ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಇಲ್ಲಿನ ಇಂದಿರಾ ನಗರದಲ್ಲಿ ಸಂಭವಿಸಿದ ಭೀಕರ ಸರಣಿ ಅಪಘಾತದಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, ಮೊತ್ತೋರ್ವನ ಸ್ಥಿತಿ ಚಿಂತಾಜನಕವಾಗಿದೆ ಎಂದು ವರದಿಯಾಗಿದೆ.
80ft Road Indira Nagar in Bengaluru witnessed a major accident today afternoon. Benz car allegedly speeding on road caused a serial collision. One dead, few injured. Two cars, an auto & tempo have damages. Traffic diverted frm rd @XpressBengaluru @NewIndianXpress @KannadaPrabha pic.twitter.com/WbSemhaouf
— S. Lalitha (@Lolita_TNIE) December 7, 2021
ಇಲ್ಲಿನ 80 ಅಡಿ ರಸ್ತೆಯಲ್ಲಿ ಆಡಿ ಕಾರಿನ ಅತಿ ವೇಗದ ಚಾಲನೆಯೇ ಅಪಘಾತಕ್ಕೆ ಕಾರಣ ಎಂದು ಹೇಳಲಾಗಿದೆ.
ಆಡಿ ಕಾರು ಡಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿದ್ದು, ಘಟನೆಯಲ್ಲಿ ಎರಡು ಕಾರು, ಆಟೋ ಮತ್ತು ಗೂಡ್ಸ್ ವಾಹನಗಳು ಬಹುತೇಕ ನಜ್ಜುಗುಜ್ಜಾಗಿವೆ. ಒಂದು ಕಾರು ಸಂಪೂರ್ಣ ಜಖಂಗೊಂಡಿರುವುದು ಅಪಘಾತದ ತೀವ್ರತೆಯನ್ನು ಹೇಳುತ್ತಿದೆ.
ಅವಘಡದಲ್ಲಿ ಓರ್ವ ಮೃತಪಟ್ಟಿದ್ದು, ಇನ್ನೋರ್ವನ ಸ್ಥಿತಿ ಚಿಂತಾಜನಕವಾಗಿದೆ. ಹಲಸೂರು ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post