದ ಭಾವಗೀತೆಗಳ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
ಶ್ರೀಮತಿ ರಂಗನಾಯಕಮ್ಮ ಮತ್ತು ಶ್ರೀ ಜಿ. ಸುಬ್ಬರಾವ್ ದತ್ತಿ ಕಾರ್ಯಕ್ರಮದ ಅಡಿಯಲ್ಲಿ ವಿದುಷಿ ಭವಾನಿ ಎಂ. ರಾವ್ ಅವರು ನಾಡಿನ ಪ್ರತಿಷ್ಠಿತ ಕವಿಗಳಿಂದ ರಚಿಸಲ್ಪಟ್ಟ ಪ್ರಸಿದ್ಧ ಭಾವಗೀತೆಗಳನ್ನು #Bhavageethe ಪ್ರಸ್ತುತ ಪಡಿಸಿದರು.
Also Read>> ಕೈತೋಟದಿಂದ ಎಷ್ಟೆಲ್ಲಾ ಪ್ರಯೋಜನವಿದೆ? ಕೃಷಿ ವಿವಿ ವಿದ್ಯಾರ್ಥಿಗಳು ಎಷ್ಟು ಚೆಂದ ವಿವರಿಸಿದ್ದಾರೆ ಓದಿ

Also Read>> ಸೊರಬ ಶ್ರೀ ರಂಗನಾಥ ಸಹಕಾರ ಸಂಘದ ಅಧ್ಯಕ್ಷರ ಆಯ್ಕೆಯಲ್ಲಿ ಹೊಸ ದಿಕ್ಕು
ಇವರ ಗಾಯನಕ್ಕೆ ಕೀ-ಬೋರ್ಡ್ ವಾದನದಲ್ಲಿ ಟಿ.ಎಸ್. ರಮೇಶ್ ಮತ್ತು ತಬಲಾ ವಾದನದಲ್ಲಿ ಶ್ರೀ ಶ್ರೀನಿವಾಸ ಕಾಖಂಡಕಿ ಸಾಥ್ ನೀಡಿದರು. ಪ್ರತಿಷ್ಠಾನದ ಹಸ್ತಪ್ರತಿ ವಿಭಾಗದ ಮುಖ್ಯಸ್ಥರಾದ ಗುರುಪ್ರಸಾದ್ ಸ್ವಾಗತಿಸಿ, ಗೌರವ ಕಾರ್ಯದರ್ಶಿ ಡಾ.ಶಾಂತರಾಜು ವಂದನಾರ್ಪಣೆ ಮಾಡಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post