ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಗಣೇಶ ವಿಸರ್ಜನೆ ವೇಳೆ ಮೆರವಣಿಗೆ ಮೇಲೆ ಮುಸ್ಲೀಂ ಯುವಕರು ನಡೆಸಿದ ಗಲಭೆ ವಿಚಾರದಲ್ಲಿ ರಾಜ್ಯ ಗೃಹ ಸಚಿವ ಡಾ.ಜಿ. ಪರಮೇಶ್ವರ್ #Home Minister Parameshwar ಅವರು ಲಘು ಹೇಳಿಕೆ ನೀಡಿದ್ದು, ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಘಟನೆ ಕುರಿತಂತೆ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ನಾಗಮಂಗಲದಲ್ಲಿ ಕಲ್ಲು ತೂರಾಟ #Nagamangala Riots ಸಂಭವಿಸಿದ್ದು, ಸಣ್ಣ ಘಟನೆಯಾಗಿದೆ ಎಂದು ತಾತ್ಸಾರವಾಗಿ ಪ್ರತಿಕ್ರಿಯಿಸಿದ್ದಾರೆ.
Also read: PESIT ಶಿಕ್ಷಣ ಸಂಸ್ಥೆಗೆ ಅಮೇರಿಕಾದ ಪ್ರತಿಷ್ಠಿತ ಸಾಫ್ಟ್‌ವೆರ್ ಕಂಪೆನಿಯ ಪಾರ್ಟನರ್ಶಿಪ್ ಪ್ರಮಾಣಪತ್ರ
ಇಂತಹ ಘಟನೆ ನಡೆಯಬಾರದಿತ್ತು. ಗಣೇಶ ಮೂರ್ತಿ ವಿಸರ್ಜನೆ ಮೆರವಣಿಗೆ ವೇಳೆ ಆಕಸ್ಮಿಕವಾಗಿ ಕಲ್ಲು ತೂರಾಟ ನಡೆದಿದೆ. ಇದೊಂದು ಸಣ್ಣ ಘಟನೆ ಅಷ್ಟೆ. ಇದನ್ನು ಕೋಮುಗಲಭೆ ಎಂದು ಹೇಳುವುದು ತಪ್ಪಾಗುತ್ತದೆ ಎಂದಿದ್ದಾರೆ.
ನಾಗಮಂಗಲದಲ್ಲಿ ನಿನ್ನೆ ಘಟನೆ ನಡೆಯಬಾರದಿತ್ತು. ಸಣ್ಣ ಪ್ರಮಾಣದಲ್ಲಿ ಆಗಿ ಮುಗಿದಿದ್ದು, ಯಾರೂ ಗಾಯಗೊಂಡಿಲ್ಲ. ಆಕಸ್ಮಿಕವಾಗಿ ಅಲ್ಲಿ ಹೋಗುವಾಗ ಕಲ್ಲು ಹಾಕಿದ್ದಾರೆ. ಇವರು ಕಲ್ಲು ಹಾಕಿz್ದÁರೆ. ಈ ಪ್ರಕರಣಕ್ಕೆ ಜಾಸ್ತಿ ಪ್ರಚಾರ ನೀಡುವುದು ಬೇಡ ಎಂದು ಹೇಳಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post